ಟೀಮ್ ಇಂಡಿಯಾದ ಸ್ಪೀಡ್ ಸ್ಟಾರ್ ಮೊಹ್ಮದ್ ಶಮಿ ಈಗ ಭರ್ಜರಿ ಫಾರ್ಮ್ನಲ್ಲಿದ್ದಾರೆ. ವಿಶ್ವಕಪ್ನಲ್ಲಿ ಆಡಿದ ಎರಡೇ ಪಂದ್ಯಗಳಲ್ಲಿ ವಿಕೆಟ್ಗಳ ಗೊಂಚಲು ಬಾಚಿ ಇಡೀ ಕ್ರಿಕೆಟ್ ಜಗತ್ತೆ ತನ್ನತ್ತ ನೋಡುವಂತೆ ಮಾಡಿದ್ದಾರೆ.
ಕಳೆದೆರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲುವಿನ ನಾಗಲೋಟ ಮುಂದುವರೆಸಿದ್ರೆ ಇದರಲ್ಲಿ ವೇಗಿ ಶಮಿ ಪಾಲು ಕೂಡ ಇದೆ. ವಿಶ್ವ ಯುದ್ದದ ಆರಂಭದ ಮೂರು ಪಂದ್ಯಗಳಿಂದ ಆಡುವ ಅವಕಾಶದಿಂದ ವಂಚಿತರಾಗಿದ್ದ ಈ ಬೆಂಗಾಲಿ ಬೌಲರ್ ಅಫ್ಘಾನ್ ವಿರುದ್ಧಧ ಪಂದ್ಯದಲ್ಲಿ ಕಮಾಲ್ ಮಾಡಿದ್ರು.
ರೋಚಕ ಪಂದ್ಯ ಗೆದ್ದು ಕೊಟ್ಟ ಹ್ಯಾಟ್ರಿಕ್ ವೀರ ಶಮಿ
ಸೌಥಾಂಪ್ಟನ್ನಲ್ಲಿ ಕ್ರಿಕೆಟ್ ಶಿಶು ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ತಿಣುಕಾಡಿ ಗೆದ್ದಿತ್ತು. ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕೊನೆಯ ಓವರ್ನಲ್ಲಿ ಶಮಿ ಹ್ಯಾಟ್ರಿಕ್ ವಿಕೆಟ್ ಪಡೆದು ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ರು. ಇದರೊಂದಿಗೆ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆಯನ್ನ ಮಾಡಿದ್ರು.
ಜೊತೆಗೆ ವಿಶ್ವಕಪ್ನಲ್ಲಿ ಈ ಸಾಧನೆ ಮಾಡಿದ ಎರಡನೇ ಭಾರತೀಯ ಬೌಲರ್ ಎಂಬ ಹಿರಿಮೆಗೂ ಪಾತ್ರರಾದ್ರು. ಒಟ್ಟು 4 ವಿಕೆಟ್ ಪಡೆದು ಮಿಂಚಿದ್ರು.
ಕೆರಿಬಿಯನ್ನರೆದುರು ಜಬರ್ದಸ್ತ್ ಬೌಲಿಂಗ್ ಮಾಡಿದ ಬೆಂಗಾಲಿ ಬೌಲರ್.
ಅಫ್ಘಾನ್ ಪಂದ್ಯವನ್ನ ಗೆಲ್ಲಿಸಿಕೊಟ್ಟಿದ್ದ ಮೊಹ್ಮದ್ ಶಮಿ ವಿಂಡೀಸ್ ವಿರುದ್ದವೂ ಇದೇ ಪರ್ಫಾಮನ್ಸ್ ಮುಂದುವರೆಸಿದ್ರು. ಟೀಮ್ ಇಂಡಿಯಾ ನೀಡಿದ್ದ 269 ರನ್ಗಳ ಟಾರ್ಗೆಟನ್ನ ಸುಲಭವಾಗಿ ಚೇಸ್ ಮಾಡುವ ಲೆಕ್ಕಾಚಾರದಲ್ಲಿತ್ತು. ಆದರೆ ಆರಂಭದಲ್ಲೆ ದಾಳಿಗಿಳಿದ ಶಮಿ ಓಪನರ್ ಕ್ರಿಸ್ ಗೇಲ್ ಮತ್ತು ಶಾಯ್ ಹೋಪ್ ವಿಕೆಟ್ ಪಡೆದು ಶಾಕ್ ಕೊಟ್ರು. ನಂತರ ಶಿಮ್ರಾನ್ ಹೇಟ್ಮರ್ ಒಟ್ಟು ನಾಲ್ಕು ವಿಕೆಟ್ ಪಡೆದು ವಿಂಡೀಸ್ ತಂಡವನ್ನ ಕಡಿಮೆ ಮೊತ್ತಕ್ಕೆ ಆಲೌಟ್ ಆಗುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ರು.
ವಿಶ್ವಕಪ್ನಲ್ಲಿ ಶಮಿ ಸಾಧನೆ
ಈ ಬಾರಿಯ ವಿಶ್ವಕಪ್ನಲ್ಲಿ 2 ಪಂದ್ಯಗಳನ್ನಾಡಿರುವ ಮೊಹ್ಮದ್ ಶಮಿ 8 ವಿಕೆಟ್ ಪಡೆದು ಮಿಂಚಿದ್ದಾರೆ. ಕೇವಲ 16 ರನ್ಗಳಿಗೆ 4 ವಿಕೆಟ್ ಪಡೆದಿರೋದು ಬೆಸ್ಟ್ ಸ್ಪೆಲ್ ಆಗಿದೆ.
ಒಂದುವರೆ ವರ್ಷ ವನವಾಸ ಅನುಭವಿಸಿದ ಸ್ಪೀಡ್ ಸ್ಟಾರ್
ಒಂದು ವರೆ ವರ್ಷದ ಹಿಂದೆ ಸ್ಪೀಡ್ ಶಮಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ . ಶಾಂತವಾಗಿದ್ದ ಶಮಿ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು. ಪತ್ನಿ ಹಸಿನ್ ಜಹನ್ ಜೊತೆ ಶಮಿ ವಿರಸ ಅನುಭವಿಸಿದ್ರು. ದಾಂಪತ್ಯದಲ್ಲಿ ಬಿರುಕು ಕಂಡ ಹಿನ್ನೆಲೆಯಲ್ಲಿ ಶಮಿ ಮಾನಸಿಕವಾಗಿ ಕುಗ್ಗಿ ಹೋಗಿದ್ರು. ಜೊತೆಗೆ ಫಿಟ್ನೆಸ್ನಲ್ಲೂ ಫೇಲ್ ಆಗಿ ತಂಡದಲ್ಲಿ ಸ್ಥಾನ ಪಡೆಯದೇ ನಿರಾಸೆ ಅನುಭವಿಸಿದ್ರು.
ಇದೀಗ ವನವಾಸವನ್ನೆಲ್ಲ ಅನುಭವಿಸಿ ಫಾರ್ಮ್ಗೆ ಮರಳಿರುವ ಶಮಿ ಇಂದು ವಿಶ್ವಯುದ್ದದಲ್ಲಿ ಸೂಪರ್ ಸ್ಪೆಲ್ ಮ್ಯಾಚ್ ವಿನ್ನರ್ರಾಗಿ ಹೊರ ಹೊಮ್ಮಿದ್ದಾರೆ.
ಯಶಸ್ಸು ನನಗೆ ಸೇರಬೇಕು
ಯಶಸ್ಸು ಬೇರೆ ಯಾರಿಗೂ ಅಲ್ಲ ನನಗೆ ಸಲ್ಲಬೇಕು. ಕಳೆದ 18 ತಿಂಗಳಿನಲ್ಲಿ ನಾನೊಬ್ಬನೆ ಕಷ್ಟಗಳನ್ನ ಎದುರಿಸಿದ್ದು . ಎಲ್ಲ ಕಷ್ಟಗಳನ್ನ ಎದುರಿಸಿ ಗೆಲ್ಲಲು ಶಕ್ತಿ ಕೊಟ್ಟ ದೇವರಿಗೆ ಧನ್ಯವಾದ ಹೇಳುತ್ತೇನೆ. ಈ ಕಾರಣಕ್ಕಾಗಿ ಯಶಸ್ಸೆಲ್ಲ ನನಗೆ ಸೇರಬೇಕು. ಸೂಪರ್ ಸ್ಪೆಲ್ ಮಾಡಿರುವ ಶಮಿ ತಮ್ಮ ಸಕ್ಸಸ್ ಬಗ್ಗೆ ಮಾತನಾಡಿದ್ದಾರೆ.
ಒಟ್ಟಾರೆ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿರುವ ವೇಗಿ ಶಮಿ ಎದುರಾಳಿ ಬ್ಯಾಟ್ಸ್ಮನ್ಗಳನ್ನ ಧ್ವಂಸ ಗೊಳಿಸಿ ವಿಶ್ವಕಪ್ ಗೆದ್ದುಕೊಡಲಿ ಅನ್ನೋದೇ ಅಭಮಾನಿಗಳ ಆಶಯವಾಗಿದೆ