ಐ ಎಂ ಎ ದೋಖಾ ಪ್ರಕರಣದಲ್ಲಿ ಸಚಿವ ಜಮೀರ್ ಅಹ್ಮದ್ ಹೆಸರು ಕೇಳಿ ಬರುತ್ತಿದ್ದಂತೆ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಆರೋಪಿ ಮನ್ಸೂರ್ ಗೆ ರಿಚ್ಮಂಡ್ ಸರ್ಕಲ್ ಬಳಿ ಇರುವ ನನ್ನ ನಿವೇಶನವನ್ನು9 ಕೋಟಿ 38 ಲಕ್ಷಕ್ಕೆ ಮಾರಾಟ ಮಾಡಿದ್ದೇನೆಯೇ ಹೊರತು ಆತನಿಂದ ಯಾವುದೇ ರೀತೀಯ ಹಣ ಪಡೆದಿಲ್ಲ ಎಂದು ತಿಳಿಸಿದರು.
ಜಮೀರ್ ಅಹ್ಮದ್ 5 ಕೋಟಿ ಪಡೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಕುರಿತು ಸ್ಪಷ್ಟಿಕರಣ ನೀಡಿದ ಸಚಿವರು ಆತ ನೀಡಿರುವ 5 ಕೋಟಿ ನಾನು ಮಾರಿದ ಆಸ್ತಿಯ ಮುಂಗಡ ಹಣವೇ ಹೊರತು ಬೇರೆಯದ್ದಲ್ಲ, ಇಲ್ಲಿ ಯಾರೂ ಸತ್ಯ ಹರಿಶ್ಚಂದ್ರರಲ್ಲ ತಪ್ಪು ಮಾಡಿದ್ದರೆ ಒಪ್ಪಿಕೊಳ್ಳಬೇಕೆ ವಿನಃ ಅನಗತ್ಯವಾಗಿ ಬೇರೆಯವರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.
ರಂಜಾನ್ ಸಮಯದಲ್ಲಿ ವಂಚನೆ ಕುರಿತ ಕೆಲವು ವಾಟ್ಸಾಪ್ ಸಂದೇಶಗಳು ನನಗೆ ಬಂದಿದ್ದವು. ಮೇ 26 ರಂದು ಈ ಕುರಿತು ಮನ್ಸೂರ್ ಬಳಿ ಚರ್ಚಿಸಿದ್ದೆ ಹಾಗೂ ಜನರ ಹಣ ವಾಪಸ್ ನೀಡುವಂತೆ ತಾಕೀತು ಮಾಡಿದ್ದೆ ಅದೇ ದಿನ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸಹ ಆತನನ್ನು ಕರೆದು ಚರ್ಚೆ ನಡೆಸಿದ್ದರು. ಅವರಿಗೂ ಆರೋಪಿ ತಲೆಮರೆಸಿಕೊಳ್ಳುವ ಯಾವುದೇ ಸೂಚನೆ ಸಿಕ್ಕಿರಲಿಲ್ಲ ಎಂದು ತಿಳಿಸಿದರು.
ಸಚಿವ ರೋಷನ್ ಬೇಗ್ ನಮ್ಮ ಪಕ್ಷದ ಹಿರಿಯ ನಾಯಕರಾಗಿದ್ದು ತನಿಖೆಯ ನಂತರವಷ್ಟೇ ಸತ್ಯ ಹೊರಬೀಳಲಿದೆ ತನಿಖೆಯನ್ನು ಸಿಬಿಐಗೆ ವಹಿಸುವ ಕುರಿತು ಮುಖ್ಯಮಂತಿಗಳು ತೀರ್ಮಾನಿಸಲಿದ್ದಾರೆ ಸದ್ಯಕ್ಕೆ ಎಸ್ ಐ ಟಿ ತನಿಖೆಯ ಜವಾಬ್ದಾರಿ ವಹಿಸಿಕೊಂಡಿದ್ದು ಆರೋಪಿ ಮನ್ಸೂರ್ ನಿಂದ ಹಣ ಪಡೆದಿರುವ ಆರೋಪ ಸಾಬೀತಾದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೆನೆಂದು ತಿಳಿಸಿದರು.