ಬೆಂಗಳೂರು, ಜು.5-ಕರ್ನಾಟಕ ಸ್ಟೇಟ್ ಜರ್ನಲಿಸ್ಟ್ ಯೂನಿಯನ್ ವತಿಯಿಂದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ನಾಳೆ ಬೆಳಿಗ್ಗೆ 10.35 ರೇವಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ ಎಂದು ಯೂನಿಯನ್ ಅಧ್ಯಕ್ಷ ದೇವುಲಪಲ್ಲಿ ಅಮರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಪತ್ರಿಕೋದ್ಯಮ ಕುರಿತು ವಿವಿಧ ಚರ್ಚೆ ನಡೆಸಲಾಗುವುದು ಯೂನಿಯನ್ ಯೋಜನೆಗಳನ್ನು ಕುರಿತು ಮಾತನಾಡಲಾಗುವುದು. ಸಭೆಯನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉದ್ಘಾಟಿಸಲಿದ್ದಾರೆ. ರೇವಾ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಶ್ಯಾಮ ರಾಜ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.






