ನವದೆಹಲಿ, ಜೂ.28- ಕಳೆದ ಮೂರು ವರ್ಷಗಳಲ್ಲಿ(2016ರಿಂದ) 15 ಫೈಟರ್ ಜೆಟ್ಗಳು ಮತ್ತು ಹೆಲಿಕಾಪ್ಟರ್ಗಳೂ ಸೇರಿದಂತೆ ಭಾರತೀಯ ವಾಯು ಪಡೆಯ(ಐಎಎಫ್) ಒಟ್ಟು 27 ವಿಮಾನಗಳು ಪತನಗೊಂಡಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಲೋಕಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಂಕಿ ಅಂಶನೀಡಿದ್ದಾರೆ. 2016-17ರಲ್ಲಿ ಐಎಎಫ್ನ ನಾಲ್ಕು ಯುದ್ಧವಿಮಾನಗಳು, ತಲಾ ಒಂದೊಂದು ಹೆಲಿಕಾಪ್ಟರ್, ಸರಕು ಸಾಗಣೆ ಮತ್ತು ತರಬೇತಿ ವಿಮಾನಗಳು ಅಪಘಾತಕ್ಕೀಡಾಗಿವೆ. 2017-18ರಲ್ಲಿ ಎರಡು ಫೈಟರ್ ಜೆಟ್ಗಳು, ಎರಡು ಹೆಲಿಕಾಪ್ಟರ್ಗಳು ಮತ್ತು ಒಂದು ತರಬೇತಿ ವಿಮಾನ ಪತನಗೊಂಡಿದೆ. 2018-19ರಲ್ಲಿ ಈ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಈ ವರ್ಷದಲ್ಲಿ ಏಳು ಫೈಟರ್ ಜೆಟ್ಗಳು, ಎರಡು ಹೆಲಿಕಾಪ್ಟರ್ಗಳು ಮತ್ತು ಎರಡು ತರಬೇತಿ ವಿಮಾನಗಳು ಅಪಘಾತಕ್ಕೀಡಾಗಿವೆ ಎಂದು ಅವರು ತಿಳಿಸಿದ್ದಾರೆ.
ಫೆಬ್ರವರಿ 27ರಂದು ಪಾಕಿಸ್ತಾನ ವಾಯಪಡೆಯೊಂದಿಗೆ ಸೆಣಸಾಟದಲ್ಲಿ ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ತಮಾನ್ ಅವರು ಚಾಲನೆ ಮಾಡುತ್ತಿದ್ದ ಮಿಗ್-21 ಪೈಟರ್ ಜೆಟ್ ಹಾಗೂ ಅರುಣಾಚಲ ಪ್ರದೇಶದಲ್ಲಿ ಜೂನ್ 3ರಂದು 13 ವಾಯುಪಡೆಯ ಸಿಬ್ಬಂದಿ ಇದ್ದ ಎನ್ಎನ್-32 ವಿಮಾನವೂ ಸೇರಿದೆ.
2015-16ರ ಅವಧಿಯಲ್ಲಿ 19 ಫೈಟರ್ ಜೆಟ್ಗಳೂ ಸೇರಿದಂತೆ ಎಎಎಫ್ನ ಒಟ್ಟು 33 ಮಾನಗಳು ಪತನಗೊಂಡಿದೆ ಎಂದು ರಾಜನಾತ್ ಸಿಂಗ್ ತಿಳಿಸಿದ್ದಾರೆ.