ಮಧ್ಯಂತರ ಚುನಾವಣೆ ಆಡಳಿತ ಪಕ್ಷದಿಂದಲೇ ಬರಬಹುದು-ಮಾಜಿ ಡಿಸಿಎಂ ಆರ್.ಆಶೋಕ್

ಬೆಂಗಳೂರು, ಜೂ.25-ಸರ್ಕಾರಕ್ಕೆ ಅಭದ್ರತೆ ಇದೆ ಎಂದು ಹೇಳುವುದು ವಿರೋಧ ಪಕ್ಷದವರ ಚಾಳಿಯಲ್ಲ, ಆಡಳಿತ ಪಕ್ಷದಲ್ಲಿರುವವರೇ ಸರ್ಕಾರ ಅಭದ್ರವೆನ್ನುತ್ತಿದ್ದಾರೆ. ಹೀಗಾಗಿ ಆಡಳಿತ ಪಕ್ಷದಿಂದಲೇ ಮಧ್ಯಂತರ ಚುನಾವಣೆ ಬರಬಹುದು ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ಬರುವುದಾದರೆ ಆಡಳಿತ ಪಕ್ಷದವರಿಂದಲೇ ಬರಬಹುದು. ಏಕೆಂದರೆ ಕಾಂಗ್ರೆಸ್-ಜೆಡಿಎಸ್‍ನ ನಾಯಕರೇ ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೂಡ ಮಾತನಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಅಹಿಂದ ಜಪ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಗೆ ಮಧ್ಯಂತರ ಚುನಾವಣೆ ಬೇಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜಿಂದಾಲ್ ಕಂಪನಿಗೆ ಜಮೀನು ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರ ಸಚಿವ ಸಂಪುಟ ಉಪಸಮಿತಿ ರಚಿಸಿದ್ದು, ಆ ಸಮಿತಿ ಬಗ್ಗೆ ತಮಗೆ ನಂಬಿಕೆ ಇಲ್ಲ. ಅದೂ ಕೂಡ ಸರ್ಕಾರದ ಪರವಾಗಿಯೇ ವರದಿ ನೀಡುತ್ತದೆ ಎಂದು ಟೀಕಿಸಿದರು.

ಜಿಂದಾಲ್ ಕಂಪನಿಗೆ ಸರ್ಕಾರ ಮತ್ತೆ 10 ವರ್ಷಗಳ ಕಾಲ ಲೀಸ್‍ಗೆ ನೀಡಲಿ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ