ಬೆಂಗಳೂರು,ಜು.1- ಶಾಸಕರ ರಾಜೀನಾಮೆಯ ಮಾಸ್ಟರ್ ಮೈಂಡ್ ತಾವಲ್ಲ ಎಂದು ಶಾಸಕ ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ಕೋಲ್ಕತ್ತ ಪ್ರವಾಸ ಕೈಗೊಳ್ಳುವ ಮುನ್ನ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆಯ ಮಾಸ್ಟರ್ ಮೈಂಡ್ ತಾವು ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಅಲ್ಲಗೆಳೆದರು.
ಜೆಡಿಎಸ್‍ನ ನಾಲ್ಕೈದು ಶಾಸಕರು ರಾಜೀನಾಮೆ ನೀಡಲಿದ್ದಾರೆಂಬ ವದಂತಿಯ ಬಗ್ಗೆ ಗಮನಸೆಳೆದಾಗ ರಾಜೀನಾಮೆಗೂ ತಮಗೂ ಸಂಬಂಧವಿಲ್ಲ ಎಂದು ಹೇಳಿದರು.
ಶಾಸಕರ ರಾಜೀನಾಮೆ ವಿಚಾರ ಎಷ್ಟು ನಿಜವೋ ಎಂಬುದು ಕೂಡ ತಮಗೆ ಗೊತ್ತಿಲ್ಲ. ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ವಿಶ್ವನಾಥ್ ತಿಳಿಸಿದರು.