ಕೋಲಾರ,ಜು.1- ಶಾಸಕ ಆನಂದ್ ಸಿಂಗ್ ಅವರು ನೇರವಾಗಿ ನನಗೆ ರಾಜೀನಾಮೆ ಕೊಟ್ಟಿಲ್ಲ. ಆದರೆ ತಮ್ಮ ಸಹಾಯಕರಿಗೆ ರಾಜೀನಾಮೆ ಪತ್ರವನ್ನು ಕೊಟ್ಟಿದ್ದಾರೆಯೋ ಇಲ್ಲವೋ ಗೊತ್ತಿಲ್ಲ ಎಂದು ವಿಧಾನಸಭೆ ಸಭಾಧ್ಯಕ್ಷ ರಮೇಶ್ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ರಾಜೀನಾಮೆ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿನ್ನೆ ರಾತ್ರಿಯಿಂದ ಮನೆಯಲ್ಲೇ ಇದ್ದೆ. ಇದುವರೆಗೂ ಯಾವ ಶಾಸಕರೂ ಬಂದು ರಾಜೀನಾಮೆ ಕೊಟ್ಟಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದವರಾರು ರಾಜೀನಾಮೆ ಕೊಡಲಿ, ಬಿಜೆಪಿಯವರಾದರೂ ರಾಜೀನಾಮೆ ಕೊಡಲಿ. ತಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.
ತಮ್ಮನ್ನು ಯಾರು ಸಂಪರ್ಕ ಮಾಡಿಲ್ಲ ಎಂದ ಅವರು, ಸುದ್ದಿ ಸತ್ಯವಲ್ಲ. ಸತ್ಯ ಸುದ್ದಿ ಅಲ್ಲ. ಆನಂದ್ ಸಿಂಗ್ ಬಂದಿಲ್ಲ, ಬೇರೆಯವರು ಬಂದಿಲ್ಲ. ಗೊಂದಲಗಳಿದ್ದರೆ ತಿಳಿಗೊಳಿಸಿ ಎಂದು ಹೇಳಿದರು.