ಕಳ್ಳತನ ಮಾಡಲು ಹೋದವನಿಗೆ ಹಸು ಮಾಡಿದ್ದೇನು? ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಅಸಲಿ ವಿಚಾರ!

ಹಾಸನ: ಹಲವು ಭಾರತೀಯರು ಗೋವನ್ನು ದೇವರಂತೆ ಕಾಣುತ್ತಾರೆ. ವಿಶೇಷ ದಿನಗಳಲ್ಲಿ ಅದನ್ನು ಪೂಜಿಸುತ್ತಾರೆ. ಇಂಥ ಗೋವು ಕಳ್ಳತನವಾಗಿ ಬಿಟ್ಟರೆ ಅದನ್ನು ಅವರು ಎಂದಿಗೂ ಸಹಿಸುವುದಿಲ್ಲ. ಹಾಸನದಲ್ಲೂ ಇಂಥದ್ದೇ ಘಟನೆಯೊಂದು ನಡೆದಿದೆ. ಹಸುವನ್ನು ಕಳ್ಳನೊಬ್ಬ ಅಪಹರಿಸಿದ್ದ. ಇದನ್ನು, ಸ್ವತಃ ಹಸುವೇ ಸಹಿಸಿಲ್ಲ ಎಂದು ಕಾಣುತ್ತದೆ! ಆತನ ಸಾವಿಗೆ ಈ ಗೋವು ಕಾರಣವಾಗಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಅಪ್ಪೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ತೋಟದ ಮನೆಯಲ್ಲಿದ್ದ ಹಸುವನ್ನು ಗೋವಿಂದಪ್ಪ ಎಂಬಾತ ಅಪಹರಿಸಿದ್ದ. ಅದನ್ನು ಎತ್ತಿಕೊಂಡು ಎರಡು ಕಿಲೋಮೀಟರ್​ ಸಾಗಿದ್ದ. ನಿರ್ಜನ ಪ್ರದೇಶದಲ್ಲಿ ಹಸುವಿನ ಕಾಲು ಕಟ್ಟಿ ಹಾಕಿ ವಾಹನದಲ್ಲಿ ಸಾಗಿಸಲು ಮುಂದಾಗಿದ್ದ. ಈ ವೇಳೆ ಹಸು ಗೋವಿಂದಪ್ಪನ ಮರ್ಮಾಂಗಕ್ಕೆ ಒದ್ದಿದೆ! ಅಚ್ಚರಿ ಎಂಬಂತೆ ಹಸು ಒದ್ದಿದ್ದಕ್ಕೆ ಗೋ ಕಳ್ಳ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಗೋವಿಂದಪ್ಪ ಅನುಮಾನಾಸ್ಪದವಾಗಿ ಮೃತಪಟ್ಟ ನಂತರದಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು. ಈತನ ಸಾವಿಗೆ ಕಾರಣವೇನು ಎನ್ನುವ ವಿಚಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಮರಣೋತ್ತರ ಪರಿಕ್ಷೆಯಲ್ಲಿ ಈತ ಹಸು ಒದ್ದು ಮೃತಪಟ್ಟಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ