ಅತಂತ್ರದ ಭೀತಿಯಲ್ಲಿ ಮೈತ್ರಿ ಸರ್ಕಾರ: ಅಪ್ಪ-ಮಕ್ಕಳ ಮೇಲೆ ಮುನಿಸಿಕೊಂಡರಾ ಸಿದ್ದರಾಮಯ್ಯ?;

ಬೆಂಗಳೂರು : ಕಾಂಗ್ರೆಸ್ಪಕ್ಷದ ಇಬ್ಬರು ಶಾಸಕರು ರಾಜೀನಾಮೆ ನೀಡಿರುವುದರಿಂದ ಮೈತ್ರಿ ಸರ್ಕಾರದ ನಾಯಕರಿಗೆ ತಲೆನೋವು ಶುರುವಾಗಿದೆ. ಅತ್ತ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಅಮೆರಿಕ ಪ್ರವಾಸದಲ್ಲಿರುವಾಗಲೇ ರಾಜ್ಯದಲ್ಲಿ ಹಲವಾರು ರಾಜಕೀಯ ಬೆಳವಣಿಗೆಗಳು ನಡೆದಿವೆ. ಇನ್ನೊಂದೆಡೆ ಅಪ್ಪಮಕ್ಕಳ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುನಿಸಿಕೊಂಡಿದ್ದು, ಮೈತ್ರಿ ಪಕ್ಷವನ್ನು ಉಳಿಸಿಕೊಳ್ಳಲು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂಬ ಮಾತು ಕೇಳಿಬರುತ್ತಿವೆ.

ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರು ಮತ್ತು ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಮೇಲೆ ಮುನಿಸಿಕೊಂಡಿದ್ದಾರೆ. ದೇವೇಗೌಡರ ಇತ್ತೀಚಿನ ವರ್ತನೆಗಳಿಗೆ ಸಿದ್ದರಾಮಯ್ಯ ಬೇಸತ್ತಿದ್ದಾರೆ ಎಂಬ ವಿಷಯ ಬಹಿರಂಗವಾಗಿದೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಮತ್ತು ಸಚಿವ ಡಿ.ಕೆ. ಶಿವಕುಮಾರ್​ ಭೇಟಿ ಸಂದರ್ಭದಲ್ಲೂ ಈ ಬಗ್ಗೆ ಸಿದ್ದರಾಮಯ್ಯ ಬೇಸರ ಹೊರಹಾಕಿದ್ದರು.

ತಮ್ಮ ರಾಜಕೀಯ ಗುರುವಾದ ದೇವೇಗೌಡರ ಮೇಲೆ ಸಿದ್ದರಾಮಯ್ಯ ಮುನಿಸಿಕೊಳ್ಳಲು ಕಾರಣವೂ ಇದೆ. ಇದುವರೆಗೂ 6 ಬಾರಿ ಆಪರೇಷನ್ ಕಮಲ ನಡೆದಿದೆ. ಆಪರೇಷನ್ ಕಮಲ ಸಂದರ್ಭದಲ್ಲಿಕೊನೇ ಕ್ಷಣದಲ್ಲಿ ಕಸರತ್ತು ನಡೆಸಿ ಸರ್ಕಾರ ಉಳಿಸಿದ್ದು ಇದೇ ಸಿದ್ದರಾಮಯ್ಯ. ಆದರೆ, ಕೆಲಸ ಆದಮೇಲೆ ತಮ್ಮ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ ಎಂದು ಬಹಿರಂಗವಾಗಿಯೇ ಸಿದ್ದರಾಮಯ್ಯ ಆರೋಪ ಮಾಡಿದ್ದರು. ಸಾರ್ವಜನಿಕವಾಗಿ‌ ಸಿದ್ದರಾಮಯ್ಯ ಮೈತ್ರಿ ಸರ್ಕಾರದ ವಿಲನ್ ಎಂದು ಬಿಂಬಿಸಿರುವುದಕ್ಕೂ ಅವರು ಕೋಪಗೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ