ಬರ್ಮಿಂಗ್ಹ್ಯಾಮ್ನಲ್ಲಿ ಅಬ್ಬರಿಸಿದ ಜಾನಿ ಬೇರ್ ಸ್ಟೋ ಅಬ್ಬರ :ವಿಶ್ವಕಪ್ನಲ್ಲಿ ಚೊಚ್ಚಲ ಶತಕ ಬಾರಿಸಿದ ಡ್ಯಾಶಿಂಗ್ ಓಪನರ್

ಇಂಗ್ಲೆಂಡ್ ತಂಡದ ಡ್ಯಾಶಿಂಗ್ ಓಪನರ್ ಜಾನಿ ಬೇರ್ಸ್ಟೊ ಕೊನೆಗೂ ಶತಕ ಬಾರಿಸಿ ಅಬ್ಬರಿಸಿದ್ದಾರೆ. ನಿನ್ನೆ ಬರ್ಮಿಂಗ್ಹ್ಯಾಮ್ನಲ್ಲಿ ಅಂಗಳದಲ್ಲಿ ಟೀಮ್ ಇಂಡಿಯಾದ ವಿರುದ್ಧದ ನಡೆದ ಡು ಆರ್ ಡೈ ಮ್ಯಾಚ್ನಲ್ಲಿ ಜಾನಿ ಬೇರ್ ಸ್ಟೊ ಸಿಡಿಲಬ್ಬರ್ ಬ್ಯಾಟಿಂಗ್ ಮಾಡಿದ್ರು.

ಟೂರ್ನಿಯಲ್ಲಿ  ಬ್ಯಾಟಿಂಗ್ ಮಾಡಿರುವ ಈ ಆಂಗ್ಲ ಬ್ಯಾಟ್ಸ್ಮನ್ ಕಳೆದ ಎರಡು ಪಂದ್ಯಗಳಿಂದ ಫ್ಲಾಪ್ ಆಗಿದ್ರು.ಟೀಮ್ ಇಂಡಿಯಾ ವಿರುದ್ಧ ರನ್ ಹೊಳೆ ಹರಿಸಿ ತಂಡಕ್ಕೆ ಸಾಲಿಡ್ ಓಪನಿಂಗ್ ಕೊಟ್ರು. ಜಾಸೆನ್ ರಾಯ್ ಜೊತೆ ಓಪನರ್ರಾಗಿ ಕಣಕ್ಕಿಳಿದ ಜಾನಿ ಬೇರ್ ಸ್ಟೊ ಆರಂಭದಲ್ಲೆ ಟೀಮ್ ಇಂಡಿಯಾ ಬೌಲರ್ಸ್ಗಳನ್ನ ಮನಬಂದಂತೆ ಚೆಂಡಾಡಿದ್ರು.

 

 

 

 

 

 

 

 

 

 

 

 

 

 

 

ಬೆರಿಸ್ಟೊ ಅಬ್ಬರ ಟೀಮ್ ಇಂಡಿಯಾ ಬೌಲರ್ಸ್ಗಳು ತತ್ತರ
ಟಾಸ್ ಸೋತು ಫೀಲ್ಡಿಂಗ್ ಇಳಿದ ಕೊಹ್ಲಿ ಸೈನ್ಯಕ್ಕೆ ನಿರಾಸೆ ಕಾದಿತ್ತು. ಓಪನರ್ ಜಾನಿ ಬೇರ್ ಸ್ಟೋ ಟೀಮ್ ಇಂಡಿಯಾ ಬೌಲರ್ಸ್ಗಳನ್ನ ಚೆಂಡಾಡಿದ್ರು. ಜೆಸನ್ ಜೊತೆಗೂಡಿ ಮೊದಲ ವಿಕೆಟ್ಗೆ ಬರೋಬ್ಬರಿ 160 ರನ್ಗಳ ಜೊತೆಯಾಟ ನೀಡಿದ್ರು. ಟೀಮ್ ಇಂಡಿಯಾ ಅಟ್ಯಾಕನ್ನ ಉಡೀಸ್ ಮಾಡಿದ ಈ ಇಂಗ್ಲೆಂಡ್ ಓಪನರ್ 56 ಎಸೆತದಲ್ಲಿ ಅರ್ಧ ಶತಕ ಬಾರಿಸಿದ್ರು.

ನಂತರವೂ ಬಿರುಸಿನ ಬ್ಯಾಟಿಂಗ್ ಮಾಡಿದ ಬೇರ್ ಸ್ಟೊ 90 ಎಸೆತದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ್ರು. ಇದರೊಂದಿಗೆ ಏಕದಿನ ಕ್ರಿಕೆಟ್ನಲ್ಲಿ 8ನೇ ಏಕದಿನ ಶತಕ ಬಾರಿಸಿದ ಸಾಧನೆ ಮಾಡಿದ್ರು.

ವಿಶ್ವಕಪ್ನಲ್ಲಿ ಚೊಚ್ಚಲ ಶತಕ ಬಾರಿಸಿದ ಇಂಗ್ಲೆಂಡ್ ಓಪನರ್
ಟೀಮ್ ಇಂಡಿಯಾ ವಿರುದ್ಧ ಶತಕ ಬಾರಿಸಿದ ಜಾನಿ ಬೇರ್ ಸ್ಟೊ ವಿಶ್ವಕಪ್ನಲ್ಲಿ ಚೊಚ್ಚಲ ಶತಕ ಬಾರಿಸಿದ ಸಾಧನೆ ಮಾಡಿದ್ರು. ಇದರೊಂದಿಗೆ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ವಿರುದ್ಧ ಶತಕ ಬಾರಿಸಿದ ಇಂಗ್ಲೆಂಡ್ ತಂಡದ ಮೊದಲ ಬ್ಯಾಟ್ಸ್ಮನ್ ಎಂಬ ಗೌರವಕ್ಕೆ ಪಾತ್ರರಾದ್ರು.

ಒಟ್ಟು 109 ಎಸೆತ ಎದುರಿಸಿದ ಜಾನಿ ಬೇರ್ ಸ್ಟೊ 111 ರನ್ ಕಲೆ ಹಾಕಿದ್ರು. 10 ಬೌಂಡರಿ 6 ಸಿಕ್ಸರ್ ಬಾರಿಸಿ 101.83 ಸ್ಟ್ರೈಕ್ ರೇಟ್ ಪಡೆದ್ರು.
ಒಟ್ಟಾರೆ ಜಾನಿ ಬೇರ್ ಸ್ಟೋ ಅಬ್ಬರಿಸಿದ್ದು ಕೊಹ್ಲಿ ಸೈನ್ಯಕ್ಕೆ ದೊಡ್ಡ ತಲೆ ನೋವಾದ್ರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ