ನವದೆಹಲಿ, ಜು.4- ಚುನಾವಣಾ ಪ್ರಚಾರ ಸಂದರ್ಭದಲ್ಲಿ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕವಾಗಿ ಥಳಿಸಿದ ಆರೋಪದ ಮೇಲೆ ಅಮ್ ಆದ್ಮಿ ಪಾರ್ಟಿ (ಎಎಪಿ) ಶಾಸಕ ಸೋಮದತ್ ಅವರಿಗೆ ದೆಹಲಿ ನ್ಯಾಯಾಲಯವೊಂದು 6 ತಿಂಗಳು ಜೈಲು ಮತ್ತು 2 ಲಕ್ಷ ರೂ. ಜುಲ್ಮಾನೆ ವಿಧಿಸಿದೆ.
ಜ.10, 2015ರಂದು ಚುನಾವಣಾ ಪ್ರಚಾರದ ವೇಳೆ ಸೋಮದತ್ ಮತ್ತು ಅವರ 50 ಮಂದಿ ಬೆಂಬಲಿಗರು ತಮ್ಮ ವಿರುದ್ಧ ದೂರು ನೀಡಿದ್ದ ವ್ಯಕ್ತಿಯೊಬ್ಬರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು. ಈ ಸಂಬಂಧ ದೀರ್ಘಕಾಲದಿಂದ ವಿಚಾರಣೆ ನಡೆಯುತ್ತಿತ್ತು.
ಎರಡನೆ ಮುಖ್ಯ ಹೆಚ್ಚುವರಿ ದಂಡಾಧಿಕಾರಿಯಾದ ವಿಶಾಲ್ ಸಮರ್ ಕಳೆದ ವಾರ ಶಾಸಕ ಸೋಮ್ದತ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ ಮ್ಯಾಜಿಸ್ಟ್ರೇಟ್ ಸೋಮದತ್ ಅವರಿಗೆ 6 ತಿಂಗಳು ಸೆರವಾಸ ಮತ್ತು 2 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದೆ.