ಬರ್ಮಿಂಗ್ಹ್ಯಾಮ್: ವಿಶ್ವಕಪ್ನಲ್ಲಿ ಇಂದು ಟೀಮ್ ಇಂಡಿಯಾ ಬಾಂಗ್ಲಾದೇಶ ತಂಡವನ್ನ ಎದುರಿಸಲಿದೆ. ಬರ್ಮಿಂಗ್ಹ್ಯಾಮ್ನ ಎಜ್ಬಸ್ಟನಲ್ಲಿ ಅಂಗಳದಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಸೆಮಿಫೈನಲ್ ಸನಿಹದಲ್ಲಿರುವ ಟೀಮ್ ಇಂಡಿಯಾ ಮೊನ್ನೆ ಆಂಗ್ಲರ ವಿರುದ್ದ ಸೋತು ಭಾರೀ ಮುಖಭಂಗ ಅನುಭವಿಸಿತ್ತು. ಇದೀಗ ಗೆಲ್ಲಲ್ಲೇಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದು ಒಂದು ಪಂದ್ಯ ಬಾಕಿ ಇರುವಾಗಲೇ ಸೆಮಿ ತಲುಪಿ ಒತ್ತಡವನ್ನ ಕಡಿಮೆ ಮಾಡಿಕೊಳ್ಳಬೇಕಿದೆ.
ಇತ್ತ ಮೊತಾಜಾ ಪಡೆ ಟೂರ್ನಿಯಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದು ತಂಡದ ಅನುಭವಿ ಆಟಗಾರ ಶಕೀಬ್ ಅಲ್ ಹಸನ್ ಮೇಲೆ ಇಡೀ ತಂಡ ನಂಬಿಕೊಂಡಿದೆ.
ಬಾಂಗ್ಲಾ ತಂಡ ಕೂಡ ಸೆಮಿಫೈನಲ್ ಕನಸು ಕಾಣುತ್ತಿದ್ದು ಭಾರತ ವಿರುದ್ಧದ ಪಂದ್ಯ ಅಗ್ನಿ ಪರೀಕ್ಷೆಯಾಗಿದೆ. ರನ್ ಹೊಳೆ ಹರಿಯುವ ಎಜ್ಬಾಸ್ಟನ್ ಅಂಗಳದಲ್ಲಿ ಟಾಸ್ ನಿರ್ಣಾಯಕ ಪಾತ್ರವಹಿಸಲಿದೆ.