ಬೆಂಗಳೂರು, ಜೂ.17- ಐಎಂಐ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾದವರು ದಿನ ಕಳೆದಂತೆ ಹೆಚ್ಚಾಗುತ್ತಲೆ ಇದ್ದು, 8ನೇ ದಿನವಾದ ಇಂದೂ ಸಹ ದೂ ನೀಡಲು ಸಾಲುಗಟ್ಟಿ ನಿಂತಿದ್ದದು ಕಂಡುಬಂತು.
ಶಿವಾನಿನಗರದ ಶಿವಾಜಿರಸ್ತೆಯಲ್ಲಿನ ಶಾದಿಮಹಲ್‍ವೊಂದರಲ್ಲಿ ಪೊಲೀಸರು ದೂರು ಸ್ವೀಕರಿಸುತ್ತಿದ್ದು, ಬೆಳಗ್ಗೆಯಿಂದ ಒಂದು ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.
ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ಹೂಡಿಕೆದಾರರಿಂದಲೂ ದೂರು ದಾಖಲಿಸಿಕೊಳ್ಳಲಾಗಿದೆ.
ಇದುವರೆಗೂ ಸುಮಾರು 35 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.
ಈ ಸಂಸ್ಥೆಯನ್ನು ನಂಬಿ ಲಕ್ಷಾಂತರ ರೂ. ಹೂಡಿಕೆ ಮಾಡಿ ಹಣ ಕಳೆದುಕೊಂಡವರ ದುಃಖ ಹೇಳತೀರದಾಗಿದೆ. ಗಳಿಸಿದ್ದರಲ್ಲಿ ಉಳಿಸಿದ ಅಲ್ಪ ಸ್ವಲ್ಪ ಹಣವೂ ಈಗ ಕೈನಲ್ಲಿಲ್ಲ ಎಂದು ದೂರುದಾರರೊಬ್ಬರು ರೋಧಿಸುತ್ತಿದದ್ದು ಕಂಡುಬಂತು.