ನವದೆಹಲಿ, ಜು.2-ಆರ್ಥಿಕ ಅಪರಾಧಗಳ ಮತ್ತು ವಂಚಕ ಸಂಸ್ಥೆಗಳ ವಿರುದ್ಧ ಬಲವಾದ ಛಾಟಿ ಬೀಸುತ್ತಿರುವ ಜಾರಿ ನಿರ್ದೇಶನಾಲಯ(ಎನ್‍ಪೋರ್ಸ್‍ಮೆಂಟ್ ಡೈರೆಕ್ಟೋರೇಟ್-ಇಡಿ) ಉತ್ತರ ಪ್ರದೇಶದ ಸಿಂಭೋಲಿ ಸಕ್ಕರೆ ಕಾರ್ಖಾನೆಯ 110 ಕೋಟಿ ರೂ.ಗಳ ಆಸ್ತಿ-ಪಾಸ್ತಿಯನ್ನು ಜಪ್ತಿ ಮಾಡಿದೆ.
ಸಿಂಭೋಲಿ ಸಕ್ಕರೆ ಕಾರ್ಖಾನೆಯ ದೇಶದ ಬೃಹತ್ ಶುಗರ್ ಮಿಲ್ಸ್‍ಗಳಲ್ಲಿ ಒಂದಾಗಿದೆ. ಉತ್ತರ ಪ್ರದೇಶದ ಹಪುರ್‍ನ ಸಿಂಭೋಲಿಯಲ್ಲಿರುವ ಈ ಸಕ್ಕರೆ ಗಿರಣಿ ಬ್ಯಾಂಕ್‍ನಿಂದ ಕೋಟ್ಯಂತರ ರೂ.ಗಳ ಸಾಲ ಪಡೆದು ವಂಚಿಸಿದೆ ಹಾಗೂ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿದ್ದ ಇಡಿ ಈಗ ಕಾರ್ಖಾನೆಯ 110 ಕೋಟಿ ರೂ.ಗಳ ಆಸ್ತಿ-ಪಾಸ್ತಿಗಳನ್ನು ವಶಪಡಿಸಿಕೊಂಡಿದೆ.
ಸಕ್ಕರೆ ಗಿರಣಿಗೆ ಸೇರಿದ ಭೂಮಿ, ಕಟ್ಟಡಗಳು, ಘಟಕ, ಡಿಸ್ಟಿಲ್ಲರಿ ಘಟಕದ ಯಂತ್ರೋಪಕರಣಗಳೂ ಸೇರಿದಂತೆ ವಿವಿಧ ಸ್ವತ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಇಡಿ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.