ಪೊಲೀಸರು ಮತ್ತು ಯೋದರ ಮೇಲೆ ಹೆಚ್ಚಾಗುತ್ತಿರುವ ನಕ್ಸಲರ ದಾಳಿ

Indian army cadets take part in a Tactical Continuity Training' exercise at an Officers Training Academy (OTA) in Chennai on March 1, 2018. Cadets graduating from Officer training academy will be posted as lieutenants in the Indian Army. / AFP PHOTO / Arun SANKAR

ರಾಯ್‍ಪುರ್, ಜೂ.24- ಛತ್ತೀಸ್‍ಗಢದಲ್ಲಿ ಪೊಲೀಸರು ಮತ್ತು ಯೋಧರನ್ನು ಗುರಿಯಾಗಿಸಿಕೊಂಡು ನಕ್ಸಲರು ನಡೆಸುತ್ತಿರುವ ದಾಳಿ ಮತ್ತಷ್ಟು ಹೆಚ್ಚಾಗಿದೆ.

ನಕ್ಸಲರು, ಪೊಲೀಸ್ ಕುಟುಂಬ ಸದಸ್ಯರ ಎದುರೇ ಹತ್ಯೆ ಮಾಡಿರುವ ಘಟನೆ ಛತ್ತೀಸ್‍ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಡೆದಿದೆ.

ವಾರಕ್ಕೊಮ್ಮೆ ನಡೆಯುವ ಹಾತ್ ಬಜಾರ್ (ವಾರದ ಮಾರುಕಟ್ಟೆ)ಯಲ್ಲಿ ಈ ಘಟನೆ ನಡೆದಿದ್ದು, ಸಹಾಯಕ ಪೇದೆ ಚೈತುಕಾರಾಮ್ ಮೃತರೆಂದು ಗುರುತಿಸಲಾಗಿದೆ.

ಮಿರ್ತೂರ್‍ನ ನಿವಾಸಿಯಾಗಿದ್ದ ಚೈತುಕಾರಾಮ್ ಅವರು ಕುಟುಂಬ ಸದಸ್ಯರೊಂದಿಗೆ ಮಾರುಕಟ್ಟೆಗೆ ತೆರಳಿದ್ದರು. ಈ ವೇಳೆ ಮಾವೋವಾದಿಗಳ ತಂಡ ಮಾರಕಾಸ್ತ್ರಗಳಿಂದ ಚೈತುಕಾರಾಮ್ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ ಅವರ ಕುಟುಂಬ ಸದಸ್ಯರ ಮೇಲೆ ಯಾವುದೇ ದಾಳಿ ನಡೆಸಿಲ್ಲ.

ಪೊಲೀಸ್ ಪೇದೆಯ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಕೊಲೆಗಡುಕ ನಕ್ಸಲರಿಗಾಗಿ ಶೋಧ ಕಾರ್ಯ ನಡೆಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ