ಜೂ.21ರಂದು ದ್ವಿಚಕ್ರ ವಾಹನಗಳ ಬಹಿರಂಗ ಹರಾಜು

ಬೆಂಗಳೂರು,ಜೂ.19-ಯಶವಂತಪುರ ಸಂಚಾರಿ ಪೊಲೀಸರು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ದ್ವಿಚಕ್ರ ವಾಹನಗಳ ವಾರಸುದಾರರು ಪತ್ತೆಯಾಗದ ಕಾರಣ ಜೂ.21ರಂದು ಬಹಿರಂಗ ಹರಾಜು ಹಾಕಲಾಗುತ್ತಿದೆ.

ವಿವಿಧ ಬಗೆಯ ಬೈಕ್‍ಗಳನ್ನು ಅಂದು ಬೆಳಗ್ಗೆ 11 ಗಂಟೆಗೆ ಯಶವಂಪುರ ಸಂಚಾರಿ ಠಾಣೆ ಆವರಣದಲ್ಲಿ ಬಹಿರಂಗ ಹರಾಜು ಹಾಕಲಾಗುತ್ತಿದ್ದು, ಆಸಕ್ತರು ಭಾಗವಹಿಸಿ ವಾಹನಗಳನ್ನು ಕೊಂಡುಕೊಳ್ಳಬಹುದಾಗಿದೆ.

ವಿವರಗಳಿಗೆ ದೂ: 080-22942661 ಸಂಪರ್ಕಿಸಲು ಕೋರಲಾಗಿದೆ.

ತಿಲಕ್‍ನಗರ:
ವಾರಸುದಾರರು ಪತ್ತೆಯಾಗದ 42 ವಾಹನಗಳನ್ನು ಜೂ.23ರಂದು ತಿಲಕ್‍ನಗರ ಪೊಲೀಸ್ ಠಾಣೆ ಆವರಣದಲ್ಲಿ ಹರಾಜು ಹಾಕಲಾಗುತ್ತಿದೆ. ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರದ ಒಟ್ಟು 42 ವಾಹನಗಳನ್ನು ಅಂದು ಬೆಳಗ್ಗೆ 10 ಗಂಟೆಗೆ ಹರಾಜು ಹಾಕಲಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ