
ಬೆಂಗಳೂರು, ಜೂ.18- ಇತ್ತೀಚೆಗೆ ನಗರ ಅನಾರೋಗ್ಯ ಪೀಡಿತವಾಗುವುತ್ತಿರುವುದರಿಂದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯ, ಪರಿಸರ ಮತ್ತು ಉತ್ತಮ ಸಂಚಾರಕ್ಕೆ ಆದ್ಯತೆ ನೀಡಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಆರ್.ಅಶೋಕ್ ಇಂದಿಲ್ಲಿ ಹೇಳಿದರು.
ಗಣೇಶಮಂದಿರ ವಾರ್ಡ್‍ನಲ್ಲಿ ರಸ್ತೆ ಡಾಂಬರೀಕರಣ, 5ನೆ ಶುದ್ಧ ಕುಡಿಯುವ ನೀರಿನ ಘಟಕ ಮತ್ತಿತರ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರವನ್ನು ಮಾದರಿಯನ್ನಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದ್ದು, ಗಣೇಶಮಂದಿರ ವಾರ್ಡ್‍ನಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ. ಪಾರ್ಕ್‍ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಹೈಟೆಕ್ ಆಸ್ಪತ್ರೆ ನಿರ್ಮಾಣ, ವ್ಯಾಯಾಮ ಶಾಲೆ ಸ್ಥಾಪನೆಗೆ ಗಮನ ಹರಿಸಲಾಗಿದೆ. ಹೀಗಾಗಿ ಕ್ಷೇತ್ರದ ಜನತೆ ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬಿಬಿಎಂಪಿ ಸದಸ್ಯೆ ಲಕ್ಷ್ಮಿ ಉಮೇಶ್, ಬಿಜೆಪಿ ಮುಖಂಡ ಕಬ್ಬಾಳು ಉಮೇಶ್ ಮತ್ತಿತರರು ಹಾಜರಿದ್ದರು.