ವಿಶ್ವಕಪ್ನಲ್ಲಿ ಅದ್ವಿತೀಯ ಸಾಧನೆ ಮಾಡಿದ ಹ್ಯಾಟ್ರಿಕ್ ವೀರ ಶಮಿ: ಶಮಿಗೆ ಮಹೇಂದ್ರ ಕೊಟ್ಟ ಗೆಲುವಿನ ಸಿಕ್ರೇಟ್ ಏನು ?

ಟೀಂ ಇಂಡಿಯಾದ ಸ್ಪೀಡ್ಸ್ಟಾರ್ ಮೊಹ್ಮದ್ ಶಮಿ ವಿಶ್ವಯುದ್ದದಲ್ಲಿ ಕಮಾಲ್ ಮಾಡಿದ್ದಾರೆ. ಈ ಬಾರಿಯ ವಿಶ್ವಕಪ್ನಲ್ಲಿ ಆಡಿದ ಮೊದಲ ಪಂದ್ಯದಲ್ಲೆ ಈ ಬೆಂಗಾಲಿ ಬೌಲರ್ ಪಂದ್ಯವನ್ನ ಗೆಲ್ಲಿಸುವುದರ ಜೊತೆಗೆ ಹೊಸ ದಾಖಲೆ ಬರೆದಿದ್ದಾರೆ.

ಮೊನ್ನೆ ಸೌಥಾಂಪ್ಟನ್ ಅಂಗಳದಲ್ಲಿ ನಡೆದ ಕೊಹ್ಲಿ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ವಿರುದ್ಧ ತಿಣುಕಾಡಿ 11 ರನ್ಗಳ ವಿರೋಚಿತ ಗೆಲುವು ಪಡೆಯಿತು. ಟೀಂ ಇಂಡಿಯಾದ ರೋಚಕ ಗೆಲುವಿಗೆ ಕಾರಣವಾಗಿದ್ದು ತಂಡದ ಸ್ಪೀಡ್ ಸ್ಟರ್ ಮೊಹ್ಮದ್ ಶಮಿ. ಕೊನೆಯ ಓವರ್ನಲ್ಲಿ ಆಫ್ಘಾನಿಸ್ತಾನ ತಂಡಕ್ಕೆ ಗೆಲ್ಲಲು 16 ರನ್ ಬೇಕಿತ್ತು . 50ನೇ ಓವರ್ನಲ್ಲಿ ದಾಳಿಗಿಳಿದ ಶಮಿ ಆಲ್ರೌಂಡರ್ ಮೊಹ್ಮದ್ ನಬಿ, ಅಫ್ಥಾಬ್ ಆಲಮ್ ಮತ್ತು ಮುಜೀಬ್ ಉರ್ ರೆಹಮಾನ್ ಅವರ ವಿಕೆಟ್ಗಳನ್ನ ಪಡೆದು ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ರು. ಜೊತೆಗೆ ತಂಡವನ್ನ ಗೆಲ್ಲಿಸಿದ ಸಾಧನೆ ಮಾಡಿದ್ರು.

 

 

 

 

 

 

 

 

 

 

 

 

 

 

 

ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಶಮಿ 2ನೇ ಭಾರತೀಯ
ಅಫ್ಘಾನಿಸ್ತಾನದ ವಿರುದ್ಧ ಕೊನೆಯ ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಮೊಹಮ್ಮದ್ ಶಮಿ, ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಎರಡನೇ ಭಾರತೀಯ ಹಾಗೂ ವಿಶ್ವದ 10ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶಮಿ ಒಟ್ಟು 4 ವಿಕೆಟ್ ಪಡೆದು ಮಿಂಚಿದ್ರು.

32 ವರ್ಷಗಳ ಬಳಿಕ ಭಾರತಕ್ಕೆ ಹ್ಯಾಟ್ರಿಕ್ ಗರಿ
ಶಮಿ ಮೊನ್ನೆ ಅಫ್ಘಾನಿಸ್ತಾನ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಭಾರತ 32 ವರ್ಷಗಳ ಬಳಿಕ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದೆ. 32 ವರ್ಷಗಳ ಹಿಂದೆ ಭಾರತದಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಚೇತನ್ ಶರ್ಮಾ ನ್ಯೂಜಿಲೆಂಡ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದು ಹೊಸ ದಾಖಲೆ ಬರೆದಿದ್ದರು.

ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಪಡೆದು ದಾಖಲೆ ಬರೆದಿದ್ದ ಚೇತನ್ ಶರ್ಮಾ
ಶಮಿಗೂ ಮೊದಲು 1987 ರಲ್ಲಿ ಭಾರತದ ಪರ ಚೇತನ್ ಶರ್ಮಾ ನ್ಯೂಜಿಲ್ಯಾಂಡ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಇದು ವಿಶ್ವಕಪ್ ಇತಿಹಾಸದಲ್ಲಿ ಮೊದಲ ಹ್ಯಾಟ್ರಿಕ್ ದಾಖಲೆ ಆಗಿತ್ತು.ಚೇತನ್ ಶರ್ಮಾ ತಮ್ಮ ಬೌಲಿಂಗ್ನಲ್ಲಿ ಕೆನ್ ರುಥರ್ಫೋರ್ಡ್,ಇಯಾನ್ ಸ್ಮಿತ್ ಹಾಗೂ ಎವೆನ್ ಚಾಟ್ಫೀಲ್ಡ್ರನ್ನು ಬೌಲ್ಡ್ ಮಾಡುವ ಮೂಲಕ ವಿಶ್ವಕಪ್ನಲ್ಲಿ ಮೊದಲ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

ಶಮಿ ಹ್ಯಾಟ್ರಿಕ್ ಸಾಧನೆ ಹಿಂದೆ ಮಿಸ್ಟರ್ ಕೂಲ್ ಧೋನಿ
ಮೊನ್ನೆ ಆಫ್ಘನ್ ವಿರುದ್ಧ ಹ್ಯಾಟ್ರಿಕ್ ಸಾಧನೆಯ ಹಿಂದಿನ ಗುಟ್ಟನ್ನ ವೇಗಿ ಮೊಹಮ್ಮದ್ ಶಮಿ ಆ ರೋಚಕ ಕ್ಷಣದ ಸಿಕ್ರೇಟನ್ನ ರಿವೀಲ್ ಮಾಡಿದ್ದಾರೆ. ಶಮಿ ಹ್ಯಾಟ್ರಿಕ್ ಸಕ್ಸಸ್ ಹಿಂದೆ ತಂಡದ ಮಿಸ್ಟರ್ ಕೂಲ್ ಧೋನಿ ಇದ್ದಾರೆ. ಇದನ್ನ ಸ್ವತಃ ಶಮಿ ಅವರೇ ಹೇಳಿದ್ದಾರೆ.

ಶಮಿ ಹ್ಯಾಟ್ರಿಕ್ ಹಿಂದೆ ಧೋನಿ
ತನ್ನ ಆಲೋಚನೆಯಂತೆಯೇ, ಧೋನಿ ಸಲಹೆ ನೀಡಿದ್ದು ಗೆಲುವಿಗೆ ಕಾರಣವಾಯ್ತು .ಆ ರೋಚಕ ಕ್ಷಣದಲ್ಲಿ ನಾನು ಯಾರ್ಕರ್ ಬೌಲಿಂಗ್ ಮಾಡಲು ಯೋಚಿಸಿದ್ದೆ. ಮಹಿ ಭಾಯ್ ಸಲಹೆ ಕೂಡಾ ಅದೇ ಆಗಿತ್ತು. ಬೌಲಿಂಗ್ ಗತಿಯನ್ನು ಬದಲಿಸದೇ ಇದ್ದರೆ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅದ್ಭುತ ಅವಕಾಶ ನಿನ್ನದು ಎಂದಿದ್ದರು. ಶಮಿ ಅವರೇ ಹೇಳಿದ್ದಾರೆ.

ಧೋನಿ ಮಾತು ಕೇಳಿದ ಶಮಿಗೆ ಸಿಕ್ತು ಬಿಗ್ ಸಕ್ಸಸ್
ಕೊನೆಯ ಓವರ್ನಲ್ಲಿ ಶಮಿಗೆ ಯೋಚನೆ ಮಾಡುವಷ್ಟೂ ನನಗೆ ಸಮಯವಿರಲಿಲ್ಲ. ಆದರೂ ಮೊಹ್ಮದ್ ಧೋನಿ ಹೇಳಿದಂತೆ ಮಾತನ್ನ ಕಿವಿಗೆ ಹಾಕಿಕೊಂಡು ಅದರಂತೆ ನಡೆದು ವಿಶ್ವಕಪ್ನಲ್ಲಿ ಅದ್ವೀತಿಯ ಸಾಧನೆ ಮಾಡಿದ್ದಾರೆ. ಧೋನಿ ಆಡದಿದ್ದರೇ ಏನಂತೆ ಕೊನೆಯ ಕ್ಷಣದಲ್ಲಿ ಪಂದ್ಯವನ್ನ ಗೆಲ್ಲಿಸಿಕೊಟ್ಟು ತಂಡಕ್ಕೆ ಗೆಲುವಿನ ದಾರಿ ತೊರಿಸಿದ್ದಾರೆ. ಈ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಟೀಕಿಸುತ್ತಿರುವವರಿಗೆ ಪಂದ್ಯವನ್ನ ಗೆಲ್ಲಿಸಿ ಕೊಟ್ಟು ಮಾಹಿ ಉತ್ತರ ಕೊಟ್ಟದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ