ಬಿಜೆಪಿಯಿಂದ ಸಿಎಂ ಗೃಹಕಚೇರಿಗೆ ಮುತ್ತಿಗೆ ಯತ್ನ ಹಿನ್ನಲೆ-ಭಾರೀ ಪೊಲೀಸ್ ಭದ್ರತೆ

ಬೆಂಗಳೂರು, ಜೂ.16- ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಪ್ರತಿಪಕ್ಷ ಬಿಜೆಪಿ ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಮುತ್ತಿಗೆ ಹಾಕಲುಯತ್ನಿಸಿದ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.

ಯಾವುದೇ ರೀತಿಹ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆನಂದ್‍ರಾವ್ ವೃತ್ತದಿಂದ ಗೃಹ ಕಚೇರಿ ಕೃಷ್ಣಾದವರೆಗೆ ಸರ್ಪಗಾವಲು ಹಾಕಲಾಗಿತ್ತು.

ಕೆಎಸ್‍ಆರ್‍ಪಿ, ಸಿಎಆರ್ ಸೇರಿದಂತೆ ವಿವಿಧ ಶ್ರೇಣಿಯ ಭದ್ರತೆಯನ್ನು ನಿಯೋಜನೆ ಮಾಡಲಾಗಿತ್ತು.

ಡಿಸಿಪಿಗಳು, ಎಸಿಪಿ, ಇನ್ಸ್‍ಪೆಕ್ಟರ್‍ಗಳು ಸೇರಿದಂತೆ ಆನಂದ್‍ರಾವ್ ವೃತ್ತ, ಶಿವಾನಂದ ವೃತ್ತ, ಚಾಲುಕ್ಯ ವೃತ್ತ, ಗೃಹ ಕಚೇರಿ ಕೃಷ್ಣ ಮತ್ತಿತರ ಕಡೆ ಎಲ್ಲೆಲ್ಲೂ ಪೊಲೀಸರ ಲಾಠಿ ಸದ್ದುಗಳೇ ಕೇಳಿಸುತ್ತಿದ್ದವು.

ಇದಕ್ಕೂ ಮೊದಲು ಕೆಲವು ಕಡೆ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.ವಿನ್ಸರ್‍ಮ್ಯಾನರ್‍ನಿಂದ ಶಿವಾನಂದವೃತ್ತ ಕಡೆಗೆ ಬರುವ ವಾಹನಗಳ ಪ್ರವೇಶಕ್ಕೆ ನಿರ್ಬಂದ ಹಾಕಲಾಗಿತ್ತು. ವಿನ್ಸರ್‍ಮ್ಯಾನರ್‍ನಿಂದ ನೇರವಾಗಿ 7 ಕ್ವಾಟ್ರರ್ಸ್ ಮೂಲಕ ಚಾಲುಕ್ಯ ವೃತ್ತ ಪ್ರವೇಶಿಸಲು ಅವಕಾಶ ನೀಡಲಾಗಿತ್ತು.

ಆನಂದ್‍ರಾವ್ ವೃತ್ತದಿಂದ ಮಹಾರಾಣಿ ಕಾಲೇಜು ಕಡೆ ಬರುವ ವಾಹನಗಳನ್ನೂ ತಡೆಹಿಡಿಯಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ