ಬೆಂಗಳೂರು,ಜೂ.21- ಹಣಕಾಸು ಹೂಡಿಕೆ, ಅದರ ನಿರ್ವಹಣೆ ಮತ್ತು ಅಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಪ್ರಸಾದ್ ಸಲಹೆ ನೀಡಿದರು.
ಬ್ರಿಕ್ವರ್ಕ್ ಫೈನಾನ್ಸ್ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ 8ನೇ ಫೈನಾನ್ಷಿಯಲ್ ಎನಾಲಿಸ್ಟ್ ಸರ್ಟಿಫಿಕೇಷನ್ ಕಾರ್ಯಕ್ರಮ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ಸಾಲ, ಹೂಡಿಕೆ ಹಾಗೂ ನಿರ್ವಹಣೆ ಬಗ್ಗೆ ಪದವೀಧರರು ಸಮರ್ಪಕ ಮಾಹಿತಿ ಹೊಂದಿರಬೇಕು. ಹೂಡಿಕೆಗಳ ವೇಳೆ ಉಂಟಾಗಬಹುದಾದ ಅಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಐಎಫ್‍ಸಿಐನ ವ್ಯವಸ್ಥಾಪಕ ನಿರ್ದೇಶಕ ಡಾ.ಇಮ್ಮಂಡಿ ಶಂಕರ್ ರಾವ್, ಅಸೆಂಟ್ ಕ್ಯಾಪಿಟಲ್ ಅಡ್ವೈಸರ್‍ನ ಸಿಇಒ ರಾಜ್‍ಕುಮಾರ್, ಬ್ರಿಕ್ವರ್ಕ್ ಫೈನಾನ್ಸ್ ಅಕಾಡೆಮಿಯ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ವಿವೇಕ್ ಕುಲಕರ್ಣಿ, ಸಲಹೆಗಾರ ಕೆ.ಆರ್.ಎಸ್.ಮೂರ್ತಿ, ಡಿ.ರವಿಶಂಕರ್ ಮತ್ತಿತರರು ಇದ್ದರು.