ಬೆಂಗಳೂರು: ಲೋಕಸಭೆ ಆಯ್ತು, ಈಗ ವಿಧಾನಸಭೆ ಮೇಲೆ ನಿಖಿಲ್ ಕಣ್ಣು ಇಟ್ಟರಾ ಎಂಬ ಪ್ರಶ್ನೆಯೊಂದು ರಾಜ್ಯ ರಾಜಕಾರಣದಲ್ಲಿ ಮೂಡಿದೆ. ಯಾಕಂದರೆ ನಿಖಿಲ್ ಅಭಿಮಾನಿಗಳು ವಿಧಾನಸಭಾ ಕ್ಷೇತ್ರ ಹುಡುಕುತ್ತಿದ್ದಾರೆ. ನಿಖಿಲ್ ಎಲ್ಲಿ ನಿಂತರೆ ಗೆಲ್ಲುತ್ತಾರೆ ಅನ್ನೋ ಸೋಶಿಯಲ್ ಮೀಡಿಯಾ ಸರ್ವೇ ಆರಂಭವಾಗಿದೆ.
ಮಂಡ್ಯ, ರಾಮನಗರ, ಕೆ.ಆರ್.ಪೇಟೆ ಕ್ಷೇತ್ರಗಳೇ ಟಾರ್ಗೆಟ್ ಆಗಿದ್ದು, ಸರ್ವೇಯಲ್ಲಿ ಮೊದಲು ರಾಮನಗರ, ಎರಡನೇಯದ್ದು ಮಂಡ್ಯ, ಮೂರನೇಯದ್ದು ಕೆ.ಆರ್.ಪೇಟೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಹಾಗಾದ್ರೆ ಮುಂದೆ ಯಾವ ಕ್ಷೇತ್ರದಲ್ಲಿ ನಿಖಿಲ್ ಭವಿಷ್ಯ ಕಂಡುಕೊಳ್ತಾರೆ, ಸೋತ ನೆಲ ಮಂಡ್ಯದಲ್ಲೇ ಇರ್ತಾರೋ ಅಥವಾ ತಾಯಿ ಅನಿತಾ ಕುಮಾರಸ್ವಾಮಿ ಶಾಸಕಿಯಾಗಿರುವ ರಾಮನಗರಕ್ಕೆ ಜಂಪ್ ಆಗ್ತಾರೋ ಅನ್ನೋ ಚರ್ಚೆ ನಡೆಯುತ್ತಿದೆ.
ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಮುಗಿದು, ಫಲಿತಾಂಶ ಬಂದಿದ್ದರೂ ನಿಖಿಲ್ ಭವಿಷ್ಯದ ಬಗ್ಗೆ ಚರ್ಚೆ ಮಾತ್ರ ನಿಂತಿಲ್ಲ.