ಬೆಂಗಳೂರು,ಜು.1- ಸಮಾಜದ ಏಳ್ಗೆಗೆ ಸದಾ ಶ್ರಮಿಸುತ್ತಿರುವ ಪತ್ರಿಕೆಗಳು ನಾಡಿನ ಒಳಿತಿಗೆ ಇರುವ ಬೆಳಕು. ಅಂತಹ ಬೆಳಕನ್ನು ಕೊಟ್ಟ ಎಲ್ಲ ಪತ್ರಕರ್ತರಿಗೆ ಪತ್ರಿಕಾ ದಿನಾಚರಣೆಯ ಶುಭಾಶಯ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೋರಿದ್ದಾರೆ.
ಸಮಾಜ ಹಾಗೂ ಸರ್ಕಾರದ ನಡುವೆ ಇರುವ ಮಹತ್ವದ ಕೊಂಡಿಗಳು ಪತ್ರಿಕೆಗಳು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.