ಟೀಮ್ ಇಂಡಿಯಾದ ಅಸಲಿ ಕ್ಯಾಪ್ಟನ್ ಯಾರು..?: ಆನ್ ಫೀಲ್ಡ್ನಲ್ಲಿ ಕ್ಯಾಪ್ಟನ್ ಆಗಿರ್ತಾರಾ ಕೊಹ್ಲಿ ?

ಮತ್ತೆ ಮತ್ತೆ ಅದೇ ಪ್ರಶ್ನೆ.. ಆದರೆ ಅದೇ ಉತ್ತರ. ಇಂಥಹ ಸಮಯದಲ್ಲಿ ಇಂಥಹದೊಂದು ಅನುಮಾನ ಮತ್ತೆ ಮತ್ತೆ ಕಾಡಲು ಶುರು ಮಾಡಿದೆ. ಹೌದು.. ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಿಜವಾದ ಕ್ಯಾಪ್ಟನ್. ಆದ್ರೆ, ಒಬ್ಬ ಆ್ಯಕ್ಟಿಂಗ್ ಕ್ಯಾಪ್ಟನ್ ಮಾತ್ರವಾಗೇ ತಂಡದಲ್ಲಿದ್ದಾರೆ.. ಸ್ವಲ್ಪ ಈ ವಿಚಾರದ ಬಗ್ಗೆ ಪರಿಶೀಲಿಸಿದ್ರೆ ಎಲ್ಲವೂ ಅರ್ಥವಾಗುತ್ತೆ.. ಟಾಸ್ ಹಾಕಲು ಬಿಟ್ಟರೆ ಇನ್ಯಾವುದಕ್ಕೆ ಬೇಕು ವಿರಾಟ್ ಕೊಹ್ಲಿ ಎಂದು ಹೇಳಿಕೊಳ್ಳುವಂಥಹ ಪರಿಸ್ಥಿತಿ ನಿರ್ಮಾಣವಾಗಿದೆ..

ಟೆನ್ಶನ್ ವೇಳೆ ಕೈಬಿಟ್ಟು ಬಿಡ್ತಾರೆ ವಿರಾಟ್ ಕೊಹ್ಲಿ..!
ಹೌದು.. ಮ್ಯಾಚ್ ರೋಚಕ ಹಂತಕ್ಕೆ ಬಂದು ನಿಂತ್ರೆ ಸಾಕು ವಿರಾಟ್ ಫುಲ್ ಟೆನ್ಷನ್ ಆಗಿಬಿಡ್ತಾರೆ. ನಾಯಕನಾಗಿ ಎರಡು ವರ್ಷದ ಅನುಭವ ಪಡೆದ್ರು
ಫ್ರೆಂಟ್ನಲ್ಲಿ ಇರು ಅಂದ್ರು ವಿರಾಟ್ ಕೊಹ್ಲಿ ಇರೋದಿಲ್ಲ.. ಇಂಥಹ ಆಟಗಾರರನನ್ನ ಕ್ಯಾಪ್ಟನ್ ಅಂತ ಹೇಗೆ ಕರಿತಾರೆ..? ವಿರಾಟ್ ಕೊಹ್ಲಿಯನ್ನ ಅಣುಕಿಸಲಿಕ್ಕೆ ನಾವ್ ಹೀಗೆ ಹೇಳ್ತಿಲ್ಲ.. ಇದನ್ನ ಸಾಕ್ಷಾತ್ ಕ್ರಿಕೆಟ್ ಅಭಿಮಾನಿಗಳು, ಕ್ರಿಕೆಟ್ ದಿಗ್ಗಜರು ಹೇಳ್ತಿರೋ ಮಾತು.. ಮ್ಯಾಚ್ ಟೆನ್ಶನ್ಗೆ ಬಂದ್ರೆ ಸಾಕು ವಿರಾಟ್ ಕೊಹ್ಲಿ ತಂಡವನ್ನ ಕೈಬಿಟ್ಟು ಬಿಡ್ತಾರೆ.. ಈ ವೇಳೆ ಎಲ್ಲವೂ ಧೋನಿ ಕೈ ಸೇರಿಬಿಡುತ್ತೆ.. ಫೀಲ್ಡಿಂಗ್ ಪ್ಲೇಸ್ಮೆಂಟ್, ಬೌಲಿಂಗ್ನಲ್ಲಿ ಚೇಂಜಸ್ ಸೇರಿದಂತೆ ಎಲ್ಲವೂ ಧೋನಿಯ ರಣತಂತ್ರವೇ ಆಗಿಬಿಡುತ್ತೆ..

ಕೂಲ್ ಕ್ಯಾಪ್ಟನ್ ಆಗಿ ಟೀಮ್ ಇಂಡಿಯಾಕ್ಕೆ ಎಷ್ಟೋ ಅವಿಸ್ಮರಣೀಯ ಗೆಲುವುಗಳನ್ನು ಟೀಮ್ ಇಂಡಿಯಾಕ್ಕೆ ಧೋನಿ ತಂದುಕೊಟ್ಟಿದ್ದಾರೆ.. ಪ್ರಮುಖವಾಗಿ 2 ವಿಶ್ವಕಪ್, ಒಂದು ಚಾಂಪಿಯನ್ ಟ್ರೋಫಿ ಗಳು ಒಳಗೊಂಡಿವೆ. ಧೋನಿ ಕ್ಯಾಪ್ಟನ್ಸಿಯಿಂದ ಕೆಳಗಿಳಿದ ಬಳಿಕ ವಿರಾಟ್ ಆ ಸ್ಥಾನಕ್ಕೆ ಏರಿದ್ರು. ವಿರಾಟ್ ನಾಯಕನಾಗಿ ಬಂದ ಮೇಲೂ ಪ್ರಮುಖ ಸರಣಿಗಳನ್ನ ಗೆದ್ದ ಸಾಧನೆ ಮಾಡಿದ್ದಾರೆ. ಇಷ್ಟಾದ್ರೂ ಈಗಲೂ ವಿರಾಟ್ ಕೊಹ್ಲಿ ಟೆನ್ಶನ್ ಪಂದ್ಯಗಳನ್ನ ಧೋನಿ ಕೈಯಲ್ಲಿ ಇಟ್ಟು ಬಿಡ್ತಿದ್ದಾರೆ.

ಇದಕ್ಕೆ ಮೊನ್ನೆ ಕ್ರಿಕೆಟ್ ಶಿಶು ಅಫ್ಘಾನ್ ವಿರುದ್ಧದ ಪಂದ್ಯವೇ ಸಾಕ್ಷಿ . ಆಲ್ರೌಂಡರ್ ನಬಿ ಬೌಂಡರಿ ಸಿಕ್ಸರ್ಗಳನ್ನ ಬಾರಿಸುತ್ತಿದ್ದಾಗ ಬೌಂಡರಿ ಲೈನ್ನಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಫುಲ್ ಟೆನ್ಷನ್ ಆಗಿದ್ರು.

ಇದರಲ್ಲೆ ಗೊತ್ತಾಗುತ್ತೆ ಕೊಹ್ಲಿ ಒತ್ತಡದ ಸಮಯವನ್ನ ಇನ್ನು ನಿಭಾಯಿಸುವನ್ನ ಕಲಿತಿಲ್ಲ.

ಕೈ ಜಾರುತ್ತಿದ್ದ ಪಂದ್ಯವನ್ನ ಗೆದ್ದುಕೊಟ್ಟ ಧೋನಿ..!
ಮೊನ್ನೆಯ ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಇನ್ನೇನು ಕ್ರಿಕೆಟ್ ಶಿಶು ವಿರುದ್ಧ ಟೀಮ್ ಇಂಡಿಯಾ ಸೋಲು ಖಚಿತ ಅಂತಾನೇ ಎಲ್ರೂ ಭಾವಿಸಿದ್ರು. ಆದ್ರೆ, ಈ ವೇಳೆ ತಂಡದ ಜವಾಬ್ದಾರಿ ಹೊತ್ತ ಮಿಸ್ಟರ್ ಕೂಲ್ ರಣತಂತ್ರಗಳನ್ನೇ ಎಣೆದ್ರು. ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಅಫ್ಘಾನ್ ತಂಡಕ್ಕೆ ಫೀಲ್ಡ್ ಪ್ಲೇಸ್ಮೆಂಟ್ ಚೇಂಜ್ ಮಾಡೋ ಮೂಲಕ ಅಫ್ಘಾನ್ ತಂಡದ ರನ್ ಗಳಿಕೆಗೆ ಕಡಿವಾಣ ಹಾಕಿದ್ರು.. ಪದೇ ಪದೇ ಬೌಲರ್ಗಳಿಗೆ ಉಪಯುಕ್ತ ಕಾಣಿಕೆ ನೀಡಿ ವಿಕೆಟ್ ಉರುಳಿಸುವಲ್ಲಿ ನೆರವಾದ್ರು.. ಇದೇ ವಿಚಾರವನ್ನ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹೇಳಿದ್ದನ್ನು ನಾವ್ ನೆಪಿಸಿಕೊಳ್ಳಬಹುದು.. ಡಿಆರ್ಎಸ್ ತೆಗೆದುಕೊಳ್ಳುವುದು ಧೋನಿ ರಿವ್ಯೂವ್ ಸಿಸ್ಟಂ ಆಗಿ ಬದಲಾಗಿದೆ. ಹೀಗಾಗಿಯೇ ರಿವ್ಯೂ ಮೊರೆ ಹೋಗೋಕೆ ಧೋನಿಯ ಅನುಮತಿ ಕಡ್ಡಾಯ ಅನ್ನೋದನ್ನ ಸಹ ನಾವ್ ಮರೆಯುವಂತಿಲ್ಲ..

ಒಟ್ನಲ್ಲಿ ಕ್ಯಾಪ್ಟನ್ ಅಲ್ಲ ಎಂಬುವುದು ಬಿಟ್ಟರೆ. ಈಗಲೂ ಧೋನಿಯೇ ಆನ್ ಫೀಲ್ಡ್ ಕ್ಯಾಪ್ಟನ್ ಆಗಿದ್ದಾರೆ. ಧೋನಿಯನ್ನೇ ಅನುಸರಿಸುವ ಕೊಹ್ಲಿ, ಯಾವಾಗ ನಿಜವಾದ ಕ್ಯಾಪ್ಟನ್ ಆಗಿ ಚೇಂಜ್ ಆಗ್ತಾರೆ ಅನ್ನೋದನ್ನ ಕಾಲವೇ ಉತ್ತರಿಸಬೇಕಿದೆ..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ