ನವದೆಹಲಿ: ಪತನಗೊಂಡಿರುವ ಎಎನ್-32 ಯುದ್ಧ ವಿಮಾನದಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದು, ಮೃತದೇಹಗಳೊಂದಿಗೆ ವಿಮಾನದಲ್ಲಿದ್ದ ಕಪ್ಪು ಪೆಟ್ಟಿಗೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.
15 ಜನರನ್ನೊಳಗೊಂಡಿದ್ದ ರಕ್ಷಣಾ ತಂಡ ವಿಮಾನ ಪತನಗೊಂಡಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ವಿಮಾನದಲ್ಲಿದ್ದ ಯಾರೊಬ್ಬರೂ ಬದುಕುಳಿದಿಲ್ಲ ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿತ್ತು. ವಿಮಾನವು ಪತನವಾಗಿದ್ದ ದಟ್ಟ ಅರಣ್ಯದ ಬೆಟ್ಟದಿಂದ 13 ಸಿಬ್ಬಂದಿಗಳ ಮೃತದೇಹಗಳನ್ನು ವಶಪಡಿಸಿಕೊಂಡಿದೆ. ಈ 13 ಜನರ ಭಾವಚಿತ್ರಗಳನ್ನು ಕುಡ ಬಿಡಿಗಡೆಮಾಡಿದೆ.
ವಿಮಾನ ಪತನಗೊಂಡಿರುವ ಪ್ರದೇಶದಿಂದ ಮೃತದೇಹಗಳನ್ನು ಸಾಗಿಸಲು ಹೆಲಿಕಾಪ್ಟರ್ಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದಲ್ಲಿ ಜಿಎಂ ಚಾರ್ಲ್ಸ್, ಎಚ್ ವಿನೋದ್, ಆರ್ ತಾಪ, ಎ ತನ್ವಾರ್, ಎಸ್. ಮೋಹಂತ್ಯ, ಎಂ.ಕೆ. ಗಾರ್ಗ್, ಕೆ.ಕೆ. ಮಿಶ್ರಾ, ಅನೂಪ್ ಕುಮಾರ್, ಎಸ್.ಕೆ.ಸಿಂಗ್, ಪಂಕಜ್, ಪುತಲಿ ಮತ್ತು ರಾಜೇಶ್ ಕುಮಾರ್ ಇದ್ದರು.
ಅಸ್ಸಾಂನಿಂದ ಅರುಣಾಚಲಪ್ರದೇಶದ ಮೆಚುಕ್ ಇಳಿದಾಣದತ್ತ ತೆರಳುತ್ತಿದ್ದ ಎಎನ್-32 ಯುದ್ಧವಿಮಾನ ಹಠಾತ್ತನೆ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಕಡಿದುಕೊಂಡಿತ್ತು. ನಾಪತ್ತೆಯಾದ 8 ದಿನಗಳ ಬಳಿಕ ಅರುಣಾಚಲ ಪ್ರದೇಶದ ಲಿಪೋದ ಉತ್ತರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿತ್ತು.
Bodies Of Air Force Men Killed In An-32 Crash Recovered; Black Box Found