ಕ್ರೀಡಾ ಸಚಿವ ರಹೀಮ್ ಖಾನ್ ಚಾಲನೆ ಪ್ರಜ್ವಲ್ ಗಾರ್ಮೆಂಟ್ ಉದ್ಘಾಟನೆ

ಬೀದರ್: ಇಲ್ಲಿಯ ಇಂದಿರಾ ಮಾರ್ಕೇಟ್‍ನ ಬಿ.ಜಿ. ಶೆಟಕಾರ ಕಾಂಪ್ಲೆಕ್ಸ್‍ನಲ್ಲಿ ಹೊಸದಾಗಿ ಆರಂಭಿಸಿರುವ ಪ್ರಜ್ವಲ್ ಗಾರ್ಮೆಂಟ್ ಉದ್ಘಾಟನೆ ಕಾರ್ಯಕ್ರಮ ಭಾನುವಾರ ನಡೆಯಿತು.

ಕ್ರೀಡಾ ಸಚಿವ ರಹೀಮ್ ಖಾನ್ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ನೌಕರಿಗಾಗಿ ಕಾದು ಕುಳಿತುಕೊಳ್ಳದೇ ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡಬೇಕು. ಅಂದಾಗ ಮಾತ್ರ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ರಾಜ್ಯದ ಮೈತ್ರಿ ಸರ್ಕಾರ ಸ್ವಯಂ ಉದ್ಯೋಗ ಕೈಗೊಳ್ಳಲು ಹಲವು ಸೌಲಭ್ಯಗಳನ್ನು ನೀಡಿದೆ. ಸಾಲ ಸೌಲಭ್ಯ, ಸಬ್ಸಿಡಿ ಸೇರಿ ವಿವಿಧ ಹಂತದ ಸೌಲಭ್ಯಗಳನ್ನು ಪಡೆದು ನಿರುದ್ಯೋಗಿಗಳು ಉದ್ಯೋಗ ನಡೆಸಬೇಕು ಎಂದು ಕರೆ ನೀಡಿದರು.

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರ ಸಾವಿರಾರು ಕೋಟಿ ಅನುದಾನ ನೀಡಿದೆ. ಇಂದಿನ ಮೈತ್ರಿ ಸರ್ಕಾರ ಸಹ ಜಿಲ್ಲೆಯ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಹೇಳಿದರು.

ಗಾರ್ಮೆಂಟ್‍ನ ಮಾಲೀಕ ಪ್ರಕಾಶ ಮಾತನಾಡಿ, ಸ್ಕೂಲ್, ಕಾಲೇಜು ಯುನಿಫಾರಂ ಸೇರಿ ವಿವಿಧ ಬಟ್ಟೆಗಳು ಇಲ್ಲಿ ದೊರೆಯುತ್ತವೆ. ಗುಣಮಟ್ಟದ ಬಟ್ಟೆಗೆ ಮೊದಲ ಆದ್ಯತೆ ನೀಡಲಾಗಿದೆ. ಕಮ್ಮಿ ದರದಲ್ಲಿ ಉತ್ತಮ ಬಟ್ಟೆಗಳನ್ನು ಇಲ್ಲಿ ದೊರೆಯುತ್ತವೆ ಎಂದು ಹೇಳಿದರು.

ಶಾಲಾ, ಕಾಲೇಜುಗಳಿಗೆ ಸಂಬಂಧಿಸಿದ ವಸ್ತುಗಳು ಇಲ್ಲಿ ಲಭ್ಯ. ಚಿಲ್ಲರೆ ಮಾರಾಟ ಹಾಗೂ ಹೋಲಸೆಲ್ ಮಾರಾಟ ಇಲ್ಲಿ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾ ಮೇಲ್ವಿಚಾರಕ ಜಯಪಾಲ್, ಡಾ.ಅಶೋಕ, ಪಾಸ್ಟರ್ ರಜನಿಕಾಂತ್, ಜಾರ್ಜ್ ಬುಷ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ