ಬೆಂಗಳೂರು,ಜೂ.19-ಬಿಎಂಟಿಸಿಯ ವೋಲ್ವೊ ಬಸ್ಗಳ ನಷ್ಟದ ಪ್ರಮಾಣ ತಗ್ಗಿಸಲು ಬೆಂಗಳೂರಿನ ಸುತ್ತಮುತ್ತಲಿರುವ ನಗರ, ಪಟ್ಟಣಗಳಿಗೆ ಬಿಎಂಟಿಸಿ ವೋಲ್ವೊ ಬಸ್ ಸೌಲಭ್ಯವನ್ನು ಒದಗಿಸಲು ಚಿಂತನೆ ನಡೆಸಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.
ಬೆಂಗಳೂರು ಸುತ್ತಮುತ್ತಲಿನ ನಗರ ಪಟ್ಟಣಗಳಿಗೆ ವೋಲ್ವೊ ಬಸ್ ಸೌಲಭ್ಯ ಒದಗಿಸುವುದರಿಂದ ಉಂಟಾಗುವ ಸಾಧ್ಯ-ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ. ಆ ಸಮಿತಿ ವರದಿ ನೀಡಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೋಲಾರ, ಮೈಸೂರು, ದಾಣಗೆರೆ ಸೇರಿದಂತೆ ಬೆಂಗಳೂರಿಗೆ ಹತ್ತಿರ ಇರುವ ನಗರ ಪಟ್ಟಣಗಳಲ್ಲಿ ಈ ವೋಲ್ವೊ ಬಸ್ ಸೌಲಭ್ಯ ಪ್ರಾರಂಭಿಸುವುದರಿಂದ ನಷ್ಟದ ಪ್ರಮಾಣವನ್ನು ತಗ್ಗಿಸಬಹುದು. ನಷ್ಟಕ್ಕೆ ಕಾರಣ ಹುಡುಕಲಾಗುತ್ತಿದೆ. ಹಾಗೂ ನಷ್ಟದ ಪ್ರಮಾಣ ತಗ್ಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಮ್ಮಣ್ಣ ತಿಳಿಸಿದರು.