ಬೆಂಗಳೂರು, ಜೂ.13- ಗ್ಲೋಬಲ್ ಪ್ರೀಮಿಯಂ ಮೊಬೈಲ್ ಬ್ರಾಂಡ್ ಆಗಿರುವ ಟೆಕ್ನೋ ಈಗ ಫುಟ್ಬಾಲ್ ಅಭಿಮಾನಿಗಳಿಗಾಗಿ ಟೆಕ್ನೋ ರೇಸ್ ಟು ಮ್ಯಾಂಚೆಸ್ಟರ್ ಸಿಟಿ ಎಂಬ ಸ್ಪರ್ಧೆಯನ್ನು ಆರಂಭಿಸಿದೆ.
ಆರೋಗ್ಯವಂತ ಜೀವನ ಶೈಲಿ ಮತ್ತು ಕ್ರೀಡಾಭಿಮಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ವಿಜೇತರಾದವರಿಗೆ ಮ್ಯಾಂಚೆಸ್ಟರ್ನಲ್ಲಿ ನಡೆಯಲಿರುವ ಸಾಂಪ್ರದಾಯಿಕ ಕ್ಲಬ್ಗಳ ಆಟ ವೀಕ್ಷಿಸಲು ಉಚಿತ ಪ್ರಯಾಣ ಹಾಗೂ ಎಲ್ಲ ವೆಚ್ಚಗಳನ್ನು ಭರಿಸುವ ಆಕರ್ಷಕ ಬಹುಮಾನವನ್ನು ರೂಪಿಸಲಾಗಿದೆ.
ಇದರಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು. 60 ದಿನಗಳ ಫಿಟ್ನೆಸ್ ಸವಾಲನ್ನು ಎದುರಿಸುವಂತಹ ದೈಹಿಕ ಕ್ರಿಯಾಶೀಲತೆ ಮತ್ತು ಆರೋಗ್ಯ ಕಾಪಾಡಿಕೊಳ್ಳಬೇಕು. ದಿನಕ್ಕೆ ಕನಿಷ್ಠ 10 ಸಾವಿರ ಹೆಜ್ಜೆ (ನಡಿಗೆ) ಹಾಕಿ ಅಭ್ಯಾಸ ಮಾಡುವ ಹೊಸ ಸ್ಪರ್ಧೆಯನ್ನು ರೂಪಿಸಲಾಗಿದೆ.
ಈಗಾಗಲೇ ನೋಂದಣಿ ಆರಂಭಗೊಂಡಿದ್ದು, ಜು.8 ಕೊನೆಯ ದಿನವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ರೇಸ್ ಟು ಮ್ಯಾನ್ ಸಿಟಿ ಹೆಸರನ್ನು ಟೈಪ್ ಮಾಡಿ ಪಾಲ್ಗೊಳ್ಳಬಹುದು.