ಕಾಂಗೋ,ಜೂ.24-ಕಾಂಗೋದಲ್ಲಿರುವ ಯುಎನ್ ಮಿಷನ್ನಲ್ಲಿ ಕರ್ತವ್ಯವನ್ನು ಒಪ್ಪಿಕೊಂಡಿರುವ ಭಾರತದ ಮಹಿಳಾ ಶಾಂತಿಪಾಲನ ತಂಡ, ಸಂಘರ್ಷದಿಂದ ಹೆಚ್ಚು ಹಾನಿಗೊಳಗಾದ ಮಹಿಳೆಯರು ಮತ್ತು ಮಕ್ಕಳೊಂದಿಗೆ ಕೆಲಸ ಮಾಡುವತ್ತ ಗಮನ ಹರಿಸಿದೆ.
ಸುಮಾರು 20 ಮಹಿಳಾ ಶಾಂತಿಪಾಲಕರನ್ನು ಒಳಗೊಂಡ ಭಾರತದ ಸ್ತ್ರೀ ತಂಡವು ತನ್ನ ನಿಯೋಜನೆಯನ್ನು ಯುನೈಟೆಡ್ ನೇಷನ್ಸ್ ಆರ್ಗನೈಸೇಶನ್ ಸ್ಟಬಿಲೈಸೇಶನ್ ಮಿಷನ್ ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೊದೊಂದಿಗೆ ಪ್ರಾರಂಭಿಸಿದೆ. ಮೊನೊಸ್ಕೊ ಎಂದೂ ಕರೆಯಲ್ಪಡುವ ಇದು ವಿಶ್ವಸಂಸ್ಥೆಯ ಧ್ವಜದ ಅಡಿಯಲ್ಲಿ ಅತ್ಯಂತ ಸವಾಲಿನ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಒಂದಾಗಿದೆ.
ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಮಿಲಿಟರಿ ಸಲಹೆಗಾರ ಕರ್ನಲ್ ಸಂದೀಪ್ ಕಪೂರ್ ಮಾತನಾಡಿ, ಮಹಿಳಾ ತಂಡವನ್ನು ಭಾರತ ನಿಯೋಜಿಸಿವುದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ಆದ್ಯತೆ ಮತ್ತು ವಿಶ್ವಸಂಸ್ಥೆಯಲ್ಲಿ ಮಹಿಳಾ ಶಾಂತಿಪಾಲಕರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸವಿಕೆಯನ್ನು ಖಚಿಪಡಿಸಿಕೊಳ್ಳಲು ಮುಂದಾಗಿದೆ.
ಆಪ್ರಿಕನ್ ರಾಷ್ಟ್ರದ ಉತ್ತರ ಶಿವು ಪ್ರಾಂತ್ಯದಲ್ಲಿ ಭಾರತೀಯ ಬ್ರಿಗೇಡ್ ಅನ್ನು ನಿಯೋಜಿಸಲಾಗಿದ್ದು, ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ದವಾಗಿರುವ ಪ್ರದೇಶಗಳನ್ನು ನಿಯಂತ್ರಿಸಲು ಸುಮಾರು 38 ಸಶಸ್ತ್ರ ಗುಂಪುಗಳು ಕಾರ್ಯ ನಿರ್ವಹಿಸುತ್ತಿವೆ. ತಂಡವು ಗಸ್ತು ತಿರುಗುವದಲ್ಲದೆ ಜೊತೆಗೆ ಆ ದೇಶದ ಮಹಿಳೆಯರು ಮತ್ತು ಸ್ಥಳೀಯರ ವಿಶ್ವಾಸವನ್ನು ಗಳಿಸುವುದಾಗಿದೆ ಎಂದು ಅವರು ಹೇಳಿದರು.
ಈ ತಂಡವು ನಾಗರಿಕ ಕಾರ್ಯಕ್ರಮಗಳನ್ನು ಕೈಗೊಳ್ಳವುದು ಮತ್ತು ಇತರ ಕರ್ತವ್ಯಗಳ ನಡುವೆ ತನಿಖೆ ಮತ್ತು ಗಲಬೆ ನಿಯಂತ್ರಣಕ್ಕೆ ಸಹಕರಿಸುತ್ತಾರೆ. ಮೊನೊಸ್ಕೊಗೆ ಭಾರತದ ಎರಡನೇ ಅತಿದೊಡ್ಡ ಸೈನ್ಯದ ಕೊಡುಗೆಯಾಗಿದ್ದು, ಈ ವರ್ಷದ ಮಾರ್ಚ್ ವೇಳೆಗೆ 2624 ಶಾಂತಿಪಾಲಕರು ಮತ್ತು 274 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.