ಗಂಗಾದೇವಿ ಭೂಲೋಕಕ್ಕೆ ಬಂದ ಬಗ್ಗೆ ತಿಳಿಸುವ ಗಂಗಾದೇವಿಯ ಚರಿತ್ರೆ..*

*ಇಂದು ಗಂಗಾದೇವಿ ಭೂಲೋಕಕ್ಕೆ ಬಂದ ದಿನ.*.
*ಅದರ ಬಗ್ಗೆ ತಿಳಿಸುವ ಗಂಗಾದೇವಿಯ ಚರಿತ್ರೆ..*
✍ಪರಿಕ್ಷೀತ ಮಹಾರಾಜ ಮಗನಿಗೆ ರಾಜ್ಯ ಒಪ್ಪಿಸಿ ಮಂತ್ರಿ ಗಳನ್ನು ಕರೆದು ಸರಿಯಾಗಿ ನೋಡಿಕೊಳ್ಳಲು ಹೇಳಿ
*ತನ್ನ ರಾಜ್ಯ, ಕೋಶ,ಹೆಂಡತಿ, ಮಕ್ಕಳು, ಪ್ರಜೆಗಳು, ಎಲ್ಲಾ ರನ್ನು ಹಾಗು ಅವರ ಮೇಲಿನ ಅಭಿಮಾನ ತ್ಯಾಗ ಮಾಡಿ* *ಗಂಗಾ ತೀರಕ್ಕೆ ಬಂದಿದ್ದಾನೆ.*
ಪರಿಕ್ಷೀತ ರಾಜ ಅಲ್ಲಿ ಬರುವ ಕಾರಣವೇನೆಂದರೆ
*ಮರಣ ಆಗುವ ವಾದರೆ ಗಂಗಾತೀರದಲ್ಲಿ ಆಗಬೇಕು* ಇದಕ್ಕಿಂತ ಪ್ರಾಶಸ್ತ್ಯ ಸ್ಥಳ ಬೇರೆ ಇಲ್ಲ.
*ಗಂಗಾ ನದಿ ಅಂದರೆ ಪರಮಾತ್ಮನ ಪಾದವನ್ನು ತೊಳೆದ ನೀರು.*.
*ತುಳಸಿ ಸಹಿತವಾಗಿ ಹರಿದುಕೊಂಡು ಬರುವಂತಹ ಪಾದೋದಕವೇ ಗಂಗಾನದಿ.*
ಯಾಕೆ ಗಂಗಾನದಿಗೆ ಇಷ್ಟು ಮಹತ್ವ ಅಂದರೆ
*ಭಗವಂತ ವಾಮನ ಅವತಾರ ತಾಳಿದಾಗ ಬಲಿ ಚಕ್ರವರ್ತಿ ಮಾಡುವ ಯಾಗಕ್ಕೆ ಹೋಗಿದ್ದಾನೆ.*
*ಅವನ ಬಳಿ ಮೂರು ಪಾದದಷ್ಟು ಭೂಮಿಯನ್ನು ಬೇಡಿ ತ್ರಿವಿಕ್ರಮ ನಾಗಿ ಬೆಳೆದು ನಿಂತಿದ್ದಾನೆ.*
*ಅವಾಗ ತ್ರಿವಿಕ್ರಮ ರೂಪಿ ಪರಮಾತ್ಮನ ಅಂಗುಷ್ಟದ ನಖ ಬ್ರಹ್ಮಾಂಡದ ಕಟಾಹಕ್ಕೆ ತಗುಲಿತು..*.
*ಆ ಬ್ರಹ್ಮಾಂಡದ ಕಟಾಹ ದಪ್ಪ ಎಷ್ಟು ಇತ್ತು ಅಂದರೆ ನೂರು ಕೋಟಿ ಯೋಜನೆ ದಪ್ಪ ಇತ್ತು.*
*ಅಂತಹ ಬ್ರಹ್ಮಾಂಡದ ಕಟಾಹ ದೊಳಗಿಂದ ನೀರು ಬಂದಿದ್ದು ನೋಡಿ ಬ್ರಹ್ಮ ದೇವರು ಅದನ್ನು ಕಮಂಡಲುವಿನಲ್ಲಿ ಹಿಡಿದು ತ್ರಿವಿಕ್ರಮ ರೂಪಿ ಪರಮಾತ್ಮನ ಪಾದವನ್ನು ತೊಳೆದಿದ್ದಾರೆ.*
*ಅದೇ ಗಂಗಾ ನದಿ..*
ಆಮೇಲೆ ಗಂಗೆ
*ಸಾವಿರಾರು ವರ್ಷಗಳ ಕಾಲ ಸತ್ಯಲೋಕದಲ್ಲಿ ಇದ್ದು ನಂತರ ಶಿಂಶುಮಾರ ಲೋಕಕ್ಕೆ* ಬರುತ್ತಾಳೆ.
*ಅಲ್ಲಿ ಪರಮಾತ್ಮ ಚೇಳಿನ ಆಕಾರದಲ್ಲಿ ಇದ್ದಾನೆ.*
*ಅಲ್ಲಿ ಚೇಳಿನ ಬಾಲದ ಮಧ್ಯ ದಲ್ಲಿ ಇರುವ ಧ್ರುವಮಹಾರಾಜರು ಅದನ್ನು ತೆಗೆದುಕೊಂಡು ಪರಮಾತ್ಮನ ಪಾದೋದಕ, ತ್ರಿವಿಕ್ರಮ ರೂಪಿ ಪರಮಾತ್ಮನ ಪಾದವನ್ನು ತೊಳೆದದ್ದು ಅಂತ ಹೇಳಿ ಭಕ್ತಿ ಇಂದ ಅದನ್ನು ಪ್ರೋಕ್ಷಣೆ ಮಾಡಿಕೊಳ್ಳುವರು.*
ಆ ನಂತರ ಅಲ್ಲಿ ಇಂದ *ಸಪ್ತರ್ಷಿಗಳ ಲೋಕಕ್ಕೆ ಗಂಗಾದೇವಿ ಬರುತ್ತಾಳೆ..*. ಅಲ್ಲಿ ಸಹ ಸಪ್ತರ್ಷಿಗಳು ಪ್ರೋಕ್ಷಣೆ ಮಾಡಿಕೊಂಡು ಧರಿಸಿದ್ದಾರೆ.
*ಆ ನಂತರ ಚಂದ್ರ ಮಂಡಲಕ್ಕೆ ಬಂದು ಆ ನಂತರ ಮೇರು ಪರ್ವತಕ್ಕೆ ಬರುತ್ತಾಳೆ…*
*ಅಲ್ಲಿ ನಾಲ್ಕು ದಿಕ್ಕಿನಲ್ಲಿ ಇಳಿಯುತ್ತಾಳೆ.*
*ಪೂರ್ವ ದಿಕ್ಕಿನಲ್ಲಿ ಸೀತಾ ಎಂದು*
*ದಕ್ಷಿಣ ದಿಕ್ಕಿನಲ್ಲಿ ಅಲಕಾನಂದ ಎಂದು*
*ಪಶ್ಚಿಮ ದಿಕ್ಕಿನಲ್ಲಿ ಚಕ್ಷು*
ಮತ್ತು *ದಕ್ಷಿಣದಲ್ಲಿ ಭದ್ರ* ಅಂತ ನಾಮದಿಂದ ಕರೆಸಿಕೊಂಡು ಹರಿದು ಹೋಗುತ್ತಾಳೆ.
*ಅಲಕನಂದಾ*
*ನದಿಯಾಗಿ ಹರಿದು ಗಂಧಮಾದನ ಪರ್ವತಕ್ಕೆ ಬಂದು ಅಲ್ಲಿಂದ ಮಾನಸ ಸರೋವರ ಕ್ಕೆಬರುತ್ತಾಳೆ..*
*ಅಲ್ಲಿ ತುಂಬಿ ಹರಿದಾಗ ಸರಯೂ ನದಿ ಅಂತ ಕರೆಸಿಕೊಂಡು ಹಿಮಾಲಯ ಪರ್ವತಕ್ಕೆ ಬರುತ್ತಾಳೆ*.
ಅಲ್ಲಿ ಸಹ ಹರಿದಾಗ ಅವಳನ್ನು ಹಿಮವಂತನ ಪುತ್ರಿ ಅಂತ ಸಹ ಕರೆಯುತ್ತಾರೆ.
*ಆ ನಂತರ ದೇವತೆಗಳು ಬಂದು ನಮಗೆಲ್ಲ ಬೇಕು ನೀನು ಅಂತ ಹೇಳಿ ನಮ್ಮ ಲೋಕಕ್ಕೆ ಬಾ ಅಂತ ಕರೆದುಕೊಂಡು ಹೋಗುತ್ತಾರೆ..*.
ಆ ನಂತರ ಸಗರ ಚಕ್ರವರ್ತಿಯ ಅರವತ್ತು ಸಾವಿರ ಮಕ್ಕಳು .ಕಪಿಲ ರೂಪಿ ಪರಮಾತ್ಮ ನಿಗೆ ಅಪಹಾಸ್ಯ, ಮಾಡಿದ ಪರಿಣಾಮವಾಗಿ ಸುಟ್ಟು ಭಸ್ಮ ವಾಗಿದ್ದರು.
ಅವರಿಗೆ ಸದ್ಗತಿ ಆಗಲು ಗಂಗೆ ಭೂಲೋಕಕ್ಕೆ ಹರಿದು ಬರಬೇಕು ಅದಕ್ಕೆ ಭಗೀರಥ ಮಹಾರಾಜ ತಪಸ್ಸು ಮಾಡಿ ಗಂಗಾದೇವಿ ಯನ್ನು ಭೂಲೋಕಕ್ಕೆ ಕರೆಸಿಕೊಂಡ.
*ಜೇಷ್ಠ ಶುದ್ದ ದಶಮಿ ಮಂಗಳವಾರ ದಿನ ಹಸ್ತ ನಕ್ಷತ್ರ ದಲ್ಲಿ ಗಂಗಾದೇವಿಯು ಸ್ವರ್ಗದಿಂದ ಭೂಲೋಕಕ್ಕೆ ಇಳಿದು ಬಂದಳು.*
*ಗಂಗೆಯು ಬರುವ ರಭಸವನ್ನು ನೋಡಿ ತನ್ನ ಜಟೆಯಲ್ಲಿ ಬಂಧಿಸಿ ದವರು ರುದ್ರ ದೇವರು..*.
ಆ *ನಂತರ ಭಗೀರಥ ಅವರ ಬಳಿ ಪ್ರಾರ್ಥನೆ ಮಾಡಿದಾಗ ರುದ್ರ ದೇವರ ಜಟೆಇಂದ ಗಂಗಾದೇವಿ ಭೂಲೋಕಕ್ಕೆ ಬರುತ್ತಾಳೆ..*.
*ಬರುವಾಗ ಜಹ್ನು ಋಷಿಗಳ ಆಶ್ರಮ ವನ್ನು ಕೊಚ್ಚಿ ಕೊಂಡು ಹೋಗುವುದನ್ನು ಕಂಡು ಋಷಿಗಳು ಸಂಪೂರ್ಣ ಪಾನ ಮಾಡುತ್ತಾರೆ..*.
ಮತ್ತೆ ಭಗೀರಥ ಅವರನ್ನು ಒಲಿಸಿಕೊಂಡು ಅವರ ಕಿವಿಯಿಂದ ಗಂಗಾದೇವಿ ಹೊರಬರುತ್ತಾಳೆ.
*ಹಾಗೆ ಬಂದ ಕಾರಣದಿಂದ ಭಾಗೀರಥಿ, ಜಾಹ್ನವಿ ಅಂತ* ಹೆಸರು ಬಂತು.
*ಸಮುದ್ರ ದ್ವಾರ ಪಾತಾಳ ಲೋಕವನ್ನು ಹೋಗಿ ಸಗರ ಮಹಾರಾಜನ ಮಕ್ಕಳಿಗೆ ಉದ್ದಾರ ಮಾಡಿದಳು..*.
*ಹೀಗೆ ಗಂಗೆಗೆ ತ್ರಿಪಥಗಾ ಅಂತ ಹೆಸರು ಬಂದಿತು…*
*ದೇವಲೋಕದಿಂದ* *ಭೂಲೋಕಕ್ಕೆ,*
*ಭೂಲೋಕದಿಂದ ಪಾತಾಳ ಲೋಕಕ್ಕೆ ಹರಿದು ಕೊಂಡು* ಬಂದಳು.
*ಹೀಗೆ ಅಂತರಿಕ್ಷ, ಭೂಮಿ ಮತ್ತು ಪಾತಾಳ ಲೋಕವನ್ನು ಹರಿದು ಬಂದ ಕಾರಣ ತ್ರಿಪಥಗಾ ಅಂತ ಹೆಸರಿನಲ್ಲಿ ಕರೆಯಲ್ಪಟ್ಟಳು..*.
*ದೇವಲೋಕದಲ್ಲಿ ಹರಿಯುವಾಗ ಮಂದಾಕಿನಿ,*
*ಭೂಮಿಯಲ್ಲಿ ಹರಿಯುವಾಗ ಭಾಗೀರಥಿ,*
*ಪಾತಾಳ ಲೋಕಕ್ಕೆ ಹರಿದು ಹೋದಾಗ ಅದೇ ಗಂಗಾದೇವಿ ಗೆ ಭೋಗವತಿ ಅಂತ ಹೆಸರು ಬಂತು.*
*ಅಂದರೆ ಗಂಗಾದೇವಿಯು*
*ಮೇಲಿನ ಲೋಕದಲ್ಲಿ ಇದ್ದರು ಕೆಳಗೆ ಕೆಳಗೆ ಇಳಿಯುತ್ತಾ ಬಂದು ಪಾತಾಳ ಲೋಕವನ್ನು ಸೇರಿ ಯಾರು ಎಷ್ಟು ಕೆಳಮಟ್ಟದಲ್ಲಿ ಇದ್ದರು ಸಹ ಉದ್ದಾರ ಮಾಡುತ್ತೀ ತಾಯಿ ನೀನು ಅಂತ ವರ್ಣನೆಯನ್ನು ಮಾಡುತ್ತಾರೆ..*
*ಸ್ನಾನ ಮಾಡುವಾಗ ನಿತ್ಯ ಗಂಗಾದೇವಿಯ ಸ್ಮರಣೆ, ನಿತ್ಯ ಗಂಗಾಪೂಜೆ ಮಾಡುವದರಿಂದ ಒಳ್ಳೆಯ ದು.*
*ಇಂದು ವಿಶೇಷ ವಾಗಿ ಗಂಗಾದೇವಿಯ ಪೂಜೆ ಮಾಡುವದರಿಂದ, ನಮ್ಮ ದಶವಿಧ ಪಾಪಗಳನ್ನು ಕಳೆಯುವವಳು.*
*ದಶವಿಧ ಪುಷ್ಪಗಳಿಂದ ದಶಬಗೆಯ ಭಕ್ಷ್ಯ ಗಳಿಂದ ದಶ ದೀಪಗಳಿಂದ ಅರ್ಚನೆ ಮಾಡಬೇಕು ಎಂದು ಬಲ್ಲವರು ಹೇಳುತ್ತಾರೆ.*
?ಶ್ರೀ ಕೃಷ್ಣಾರ್ಪಣ ಮಸ್ತು?
*ನಮ್ಮ ಶ್ರೀ ವಿಜಯಪ್ರಭುಗಳು ಗಂಗಾದೇವಿಯ ಬಗ್ಗೆ ಸ್ತೋತ್ರ* ಮಾಡಿದ್ದಾರೆ.ಅದನ್ನು ಇಲ್ಲಿ ಹಾಕಿದ್ದೇನೆ.
*ಶ್ರೀ ಭಾಗೀರತಿತಾಯೆ ಶೃಂಗಾರ ಶುಭಕಾಯೆ*|
*ಶ್ರೀ ಭೂರಮಣನ ತನಯೆ*||
..
*ದೂರದಿಂದಲಿ ನಿನ್ನ ಸ್ಮರಿಸಿದವರ ಪಾಪ*|
*ಹಾರಿ ಹೋಗುವದು ಸಿದ್ದ*|
*ಶ್ರೀ ರಮಣ ವಿಜಯವಿಠ್ಠಲ ರೇಯನ*|
*ಪಾದ ವಾರಿಜ ಪೊಗಳುವಂತೆ ಬುದ್ದಿ ಪಾಲಿಸುವದು*||

 


Devprayag, beauty of nature – where Alaknanda and Bhagirathi rivers meet and take the name Ganga or Ganges River. We can see the color difference of Alaknanda & Bhagirathi.

Birthplace of Ganga river

https://www.youtube.com/watch?v=X67nBvH1qBk
???

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ