ಬೆಂಗಳೂರು, ಜೂ.23-ಕಲೆಗಳ ಬಿಡು, ಕೃಷ್ಣನ ನಾಡಾಗಿರುವ ಹಂಪಿ ಯಾವ ರಾಜನ ಒಡೆತನದಲ್ಲೂ ಇರಲಿಲ್ಲ. ಜನರಿಗೆ ಅನ್ನ, ಆರೋಗ್ಯ ನೀಡುವ ವಿರೂಪಕ್ಷನೇ ಅಲ್ಲಿನ ಪ್ರಜೆಗಳ ಪಾಲಿನ ಮಹಾರಾಜನಾಗಿದ್ದ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಹೇಳಿದರು.
ದಿ ಮಿಥಿಕ್ ಸೊಸೈಟಿಯಲ್ಲಿ ನಡೆದ ಹಂಪಿ-ವ್ಯಾಟಿಕನ್ ತೌಲನಿಕ ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಂಪಿಯನ್ನೇ ಹೋಲುವ ಸಿಟಿ ಇಟಲಿಯ ವ್ಯಾಟಿಕನ್ ನಗರವಾಗಿದೆ. ಹಂಪಿಯಲ್ಲಿ ವಿರೂಪಾಕ್ಷನನ್ನೇ ದೇವರು ಎಂದು ಭಾವಿಸಿರಲಿಲ್ಲ ನಮ್ಮನ್ನು ಆಳುವ ಮಹಾರಾಜ ಎಂದು ಅಲ್ಲಿನ ಜನರು ಭಾವಿಸಿದ್ದರು. ಅದೇ ರೀತಿ ಇಟಲಿಯ ವ್ಯಾಟಿಕನ್ ನಗರದಲ್ಲಿ ಪೋಪ್ನನ್ನೇ ದೇವರು ಎಂದು ಪೂಜಿಸಲಾಗುತ್ತದೆ. ಇದರಲ್ಲಿ ನಾವು ಸಾಮ್ಯತೆ ಕಾಣಬಹುದು ಎಂದು ಹಂಪಿ ಹಾಗೂ ವ್ಯಾಟಿಕನ್ ಸಿಟಿ ಎರಡನ್ನು ಹೋಲಿಕೆ ಮಾಡಿ ವಿವರಿಸಿದರು.
ರೋಮ್ ನ ಕ್ಯಾಥೋಲಿಕ್ ಜನರಿಗೆ ವ್ಯಾಟಿಕನ್ ಶ್ರೇಷ್ಠ ಸ್ಥಳವಾಗಿದೆ ಎಂದು ಹೇಳಿದರು..
ಹಂಪಿಯ ಸುತ್ತಮುತ್ತ ಪ್ರದೇಶಗಳಲ್ಲಿ ಅನೇಕ ದೊರೆಗಳು ಆಳ್ವಿಕೆ ಮಾಡಿದ್ದಾರೆ. ಆದರೆ ವಿರೂಪಾಕ್ಷನ ಆಸ್ಥಾನ ಹಂಪಿಯನ್ನು ಯಾರು ಕೂಡ ಆಕ್ರಮಣ ಮಾಡಿಕೊಳ್ಳುವ ಪ್ರಯತ್ನ ಮಾಡಿರಲಿಲ್ಲ. ಅಲ್ಲಿನ ಜನರು ಅವರು ಬೆಳೆದ ದವಸ ಧಾನ್ಯಗಳಲ್ಲಿ ಕೃಷ್ಣನಿಗೆ ಪಾಲು ನೀಡುತ್ತಿದ್ದರು, ಇದನ್ನು ಭಕ್ತರಿಗೆ ಹಂಚಲಾಗುತ್ತಿತ್ತು ಎಂದು ಹೇಳಿದರು.
ಡಾ.ಎಂ.ಚಿದಾನಂದಮೂರ್ತಿಯವರು ಹಂಪಿಯನ್ನು ವ್ಯಾಟಿಕನ್ ಸಿಟಿಗೆ ಹೋಲಿಕೆ ಮಾಡಿದಕ್ಕೆ, ವ್ಯಾಟಿಕನ್ ಸಿಟಿಯಲ್ಲಿ ದೈವನಿಲ್ಲ, ಹಂಪಿಯಲ್ಲಿ ದೈವನಿದ್ದಾನೆ ಈ ಹೋಲಿಕೆ ಸರಿಯಲ್ಲಾ ಎಂದು ದಿ ಮಿಥಿಕ್ ಸೊಸೈಟಿ ಉಪಾಧ್ಯಕ್ಷ ಪ್ರೊ.ಕೋಟ್ರೆಶ್ ವಿರೋಧ ವ್ಯಕ್ತಪಡಿಸಿದರು.
ದಿ ಮಿಥಿಕ್ ಸೊಸೈಟಿ ಕಾರ್ಯದರ್ಶಿ ವಿ.ನಾಗರಾಜ್ ಮಾತನಾಡಿ, ಪ್ರಾಚೀನ ಕಾಲದಿಂದಲೂ ಹಂಪಿ ಪಾವಿತ್ರ್ಯದ ಸ್ಥಳವಾಗಿದೆ ಉಳಿದುಕೊಂಡು ಬಂದಿದೆ. ಇಲ್ಲಿ ವಿರೂಪಾಕ್ಷನೇ ಆಳುವ ದೊರೆಯಾಗಿದ್ದ ಎಂದು ಹೇಳಿದರು.
ಇನ್ನೂ ಇಟಲಿಯ ವ್ಯಾಟಿಕನ್ ಸಿಟಿಯನ್ನು ಭಾವನಾತ್ಮಕವಾಗಿ ಹಂಪಿಗೆ ಹೋಲಿಕೆ ಮಾಡಿರುವ ಹಿರಿಯ ಸಂಶೋಧಕ ಚಿದಾನಂದಮೂರ್ತಿಯವರಿಗೆ ಧನ್ಯವಾದ ಸಲ್ಲಿಸಿದರು.
ದಿ ಮಿಥಿಕ್ ಸೊಸೈಟಿ ಅಧ್ಯಕ್ಷ ಪ್ರೊ.ಕೃ.ನರಹರಿ, ಪ್ರೊ.ಜಿ.ಎಸ್.ದೀಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.