ವಿಶ್ವಯುದ್ದದಿಂದ ಹೊರ ಬಿದ್ದ ಹರಿಣಗಳು: ಫ್ಲಾಪ್ ಪರ್ಫಾಮನ್ಸ್ಗೆ ಐಪಿಎಲ್ ಕಾರಣ ಎಂದ ಕ್ಯಾಪ್ಟನ್ ಡುಪ್ಲೆಸಿಸ್..!

ಈ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಎನಿಸಿದ್ದ ಸೌತ್ ಆಫ್ರಿಕಾ ತಂಡ ಹೀನಾಯ ಪ್ರದರ್ಶನ ಕೊಟ್ಟು ಮಕಾಡೆ ಮಲಗಿದೆ. ತಂಡದಲ್ಲಿ ಸ್ಟಾರ್ ಆಟಗಾರ ದಂಡೆ ಇದ್ದ ಹೊರತಾಗಿಯೂ ಫಾಫ್ ಡುಪ್ಲೆಸಿಸ್ ಪಡೆ ಕಳಪೆ ಆಟವಾಡಿದೆ. ಆಡಿದ 7 ಪಂದ್ಯಗಳಲ್ಲಿ 5ರಲ್ಲಿ ಸೋಲು ಕಂಡು ಒಂದರಲ್ಲಿ ಮಾತ್ರ ಗೆದ್ದಿತ್ತು. ಈ ಬಾರಿಯಾದ್ರು ವಿಶ್ವಕಪ್ ಗೆದ್ದು ಚೋಕರ್ಸ್ ಎಂಬ ಹಣೆಪಟ್ಟಿಯನ್ನ ಕಳಚಿಡಬೇಕೆಂಬ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಪಡೆಯ ಕನಸು ಭಗ್ನಗೊಂಡಿದೆ.

ಸೌತ್ ಆಫ್ರಿಕಾ ಸೋಲಿಗೆ ಐಪಿಎಲ್ ಕಾರಣ ಎಂದ ಫಾಫ್ ಡುಪ್ಲೆಸಿಸ್
ಮೊನ್ನೆ ಪಾಕ್ ವಿರುದ್ಧ ಹೀನಾಯ ಸೋಲಿನ ಬಳಿಕ ಮಾತಾನಾಡಿರುವ ಸೌತ್ ಆಫ್ರಿಕಾ ಕ್ಯಾಪ್ಟನ್ ಫಾಫಾ ಡುಪ್ಲೆಸಿಸ್, ವಿಶ್ವಕಪ್ಗೂ ಮುಂಚೆ ನಡೆದ ಐಪಿಎಲ್ ಟೂರ್ನಿಯೇ ನಮ್ಮ ತಂಡದ ಮೇಲೆ ಪರಿಣಾಮ ಬೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ..

ತಂಡದ ಮ್ಯಾನೆಜ್ಮೆಂಟ್ ತಂಡದ ಕೆಲ ಆಟಗಾರರಿಗೆ ಐಪಿಎಲ್ನಲ್ಲಿ ಆಡುವ ಅವಕಾಶ ನೀಡಬಾರದಿತ್ತು. ಹೆಚ್ಚು ಕೆಲಸದ ಒತ್ತಡದಿಂದ ವಿಶ್ವಕಪ್ನಲ್ಲಿ ನಮ್ಮ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ರಬಡಾಗಾದ್ರು ಐಪಿಎಲ್ನಲ್ಲಿ ಆಡದಂತೆ ನಾವು ತಡೆಯಬೇಕಿತ್ತು.. ಜೊತೆಗೆ ಕೆಲ ಆಟಗಾರರ ಗಾಯದ ಸಮಸ್ಯೆಯೂ ಆತನ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೀಕೆಗಳನ್ನ ಎದುರಿಸಲಾಗದೇ ಜಾಣತನ ಮೆರೆದೆ ಆಫ್ರಿಕಾ ನಾಯಕ…!
ಹೌದು.. ವಿಶ್ವಕಪ್ನಲ್ಲಿ 7 ಪಂದ್ಯಗಳ ಪೈಕಿ ಕೇವಲ 1 ಪಂದ್ಯ ಗೆದ್ದಿರುವ ಸೋತ ಆಫ್ರಿಕಾ, ಈಗ ಈ ಸೋಲಿಗೆ ಪಿಳ್ಳೆ ನೆವ ಎಂಬಂತೆ ಐಪಿಎಲ್ ಕಾರಣ ನೀಡಿದೆ. ಆದ್ರೆ. ಐಪಿಎಲ್ ಟೂರ್ನಿಯಲ್ಲಿ ಆಡಿದ ಪ್ರಮುಖ ಆಟಗಾರರು ವಿಶ್ವಕಪ್ನಲ್ಲಿ ಅಬ್ಬರಿಸುತ್ತಿದ್ದಾರೆ. ಆಸಸ್ನ ಡ್ಯಾಶೀಂಗ್ ಓಪನರ್ ಡೇವಿಡ್ ವಾರ್ನರ್ ಐಪಿಎಲ್ನಲ್ಲಿ ಟಾಪ್ ಸ್ಕೋರರ್ ಆಗಿ ರನ್ ಮಳೆಯನ್ನೇ ಹರಿಸಿದ್ರು.. ಈಗ ವಿಶ್ವಕಪ್ ಟೂರ್ನಿಯಲ್ಲಿಯೂ ಸಹ ತಮ್ಮ ರನ್ ದಾಹ ಮುಂದುವರಿಸಿದ್ದಾರೆ. ಜಾನಿ ಬೇರ್ ಸ್ಟೋ ಸಹ ಐಪಿಎಲ್ನಲ್ಲಿ ಮಿಂಚಿದ್ರು.. ಈಗ ವಿಶ್ವಕಪ್ನಲ್ಲೂ ಬ್ಯಾಟ್ನಿಂದ ರನ್ ಮಳೆ ಸುರಿಸುತ್ತಿದ್ದಾರೆ.. ನ್ಯೂಜಿಲೆಂಡ್ ನಾಯಕ ವಿಲಿಯಮ್ಸನ್, ಮೊಹಮ್ಮದ್ ನಬಿ, ಜೋಫ್ರಾ ಆರ್ಚರ್ , ಬೆನ್ ಸ್ಟೋಕ್ಸ್, ಶಕೀಬ್ ಹಲ್ ಹಸನ್ ಸೇರಿದಂತೆ ಇತೆ ಆಟಗಾರರು ಐಪಿಎಲ್ನಲ್ಲಿ ಆಡಿದ್ದಾರೆ.. ಇದೀಗ ವಿಶ್ವಕಪ್ ಟೂರ್ನಿಯಲ್ಲು ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ.. ಆದ್ರೆ, ಐಪಿಎಲ್ ವಿಶ್ವಕಪ್ ತಯಾರಿಗೆ ವೇದಿಕೆ ಆಯ್ತು ಕೊಂಡಾಡುತ್ತಿದ್ರೆ.. ಆಫ್ರಿಕಾ ನಾಯಕ ಮಾತ್ರ ಐಪಿಎಲ್ ಕಡೆಗೆ ಬೊಟ್ಟು ಮಾಡಿದ್ದಾರೆ.

ಡೇಲ್ ಸ್ಟೇನ್ ಇಂಜುರಿಗೆ ಐಪಿಎಲ್ ಕಾರಣವಂತೆ
ಇಷ್ಟೆ ಅಲ್ಲ ಬರೀ ಸೌತ್ ಆಫ್ರಿಕಾ ತಂಡದ ಬಗ್ಗೆ ಮಾತ್ರವಲ್ಲ ತಂಡದ ಸ್ಟಾರ್ ಬೌಲರ್ ಡೇಲ್ ಸ್ಟೇನ್ ಟೂರ್ನಿಗೂ ಭುಜದ ನೋವಿಗೆ ಗುರಿಯಾಗಿ ವಿಶ್ವಕಪ್ನಿಂದ ಹೊರ ನಡೆದಿದ್ರು. ಡೇಲ್ ಸ್ಟೇನ್ ಇಂಜುರಿಗೂ ಐಪಿಎಲ್ ಕಾರಣ ಎಂದು ಡುಪ್ಲೇಸಿಸ್ ದೂರಿದ್ರು.

ಕಾಗದದ ಮೇಲಿನ ಹುಲಿಗಳಾದ ಸೌತ್ ಆಫ್ರಿಕಾ..!
ಮೇಲ್ನೋಟಕ್ಕೆ ಸೌತ್ ಆಫ್ರಿಕಾ ಬಲಿಷ್ಠ ತಂಡವಾಗಿ ಕಾಣಿದ್ರು.. ವಿಶ್ವಕಪ್ನಲ್ಲಿ ಮಾತ್ರ ತನ್ನ ಸಂಘಟಿತ ಹೋರಾಟ ನಡೆಸುವಲ್ಲಿ ವಿಫಲವಾಗಿದೆ.. ವಿಶ್ವಕಪ್ ತಂಡದಲ್ಲಿ ಉತ್ತಮ ಆಟಗಾರರಿಗೆ ಸ್ಥಾನ ನೀಡಿದ್ರು.. ಮೈದಾನದಲ್ಲಿ ಮಾತ್ರ ನೈಜ ಆಟ ಪ್ರದರ್ಶಿಸುವಲ್ಲಿ ಎಡವಿದ್ದಾರೆ.. ಕ್ವಿಂಟನ್ ಡಿಕಾಕ್, ಆಶೀಂ ಆಮ್ಲಾ, ಡುಫ್ಲೆಸಿಸ್, ಮಿಲ್ಲರ್ರಂಥಹ ಆಟಗಾರರು ಕಾಗದದ ಮೇಲಿನ ಹುಲಿಗಳಂತೆ ಮಾತ್ರ ಈ ಟೂರ್ನಿಯಲ್ಲಿ ಬಾಸವಾದ್ರು.. ಐಪಿಎಲ್ನಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದ ರಬಡಾ, ಲುಂಗಿ ನಿಗಿಡಿ, ಕ್ರಿಸ್ ಮೋರಿಸ್, ಇಮ್ರಾನ್ ತಾಹೀರ್ರಂಥಹ ಬೌಲರ್ಗಳು, ವಿಶ್ವಕಪ್ನಲ್ಲಿ ಮಿಂಚುತ್ತಾರೆ ಅನ್ನೋ ಭರವಸೆಯನ್ನ ಹುಸಿಮಾಡಿದ್ದು ಸುಳ್ಳಲ್ಲ.. ಆದ್ರೆ, ಐಪಿಎಲ್ನಲ್ಲಿ ನೀಡಿದ್ದ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲರಾಗಿ ಈಗ ಐಪಿಎಲ್ ಕಡೆಗೆಬೊಟ್ಟು ಮಾಡ್ತಿರೋದು ಸರಿಯೇ..?

ಒಟ್ನಲ್ಲಿ ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತಿದೆ ಡುಪ್ಲೆಸಿಸ್ ನೀಡಿರುವ ಕಾರಣಗಳು. ಯುವ ಕ್ರಿಕೆಟಿಗೆರಿಗೆ ವೇದಿಕೆಯಾಗಿರುವ ಐಪಿಎಲ್ನ್ನ ದೂರಿದ್ದು ಮಾತ್ರ ನಿಜಕ್ಕೂ ಸೋಜಿಗವೆನಿಸುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ