ಬೆಂಗಳೂರು, ಜು.5- ಮೂರು ದಿನಗಳ ಸುದ್ದಿ ಮತ್ತು ರೇಡಿಯೋ ನಿರೂಪಣಾ ಕೌಶಲ್ಯ ತರಬೇತಿ ಶಿಬಿರವನ್ನು ಜು.7ರಿಂದ 9ರವರೆಗೆ ಬೆಳಿಗ್ಗೆ 10ರಿಂದ ಹಮ್ಮಿಕೊಳ್ಳಲಾಗಿದೆ.
ಉದಯಭಾನು ಕಲಾಸಂಘ, ಉದಯ ಭಾನು ಉನ್ನತ ಅಧ್ಯಯನ ಕೇಂದ್ರ ಭಾಷೆ-ಸಾಹಿತ್ಯ-ಸಂಸ್ಕøತಿ ಅಧ್ಯಯನಾಂಗ ಹಾಗೂ ಆಲ್ಮಾ ಮಾಧ್ಯಮ ಶಾಲೆ ಸಹಯೋಗದಲ್ಲಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
7ರಂದು ರಾಮೃಷ್ಣಮಠ ಬಡಾವಣೆಯ ಉದಯಭಾನು ಸಾಂಸ್ಕøತಿ ಭವನದಲ್ಲಿ ಶಿಬಿರ ನಡೆಯಲಿದ್ದು, 8 ಮತ್ತು 9ರಂದು ಜಯನಗರದ ಆಲ್ಮಾ ಮಾಧ್ಯಮ ಶಾಲೆಯಲ್ಲಿ ತರಬೇತಿ ಶಿಬಿರ ನಡೆಯಲಿದೆ.
ಅಂದು ಬೆಳಿಗ್ಗೆ 10ಗಂಟೆಗೆ ತರಬೇತಿ ಶಿಬಿರವನ್ನು ಸುದ್ದಿವಾಹಿನಿ ಮುಖ್ಯಸಂಪಾದಕ ಅಜಿತ್ ಹನುಮಕ್ಕನವರ್ ಉದ್ಘಾಟಿಸಲಿದ್ದಾರೆ.
ಉದಯಭಾನು ಕಲಾಸಂಘದ ಗೌರವ ಕಾರ್ಯದರ್ಶಿ ಎಂ.ನರಸಿಂಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಭಾಷೆ-ಸಾಹಿತ್ಯ-ಸಂಸ್ಕøತಿ ಅಧ್ಯಯನಾಂಗ ಗೌ.ಡೀನ್, ನಾ. ಗೀತಾಚಾರ್ಯ, ಶಾಲೆಯ ನಿರ್ದೇಶಕ ಗೌರೀಶ್ ಅಕ್ಕಿ, ಶಿಬಿರದ ಸಂಯೋಜಕ ಡಾ. ಶೀಲಾದೇವಿ ಎಸ್. ಮಳಿಮಠ, ಕಲಾಸಂಘದ ಸಂಚಾಲಕ ಪ್ರೊ.ಶಾಂತರಾಜು ಉಪಸ್ಥಿತರಿರುವರು.
ಬೆಳಿಗ್ಗೆ 11.15ಕ್ಕೆ ಮಾತುಗಾರಿಕೆಯ ಮಹತ್ವ ಎಂಬ ವಿಷಯದ ಬಗ್ಗೆ ಗೋಷ್ಠಿಯ ನಡೆಯಲಿದೆ.
ಮಧ್ಯಾಹ್ನ 12.15ಕ್ಕೆ ಸುದ್ದಿ ಮಾಧ್ಯಮದ ನಿರೂಪಣೆ ತೆರೆಯ ಹಿಂದಿನ ತಯಾರಿ ಎಂಬ ವಿಷಯದ ಬಗ್ಗೆ ಹಾಗೂ ಮಧ್ಯಾಹ್ನ 2ಗಂಟೆಗೆ ರೇಡಿಯೋ ನಿರೂಪಣೆ 3.30ಕ್ಕೆ ಸಾರ್ವಜನಿಕರ ಭಾಷೆ ಮತ್ತು ಕಾರ್ಯಕ್ರಮ ನಿರೂಪಣೆ ಬಗ್ಗೆ ಗೋಷ್ಠಿ ನಡೆಯಲಿದೆ.
8 ಮತ್ತು 9ರಂದು ಬೆಳಿಗ್ಗೆ 10ರಿಂದ ಪ್ರಾಯೋಗಿಕ ತರಬೇತಿ ನಡೆಯಲಿದೆ.ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕøತಿ ಸಚಿವರ ಮಾಧ್ಯಮ ಸಲಹೆಗಾರ ಪಿ.ತ್ಯಾಗರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.