![PUR_1326](http://kannada.vartamitra.com/wp-content/uploads/2019/06/PUR_1326-571x381.jpg)
ಬೆಂಗಳೂರು,ಜೂ.14- ಸೌತ್ ಕೋರಿಯಾದಲ್ಲಿ ನಡೆದ 12ನೇ ಕೋರಿಯಾ ಓಪನ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಕೆನ್ -ಇ -ಮಾಬುನ್ ಶಿಟೋ ರಿಯು ಕರಾಟೆ ಶಾಲೆಯ ಮಕ್ಕಳು ಮೂರು ಚಿನ್ನದ ಪದಕ, ಆರು ಬೆಳ್ಳಿ ಸೇರಿದಂತೆ ಒಟ್ಟು 18ಪದಕಗಳನ್ನು ಪಡೆದುಕೊಂಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತರಬೇತುದಾರ ಮಂಜುನಾಥ್, ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಒಟ್ಟು 13 ರಾಷ್ಟ್ರಗಳು ಭಾಗವಹಿಸಿದ್ದವು.ನಮ್ಮ ಮಕ್ಕಳು ಒಟ್ಟು 18 ಪದಕಗಳು ಪಡೆಯುವ ಮೂಲಕ ಭಾರತ ಮೂರನೇ ಸ್ಥಾನ ಪಡೆದಿದೆ.ಇದು ನಮ್ಮ ಶಾಲೆ ಹಾಗೂ ನಮ್ಮ ತರಬೇತುದಾರರಿಗೆ ಬಹಳ ಹೆಮ್ಮೆಯ ವಿಷಯ ಎಂದರು.
ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ಸತತ 15 ವರ್ಷಗಳಿಂದ ತರಬೇತಿ ಪಡೆಯುತ್ತಿದ್ದು, ರಮ್ಯಾ, ಪುಷ್ಪಾ, ಹಾಗೂ ಚಂದ್ರಶೇಖರ್ ಅವರು ಮಕ್ಕಳಿಗೆ ಸೂಕ್ತ ತರಬೇತಿ ನೀಡಿ ಜಯಗಳಿಸಲು ಶ್ರಮಿಸಿದ್ದರೆ ಎಂದು ಅಭಿನಂದಿಸಿದರು.
ಪೋಷಕರು ಮಾತನಾಡಿ, ಅನೇಕ ಅಂತಾರಾಷ್ಟ್ರೀಯ ಕಂಪನಿಗಳಿಂದ ಅವಕಾಶಗಳು ಬರುತ್ತಿವೆ. ಆದರೆ, ಆರ್ಥಿಕ ದೌರ್ಬಲ್ಯದಿಂದ ಸ್ಪರ್ಧೆಯಲ್ಲಿ ಮಾಡಲಾಗುತ್ತಿಲ್ಲ. ಅದ್ದರಿಂದ ಮಕ್ಕಳಿಗೆ ಸ್ಥಳೀಯ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಸರ್ಕಾರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.