ಬೆಂಗಳೂರು, ಜು.1- ನಾನು ಯಾವುದೇ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿಲ್ಲ. ಆನಂದ್ಸಿಂಗ್ ರಾಜೀನಾಮೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಕಾಂಗ್ರೆಸ್ನ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮನೆಯಲ್ಲೇ ಇದ್ದೇನೆ. ಆದರೂ ಬಿ.ಸಿ.ಪಾಟೀಲ್ ರಾಜೀನಾಮೆ ಎಂಬ ಸುದ್ದಿಗಳು ಹರಡಿವೆ. ನಾನು ರಾಜೀನಾಮೆ ಕೊಡುವುದಿಲ್ಲ. ಯಾವುದೇ ಭಿನ್ನಮತೀಯ ಸಭೆಗಳಲ್ಲೂ ನಾನು ಭಾಗವಹಿಸಿಲ್ಲ. ಭಾಗವಹಿಸುವುದೂ ಇಲ್ಲ. ಸಚಿವ ಸ್ಥಾನ ಸಿಗದೇ ಇರುವುದಕ್ಕೆ ನನಗೆ ಬೇಸರವಾಗಿದೆ. ಹಾಗೆಂದು ಭಿನ್ನಮತೀಯ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದರು.
ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ನಾನು ಕೈ ಜೋಡಿಸಿಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಿಪಡಿಸಿದರು.