ಮಲಗಿದ್ದವರ ಮೇಲೆ ಹರಿದ ಕಾರು-ಘಟನೆಯಲ್ಲಿ ಮೂವರು ಮಕ್ಕಳ ಸಾವು

ಪಾಟ್ನಾ, ಜೂ.26- ಫುಟ್ ಪಾತ್‍ನಲ್ಲಿ ಮಲಗಿದ್ದವರ ಮೇಲೆ ಕಾರು ಹರಿದು ಮೂವರು ಮಕ್ಕಳು ಮೃತಪಟ್ಟ ದುರ್ಘಟನೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ಸಹ ಸಾವಿಗೀಡಾಗಿದ್ದಾರೆ.

ಎಸ್‍ಯುವಿ (ಸ್ಪೋಟ್ಸ್ ಯುಟಿಲಿಟಿ ವೆಹಿಕಲ್) ಚಾಲಕ ಅತಿವೇಗದಲ್ಲಿ ಚಾಲನೆ ಮಾಡುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಪಾದಚಾರಿ ಮಾರ್ಗದಲ್ಲಿ ಮಲಗಿದ್ದವರ ಮೇಲೆ ಹರಿಯುತು. ಈ ದುರ್ಘಟನೆಯಲ್ಲಿ ಮೂವರು ಮಕ್ಕಳು ಮೃತಪಟ್ಟು, ಕೆಲವರು ಗಾಯಗೊಂಡರು.

ನಂತರ ಕಾರು ಫುಟ್‍ಪಾತ್ ಪಕ್ಕದ ಅಂಗಡಿಯ ಗೋಡೆ ಡಿಕ್ಕಿ ಹೊಡೆಯಿತು. ಈ ಘಟನೆಯಲ್ಲಿ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ಸಹ ಮೃತಪಟ್ಟ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರಿನಲ್ಲಿದ್ದವರು ಈ ಘಟನೆ ನಂತರ ಪರಾರಿಯಾಗಿರುವ ಶಂಕೆ ಇದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ