ನವದೆಹಲಿ: ಭಾರತ-ಪಾಕ್ ವಿಶ್ವಕಪ್ ಹೈವೋಲ್ಟೇಜ್ ಕದನದ ಮೇಲೆ ಎಲ್ಲರ ಗಮನ ನೆಟ್ಟಿರುವ ಬೆನ್ನಲ್ಲೇ ಭಾರತ-ಪಾಕಿಸ್ತಾನದ ಗಡಿಯಲ್ಲಿ ಉಗ್ರರು ಬೃಹತ್ ಟ್ರಕ್ ಬಳಸಿ ದಾಳಿ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಪಾಕಿಸ್ತಾನ ಬಹಿರಂಗಪಡಿಸಿದೆ. ಈ ಹಿನ್ನಲೆಯಲ್ಲಿ ಕಣಿವೆ ರಾಜ್ಯದಲ್ಲಿ ಹೈ ಅಲರ್ಟ್ ಏರ್ಪಡಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾದಲ್ಲಿ ಬೃಹತ್ ಟ್ರಕ್ನಲ್ಲಿ ಸುಧಾರಿತ ಸ್ಫೋಟಕಗಳನ್ನು ಇರಿಸಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಪಾಕ್ ಬೇಹುಗಾರಿಕೆ ಅಧಿಕಾರಿಗಳು ಭಾರತ ಮತ್ತು ಅಮೆರಿಕಕ್ಕೆ ಮಾಹಿತಿ ನೀಡಿದ್ದಾರೆ. ಕಳೆದ ತಿಂಗಳು ತ್ರಾಲ್ನಲ್ಲಿ ಹತನಾದ ಉಗ್ರ ಜಾಕೀರ್ ಮೂಸಾನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದು ಈ ದಾಳಿಯ ಉದ್ದೇಶ ಎಂದು ಹೇಳಲಾಗಿದೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯಿಂದ 2017ರಲ್ಲಿ ಪ್ರತ್ಯೇಕಗೊಂಡಿದ್ದ ಜಾಕೀರ್ ಮೂಸಾ ಅಲ್ಖೈದಾದ ಸಹ ಉಗ್ರ ಸಂಘಟನೆಯಾಗಿ ಘಜ್ವಾತ್ ಉಲ್ ಹಿಂದ್ ಎಂಬ ಉಗ್ರ ಸಂಘಟನೆಯನ್ನು ಸ್ಥಾಪಿಸಿ ಕಾಶ್ಮೀರ ಕಣಿವೆಯಲ್ಲಿ ಕಾರ್ಯಾಚರಿಸುತ್ತಿದ್ದ. ಭದ್ರತಾಪಡೆಗಳು ಈತನನ್ನು ಹತ್ಯೆ ಮಾಡಿದ್ದವು.
High Alert Sounded in Jammu & Kashmir After Pakistan Shares Intel of ‘Probable’ Terror Attack in Pulwama