ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು-ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ್

ಬೆಂಗಳೂರು, ಜೂ.16- ಯುವಜನತೆ ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದು ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜನ್ ಎಂದು ಹೇಳಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ವಿಮಾನ ಕಾರ್ಖಾನೆ ಬಸವಾ ಸಮಿತಿ ವತಿಯಿಂದ ಏರ್ಪಡಿಸಿದ್ದ 35 ನೇ ವರ್ಷದ ಬಸವ ಜಯಂತಿ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು, ಬಸವ ಜಯಂತಿ ಸೇರಿದಂತೆ ಯಾವುದೆ ಉತ್ಸವಗಳು ಮತ್ತು ಆಚರಣೆಗಳು ಕೇವಲ ಆಚರಣೆಗಷ್ಟೇ ಸೀಮಿತವಾಗದೆ ಅರ್ಥಪೂರ್ಣವಾಗಿರಬೇಕು. ಬಸವಣ್ಣವರು ಸೇರಿದಂತೆ ಜ್ಞಾನಿಗಳ, ಸಿದ್ಧಪುರುಷರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳಡಿಸಿಕೊಂಡ ಸನ್ಮಾರ್ಗದಲಲ್ಲಿ ನಡೆಯಬೇಕು ಹಾಗಾದಾಗ ಮಾತ್ರ ಜಯಂತಿಗಳ ಆಚರಣೆ ಅರ್ಥ ಬರುತ್ತದೆ ಎಂದು ತಿಳಿಸಿದರು.

ಅವರ ತತ್ವಗಳನ್ನು ಅಳಡಿಸಿಕೊಂಡಿದ್ದರಿಂದ ನಾನು ಇಂತ ಸ್ಥಾನಕ್ಕೆ ತಲುಪಿದ್ದೇನೆ. ಮೂಢನಂಬಿಕೆ, ಅನಿಷ್ಠ ಪದ್ಧತಿ ವಿರುದ್ದ ಹೋರಾಡಿ ಕಟ್ಟಗಡೆಯ ವ್ಯಕ್ತಿಗೂ ಸಮಾನತೆ ಕಲ್ಪಿಸಿದ ಬಸವಣ್ಣನವರ ತತ್ವ ಸಿದ್ದಾಂತಗಳು ಎಂದೆದಿಗೂ ಪ್ರಸ್ತುತವಾಗಿದೆ ಎಂದು ತಿಳಿಸಿದರು.

ಜಗತ್ತಿನಲ್ಲಿ ಯಾರು ಸಹಾ ಕೆಟ್ಟವರಾಗಿ ಹುಟ್ಟಿರುವುದಿಲ್ಲ, ಆದರೆ ಆಕಸ್ಮಿಕ ಘಟನೆಗಳಿಂದ ಕೆಟ್ಟವರಾಗುತ್ತಾರೆ ಅಂತಹ ವ್ಯಕ್ತಿಗಳ ಬಾಳು ಬೆಳಗಲು ಬಸವಣ್ಣನವರ ವಚನಗಳು ದಾರಿ ದೀಪಾವಾಗಿದೆ ಎಂದರು.

12ನೇ ಶತಮಾನದಲ್ಲಿ ಜಾತಿ,ಧರ್ಮ, ಮತರಹಿತ ಸಮಾಜ ನಿರ್ಮಾಣ ಮಾಡಲು ಬಸವಣ್ಣನವರು ಶ್ರಮಿಸಿದ ಮಹಾನ್ ಸಂತ. ಅಂದಿನ ದಿನಗಳಲ್ಲಿಯೇ ಸ್ತ್ರೀಯರಿಗೆ ಅನುಭವ ಮಂಟಪದಲ್ಲಿ ಅವಕಾಶ ಕಲ್ಪಿಸಿದರು ಅವರ ಚಿಂತನೆಗಳು ಇಂದಿಗೂ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಿದೆ ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ವಚನ ಸಾಹಿತ್ಯದಲ್ಲಿ ಪಿಎಚ್‍ಡಿ ಪದವಿ ಪಡೆದ ಶರಣೆ ಡಾ.ಮಕ್ತುಂಬಿ ಅವರಿಗೆ ಸಮಿತಿ ವತಿಯಿಂದ ಬಸವ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ 10ನೇ ಮತ್ತು 12ನೇ ತರಗತಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗದಗದ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಸಿದ್ದರಾಮ ಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ಆರ್‍ಡಬ್ಲ್ಯು, ಆರ್‍ಡಿಸಿ ವಿಭಾಗದ ಮಹಾವ್ಯವಸ್ಥಾಪಕ ಡಿ.ಜಿ.ಚಲವಾಡೆ, ಸೇವಾ ಸಮಿತಿಯ ಹಿರಿಯ ಗೌರವಾಧ್ಯಕ್ಷ ಹೆಚ್,ಬಿ. ರಾಜಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ