ಬೆಂಗಳೂರು, ಜೂ.13- ಓನಕೆ ಓಬವ್ವ ಮತ್ತು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇ 16ರಂದು ಸಂಜೆ 5ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಮರ್ಥ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ವಿಜಯ ಸಮರ್ಥ, ಅಖಿಲ ಕರ್ನಾಟಕ ಶ್ರೀ ವೈಷ್ಣವ ಮಹಾಸಭಾ ಅಧ್ಯಕ್ಷ ಎನ್.ಎಲ್.ನಾರಾಯಣಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ಕೈಗಾರಿಕ ಮತ್ತು ವಾಣಿಜೋದ್ಯಮ, ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ. ತಿಮ್ಮಯ್ಯನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಮಾಗಡಿ ರಸ್ತೆಯ ಕರ್ನಾಟಕ ಸಹೃದಯದ ಸೇವಾ ಪ್ರತಿಷ್ಠಾನದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವಗೌರವ ಕಾರ್ಯದರ್ಶಿ ಸಿ.ಕೆ.ರಾಮೇಗೌಡ, ನವ ಕರ್ನಾಟಕ ರೈತಸಂಘದ ರಾಜ್ಯಾಧ್ಯಕ್ಷ ದಯಾನಂದ ಚಂದ್ರಶೇಖರ್ ಪಾಟೀಲ್, ಎಎಸ್ಐ ಜಿ.ವಿ.ವೆಂಕಟೇಶ್, ಸಮಾಜ ಸೇವಕರಾದ ಟಿ.ಎನ್. ರಾಧಾಕೃಷ್ಣ, ಪಿ.ಟಿ.ವೆಂಕಟೇಶ್ಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗಹಿಸಲಿದ್ದಾರೆ.
ಸಂಗೀತ ಕ್ಷೇತ್ರದಿಂದ ಜಯಂತಿ ಭಟ್ಟ, ಆಧ್ಯಾತ್ಮಿಕತೆಯಿಂದ ಡಾ. ಸುಮ ಅವರಿಗೆ ಓನಕೆ ಓಬವ್ವ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸೇವಾ ಪ್ರಶಸ್ತಿ ಪುರಸ್ಕøತರು ಸೀನಪ್ಪ (ಶಿಕ್ಷಣ), ಗುಂಪು ಮರದ ಆನಂದ (ಪರಿಸರ), ಡಾ.ಕೆ.ಎಂ. ಮಾಸ್ತಿ ಕರಿಗೌಡ (ಕನ್ನಡ ಚಳವಳಿಗಾರ), ಡಾ.ಯು.ಸಿ. ಚನ್ನೇಗೌಡ (ಕರಾಟೆ), ಡಾ.ಎ.ಪಿ.ಶ್ರೀನಾಥ್ (ಕರಾಟೆ), ಡಾ. ಪ್ರವೀಣ್ ರಾಂಕ (ಕರಾಟೆ), ಡಾ.ಬಿ.ಅಶ್ವತ್ಥ ನಾರಾಯಣಪ್ಪ (ಶಿಕ್ಷಣ), ವೆಂಕಟಸ್ವಾಮಿ (ಶಿಕ್ಷಣ), ಕುಶಾ ಸಮಾಜಸೇವೆ, ಡಿ.ಶಾಂತ (ಶಿಕ್ಷಣ), ಲಕ್ಷ್ಮಣ ವಿ.ಪಟಗರ್ (ಕ್ರೀಡೆ), ಎನ್.ಜಿ.ನವ್ಯ (ಬಾಲಪ್ರತಿಭೆ), ಆರ್.ನಾಗರಾಜರಾವ್ (ಸಾಹಿತ್ಯ), ರಾಕೇಶ್ ಕಾಂಬ್ಳೇಕರ್ (ಯುವಜನ ಸೇವೆ), ಶ್ರೀನಿವಾಸ್ ಕಂಟ್ಲಿ (ಸಮಾಜಸೇವೆ), ಎಸ್.ಎಸ್. ಧೂಪದ (ಶಿಕ್ಷಣ), ರಾಘವೇಂದ್ರ ಅರಕೇರಿ (ಪ್ರತಿಕಾರಂಗ), ದೀಪಾ ಅರಕೇರಿ (ಯೋಗ), ಬಸವರಾಜ್ ಬೀರಾದಾರ್ (ದೇಶ ಸೇವೆ), ಎಂ.ನಾಗರಾಜು (ಕ್ರೀಡೆ ) ಪ್ರಸ್ತಾವನೆಯನ್ನು ಗುಡಿಬಂಡೆ ಮದುಸೂಧನ ನೆರವೇರಿಸಲಿದ್ದಾರೆ.