ಟೀಮ್ ಇಂಡಿಯಾ ಯಾರ್ಕರ್ ಕಿಂಗ್ ಜಸ್ಪ್ರೀತ್ ಬೂಮ್ರಾ ಕ್ರಿಕೆಟ್ನ ಎಲ್ಲ ಫಾರ್ಮೆಟ್ನಲ್ಲೂ ವಿಶ್ವದ ಬೆಸ್ಟ್ ಬೌಲರ್ ಅಂತಾ ಗುರುತಿಸಿಕೊಂಡಿದ್ದಾರೆ. ಸದ್ಯ ಆಂಗ್ಲರ ನಾಡಲ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ಯರ್ಕಾರ್ ಕಿಂಗ್ ಬೂಮ್ರಾ ಸೂಪರ್ ಸ್ಪೆಲ್ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ವಿಭಿನ್ನ ಶೈಲಿಯ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್ಮನ್ಸ್ಗಳನ್ನ ಅoಟಿಜಿuse ಮಾಡೋ ಈ ಯಾರ್ಕರ್ ಕಿಂಗ್ ವಿಶ್ವ ಕ್ರಿಕೆಟ್ಗೆ ಬಂದ ಕೆಲವೇ ವರ್ಷಗಳಲ್ಲಿ ಎಲ್ಲರನ್ನ ಇಂಪ್ರೆಸ್ ಮಾಡಿದ್ರು.
2016ರಲ್ಲಿ ಬೂಮ್ರಾ ಟೀಮ್ ಇಂಡಿಯಾಗೆ ಡೆಬ್ಯು ಮಾಡುವಾಗಲೇ ಬೂಮ್ರಾ ಎಂಥ ಬೌಲರ್ ಅನ್ನೋದು ಎಲ್ಲರಿಗೂ ಗೊತ್ತಿತ್ತು.
ಇದರಂತೆ ಟೀಮ್ ಇಂಡಿಯಾ ಜೆರ್ಸಿ ತೊಟ್ಟು ಕಣಕ್ಕಿಳಿದ ಬೂಮ್ರ ತಮ್ಮ ಡೆಡ್ಲಿ ಯಾರ್ಕರ್ ಮೂಲಕ ವಿಶ್ವದ ಘಾಟಾನುಘಟಿ ಬ್ಯಾಟ್ಸ್ಮನ್ಗಳನ್ನ ನೆಲಕ್ಕುರಿಳಿಸಿದ್ದಾರೆ. ಬೂಮ್ರಾ ಆರ್ಭಟ ಹೇಗಿದೆ ಎಂದರೆ ಬೂಮ್ರಾ ತಂಡದಲ್ಲಿ ಇಲ್ಲಿದಿದ್ರೆ ಟೀಮ್ ಇಂಡಿಯಾವನ್ನ ಊಹಿಸಿಕೊಳ್ಳುವುದು ಕಷ್ಟ ವಾಗಿದೆ ಅಷ್ಟರ ಮಟ್ಟಿಗೆ ತಂಡ ಬೂಮ್ರಾನನ್ನ ನೆಚ್ಚಿಕೊಂಡಿದೆ.
ವಿಶ್ವ ಯುದ್ಧದಲ್ಲೂ ಬೂಮ್ರಾ ಬೊಂಬಾಟ್ ಸ್ಪೆಲ್
ಸದ್ಯ ಆಂಗ್ಲರ ನಾಡಲ್ಲಿ ವಿಶ್ವಕಪ್ ಆಡುತ್ತಿರುವ ಬೂಮ್ರಾ ಸೂಪರ್ ಸ್ಪೆಲ್ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಕೆಲವು ಪಂದ್ಯಗಳಲ್ಲಿ ಬೂಮ್ರಾ ವಿಕೆಟ್ ಕೀಳಲು ಪರದಾಡಿದ್ರೂ ರನ್ ವೇಗಕ್ಕೆ ಕಡಿವಾಣ ಹಾಕಿ ತಂಡಕ್ಕೆ ಗೆಲುವಿನ ದಾರಿ ತೋರಿಸುತ್ತಿದ್ದಾರೆ.
ವಿಶ್ವಕಪ್ನಲ್ಲಿ ಬೂಮ್ರಾ ಸಾಧನೆ
ಪಂದ್ಯ 7
ವಿಕೆಟ್ 14
ಮೇಡನ್ 6
ಬೆಸ್ಟ್ 55/ 4
ವಿಶ್ವಕಪ್ನಲ್ಲಿ 7 ಪಂದ್ಯಗಳನ್ನಾಡಿರುವ ಜಸ್ಪ್ರೀತ್ ಬೂಮ್ರಾ 14 ವಿಕೆಟ್ ಪಡೆದಿದ್ದಾರೆ. 6 ಮೇಡನ್ ಮಾಡಿರುವ ಬೂಮ್ರಾ 55 ರನ್ಗೆ 4 ವಿಕೆಟ್ ಪಡೆದಿದ್ದು ಬೆಸ್ಟ್ ಸ್ಪೆಲ್ ಆಗಿದೆ.
ಡೆಡ್ಲಿ ಯಾರ್ಕರ್ ಬಗ್ಗೆ ರಿವೀಲ್ ಮಾಡಿದ ಯಾರ್ಕರ್ ಕಿಂಗ್
ಜಸ್ಪ್ರೀತ್ ಬೂಮ್ರಾ ಮೊನ್ನೆ ಬಾಂಗ್ಲಾ ವಿರುದ್ದದ ಪಂದ್ಯದಲ್ಲಿ ಆರಂಭದಲ್ಲಿ ವಿಕೆಟ್ ಕೀಳಲು ಪರದಾಡಿದ್ರು. ನಂತರ ಡೆತ್ ಓವರ್ಗಳಲ್ಲಿ ರೂಬೆಲ್ ಹುಸೇನ್ ಮತ್ತು ಮುಸ್ತಾಫಿಜುರು ರೆಹಮಾನ್ಗೆ ಯಾರ್ಕರ್ ಹಾಕಿ ತಂಡಕ್ಕೆ 28 ರನ್ಗಳ ರೋಚಕ ಗೆಲುವು ತಂದುಕೊಟ್ರು. ಕೊನೆಯಲ್ಲಿ ಬೂಮ್ರಾ ಹಾಕಿದ ಯಾರ್ಕರ್ ಎಲ್ಲರ ಗಮನ ಸೆಳೆದಿದೆ.
ಬಾಂಗ್ಲಾ ವಿರುದ್ಧ ಡೆಡ್ಲಿ ಯಾರ್ಕರ್ ಹಾಕಿದ್ದರ ಬಗ್ಗೆ ಸ್ವತಃ ಬೂಮ್ರಾ ರಿವೀಲ್ ಮಾಡಿದ್ದಾರೆ…
ಡೆಡ್ಲಿ ಯಾರ್ಕರ್ ಹಾಕಿ ವಿಶ್ವಕಪ್ ತಂದುಕೊಡ್ತಾರಾ ಬೂಮ್ರಾ ?
ಕೊಹ್ಲಿ ಸೈನ್ಯ ಈ ಬಾರಿಯ ವಿಶ್ವಕಪ್ ಗೆಲ್ಲುವ ಫೇವಿರಿಟ್ ತಂಡಗಳ ಪೈಕಿ ಒಂದಾಗಿದೆ. ಇದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ ಕೂಡ ಇದೇ ಆಗಿದೆ. ಅದರಲ್ಲೂ ಜಸ್ಪ್ರೀತ್ ಬೂಮ್ರಾ ವಿಶ್ವಕಪ್ ಗೆಲ್ಲಿಸಿ ಕೊಡ್ತಾರಾ ಅಂತ ಆಸಿಸ್ ಮಾಜ ನಾಯಕ ಮೈಕಲ್ ಕ್ಲಾರ್ಕ್ ಭವಿಷ್ಯಾ ನುಡಿದಿದ್ದಾರೆ.ಯಾಕಂದ್ರೆ ಬೂಮ್ರಾ ಕೆಲವು ತಿಂಗಳ ಹಂದೆ ನಡೆದ ಐಪಿಎಲ್ನ ಪಂದ್ಯದಲ್ಲಿ ಬೂಮ್ರಾ ಚಾಂಪಿಯನ್ ಆಗುವ ನಿಣಾರ್ಯಕ ಪಾತ್ರವಹಿಸಿದ್ರು. ಹೀಗಾಗಿ ವಿಶ್ವಕಪ್ನ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯದಲ್ಲೂ ಬೂಮ್ರಾ ಸೂಪರ್ ಸ್ಪಲೆ್ ಮಾಡಿದ್ರೆ ಟೀಮ್ ಇಂಡಿಯಾ ಗೆಲ್ಲೋದ್ರಲ್ಲಿ ಅನುಮಾನವೇ ಇಲ್ಲ .