ಐಸಿಸಿ ಕೆಂಗಣ್ಣಿಗೆ ಗುರಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ: ಅಫ್ಘಾನ್ ವಿರುದ್ಧ ಅಶಿಸ್ತು ತೋರಿದ ಟೀಂ ಇಂಡಿಯಾ ಕ್ಯಾಪ್ಟನ್

ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಐಸಿಸಿಯಿಂದ ದಂಡನೆಗೆ ಗುರಿಯಾಗಿದ್ದಾರೆ. ಇದ್ಯಾಕಪ್ಪ ವಿಶ್ವಕಪ್ನಲ್ಲಿ ಎಲ್ಲ ಪಂದ್ಯಗಳನ್ನ ಗೆದ್ದು ಸಾಗುತ್ತಿರುವ ಕೊಹ್ಲಿಗೆ ಐಸಿಸಿ ದಂಡ ವಿಧಿಸಿದೆ ಅನ್ನೊದನ್ನ ತೋರಿಸ್ತೀವಿ ನೋಡಿ.

ಅಫ್ಘಾನ್ ವಿರುದ್ಧ ಪುಲ್ ಟೆನ್ಷನ್ ಆಗಿದ್ದಾ ವಿರಾಟ್
ಮೊನ್ನೆ ಸೌಥಾಂಪ್ಟನ್ ಅಂಗಳದಲ್ಲಿ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ವಿರುದ್ದ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಕ್ಯಾಪ್ಟನ್ ಕೊಹ್ಲಿ ಫುಲ್ ಟೆನ್ಶನ್ ಆಗಿದ್ರು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಅಫ್ಘಾನರಿಗೆ 224 ರನ್ ಗಳ ಟಾರ್ಗೆಟ್ ಕೊಟ್ಟಿತ್ತು. ಸುಲಭ ಟಾರ್ಗೆಟ್ ಬೆನ್ನತ್ತಿದ ಆಫ್ಘಾನಿಸ್ತಾನ ಭರ್ಜರಿ ಬ್ಯಾಟಿಂಗ್ ಮಾಡಿತು.

ಅಫ್ಘಾನ್ ಬ್ಯಾಟ್ಸ್ಮನ್ಗಳ ಅಬ್ಬರ ನೋಡಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕಕ್ಕಾಬಿಕ್ಕಿಯಾಗಿದ್ರು. ಅಫ್ಗಾನ್ ಬ್ಯಾಟ್ಸ್ಮನ್ಗಳು ಬೌಂಡರಿ ಸಿಕ್ಸರ್ಗಳನ್ನ ಹೊಡೆದಾಗಲೆಲ್ಲ ಕೊಹ್ಲಿ ಮುಖದಲ್ಲಿ ಸೋಲಿನ ಛಾಯೆ ಆವರಿಸಿತ್ತು.

 

 

 

 

 

 

 

 

 

 

 

 

 

 

 

ವಿರಾಟ್ಗೆ ದಂಡ ವಿಧಿಸಿದ ವಿರಾಟ್ ಕೊಹ್ಲಿ
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಐಸಿಸಿ ಶಿಕ್ಷೆ ನೀಡಿದೆ. ಐಸಿಸಿ ನೀತಿ ನಿಯಮಗಳನ್ನ ಗಾಳಿಗೆ ತೂರಿದ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಐಸಿಸಿಯಿಂದ ದಂಡನೆಗೆ ಗುರಿಯಾಗಿದ್ದಾರೆ. ಅಶಿಸ್ತಿನಿಂದ ನಡೆದುಕೊಂಡ ಹಿನ್ನೆಲೆಯಲ್ಲಿ ಕೊಹ್ಲಿಗೆ ಪಂದ್ಯದ ಶುಲ್ಕ ಶೇಖಡ 25ರಷ್ಟು ಶುಲ್ಕ ಕಡಿತಗೊಳಿಸಿದೆ.

ಅತಿಯಾಗಿ ಅಪೀಲ್ ಮಾಡಿ ದಂಡನೆಗೆ ಗುರಿಯಾದ ಕ್ಯಾಪ್ಟನ ಕೊಹ್ಲಿ
ನಾಯಕ ವಿರಾಟ್ ಐಸಿಸಿಯಿಂದ ದಂಡನೆಗೆ ಗುರಿಯಾಗೋದಕ್ಕೆ ಒಂದು ಕಾರಣ ಇದೆ. ನಿನ್ನೆ ಅಫ್ಗಾನ್ ವಿರುದ್ಧದ ಕದನದಲ್ಲಿ ವಿರಾಟ್ ಅತಿಯಾಗಿ ಅಪೀಲ್ ಮಾಡಿದ್ದೆ ದಂಡನೆಗೆ ಗುರಿಯಾಗಲು ಕಾರಣವಾಗಿದೆ. ಕ್ರಿಕೆಟ್ ಶಿಶುಗಳೆದುರು ಹೇಗಾದ್ರು ಮಾಡಿ ಪಂದ್ಯ ಗೆಲ್ಲಬೇಕೆಂದು ಕಣಕ್ಕಿಳಿದಿದ್ದ ಕೊಹ್ಲಿ ಅತಿಯಾಗಿ ಅಪೀಲ್ ಮಾಡುತ್ತಿದ್ರು. ಇದು ಐಸಿಸಿಯ ಕಣ್ಣು ಕೆಂಪಾಗುವಂತೆ ಮಾಡಿತು.

ಅಂಪೈರ್ ಆಲಮ್ದಾರ್ ಜೊತೆ ವಿರಾಟರುಪ ತೋರಿಸಿದ್ದ ಕೊಹ್ಲಿ
ಅಫ್ಘಾನ್ ವಿರುದ್ಧ ಫೀಲ್ಡಿಂಗ್ ಮಾಡುವ ವೇಳೆ ಕ್ಯಾಪ್ಟನ್ ಕೊಹ್ಲಿ ಅಂಪೈರ್ ಆಲಮ್ದಾರ್ ಗೆ ತಮ್ಮ ವಿರಾಟ ರೂಪ ತೋರಿಸಿದ್ರು. ಮೊಹ್ಮದ್ ಶಮಿ ಎಸೆದ ಮೂರನೇ ಓವರ್ನ ನಾಲ್ಕನೆ ಎಸೆತದಲ್ಲಿ ಓಪನರ್ ಹಜರತ್ಹುಲ್ಲಾ ಎಲ್ಬಿ ಬಲೆಗೆ ಬಿದ್ದಿದ್ರು. ಆದರೆ ಆನ್ ಫೀಲ್ಡ್ ಅಂಪೈಯರ್ ಔಟೆಂದು ತೀರ್ಪು ಕೊಟ್ಟಿರಲಿಲ್ಲ.

ಕ್ಯಾಪ್ಟನ್ ಕೊಹ್ಲಿ ಡಿಆರ್ಎಸ್ ಮೊರೆ ಹೋದ್ರು. ಡಿಆರ್ಎಸ್ನಲ್ಲಿ ಚೆಂಡು ಪ್ಯಾಡ್ಗೆ ಬಡಿದಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ ಚೆಂಡು ಪಿಚ್ ಆಗುವ ಗೆರೆಯಿಂದ ಹೊರಗಡೆ ಇದ್ದಿದ್ದರಿಂದ ಅಂಪೈರ್ ಔಟೆಂದು ತೀರ್ಪು ಕೊಟ್ಟಿರಲಿಲ್ಲ. ಇದರಿಂದ ಕೆರಳಿದ ವಿರಾಟ್ ಕೊಹ್ಲಿ ಅಂಪೈರ್ ಆಲಮ್ದಾರ್ ಜೊತೆ ವಾಗ್ವದಕ್ಕಿಳಿದಿದ್ರು.

ಕ್ಯಾಪ್ಟನ್ ಕೊಹ್ಲಿ ಅತಿ ಯಾಗಿ ಅಪೀಲ್ ಮಾಡಿದ್ರು.ಒಬ್ಬ ಆಟಗಾರ ಅತಿಯಾಗಿ ಅಂಪೈಯರ್ಗಳಿಗೆ ಮನವಿ ಮಾಡುವಂತಿಲ್ಲ. ಇದು ಐಸಿಸಿ ನೀತಿ ನಿಯಮ ಒಂದು ಮತ್ತು ಎರಡರ ನಿಯಮಗಳ ಉಲ್ಲಂಘನೆಯಾಗಿದೆ. ಈ ಎರಡು ನಿಯಮಗಳು ಆಟಗಾರರ ಅಶಿಸ್ತಿಗೆ ಸಂಬಂಧಿಸಿದ್ದಾಗಿದು ಅತಿಯಾದ ಮನವಿ ಕೂಡ ಇದರ ವ್ಯಾಪ್ತಿಗೆ ಬರುತ್ತೆ.

ಟೀಂ ಇಂಡಿಯಾ ನಾಯಕನಿಗೆ ಶೇ.25ರಷ್ಟು ದಂಡ
ಅಶಿಸ್ತು ತೋರಿದ ವಿರಾಟ್ಗೆ ಐಸಿಸಿ ಶೇ.25ರಷ್ಟು ದಂಡ ವಿಧಿಸಿದೆ. ಈ ಕುರಿತು ಸ್ವತಃ ಐಸಿಸಿ ಮಾಹಿತಿಯನ್ನ ನೀಡಿದೆ.

ಅಶಿಸ್ತು ತೋರದೇ ಎಚ್ಚರಿಕೆಯಿಂದ ಇರಬೇಕು ಕೊಹ್ಲಿ
ಕ್ಯಾಪ್ಟನ್ ವಿರಾಟ್ ಕೊಹ್ಲಿ ಈ ರೀತಿಯ ಅಶಿಸ್ತು ತೋರಿಸಿದ್ದು ಇದೇ ಮೊದಲಲ್ಲ. ಮೂರು ವರ್ಷಗಳ ಹಿಂದೆ ಕೂಡ ಕೊಹ್ಲಿ ಇಂಥದ್ದೆ ದುವರ್ತನೆಯನ್ನ ತೋರಿಸಿದ್ರು. ಇಷ್ಟೆ ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾಗಲೂ ಇದೇ ದುರ್ವತನೆ ಮತ್ತೆ ಮರುಕಳಿಸಿತ್ತು. ಇಂಥದ್ದೆ ವರ್ತನೆಯನ್ನ ವಿರಾಟ್ ಕೊಹ್ಲಿ ಇನ್ನು ಎರಡು ಮೂರು ಬಾರಿ ಮಾಡಿದ್ರೆ 24 ತಿಂಗಳ ಕಾಲ ಅಂದ್ರೆ ಎರಡು ವರ್ಷಗಳ ಕಾಲ ಅಮಾನತು ಶಿಕ್ಷಗೆ ಗುರಿಯಾದ್ರು ಆಶ್ಚರ್ಯಪಡಬೇಕಿಲ್ಲ.

ಒಟ್ನಲ್ಲಿ ನಾಯಕನಾದ ಮೇಲೆ ಸಾಕಷ್ಟು ಬದಲಾಗಿ ಪ್ರಬುದ್ಧತೆ ಪ್ರದರ್ಶಿಸಿರುವ ವಿರಾಟ್ ಕೊಹ್ಲಿ ಇಂಥ ತಪ್ಪುಗಳನ್ನ ಮಾಡದೇ ಕೇವಲ ವಿಶ್ವಕಪ್ ಗೆಲ್ಲುವ ಕಡೆ ಮಾತ್ರ ಕೊಡಲಿ ಅನ್ನೋದೇ ಟೀಂ ಇಂಡಿಯಾ ಅಭಿಮಾನಿಗಳ ಆಶಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ