ಅಂಬೇಡ್ಕರ್‍ರವರು ಮಹಾನ್ ಬರಹಗಾರರು, ಚಿಂತಕರು, ಸಂಶೋಧಕರಾಗಿದ್ದರು-ಪ್ರೊ.ಜಾಫೆಟ್

ಬೆಂಗಳೂರು, ಜೂ.13- ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸಂವಿಧಾನ ಮೀಸಲಾತಿಗೆ ಸೀಮಿತಗೊಳಿಸಿ, ಕೇವಲ ಒಂದು ವರ್ಗಕ್ಕೆ ಹೋಲಿಕೆ ಮಾಡುತ್ತಿದ್ದೇವೆ. ಇದರಿಂದ ಯುವಕರಲ್ಲಿ ಅನೇಕ ಗೊಂದಲಕ್ಕೆ ಕಾರಣವಾಗುತ್ತಿದೆ ಎಂದು ಪ್ರೊ.ಜಾಫೆಟ್ ಅವರು ಇಂದಿಲ್ಲಿ ಕಳವಳ ವ್ಯಕ್ತಪಡಿಸಿದರು.

ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು ಪರಿಷ್ಕøತ-22 ಸಂಪುಟಗಳ ಬಿಡುಗಡೆ ಮಾಡಿ ಮಾತನಾಡಿದರು.

ಅಂಬೇಡ್ಕರ್ ಅವರು ಮಹಾನ್ ಬರಹಗಾರರು, ಚಿಂತಕರು, ಸಂಶೋಧಕರು, ವಿದ್ವಾಂಸರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಚಳುವಳಿಗಳು ಕೇವಲ ಒಂದು ಜಾತಿಯ ಸೀಮಿತದಲ್ಲಿ ನಡೆಯುತ್ತಿವೆ. ಚಳುವಳಿಗಳು ಮತ್ತು ಹೋರಾಟಗಳು ಸಮಾಜದ ಸಮಸ್ಯೆಗಳು ಹಾಗೂ ಅಭಿವೃದ್ಧಿಯ ಧ್ವನಿಯಾಗಬೇಕು ಎಂದು ಎಚ್ಚರಿಸಿದರು.

ಕೆಲವರು ಅಂಬೇಡ್ಕರ್ ಅವರನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಯುವಕರಲ್ಲಿ ಅಂಬೇಡ್ಕರ್ ಅವರ ತಾತ್ವಿಕ ಸಿದ್ಧಾಂತಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಇನ್ನು ಅವರ ಬದುಕಿನಲ್ಲಿ ಜೂನ್ ತಿಂಗಳು ಬಹಳ ಮಹತ್ವವಾದದ್ದು. ಹಲವು ಪದವಿಗಳನ್ನು ಪಡೆದಿದ್ದು ಇದೇ ಜೂನ್ ತಿಂಗಳಲ್ಲಿ ಎಂದರು.

ಅಂಬೇಡ್ಕರ್ ಪ್ರಪಂಚದಲ್ಲಿ ಐಕಾನ್ ಆಗಿದ್ದರು. ಅವರ ಬರಹ, ಭಾಷಣ 22 ಸಮಗ್ರ ಬರಹಗಳು ಶೋಷಿತರಿಗೆ ಆತ್ಮವಿಶ್ವಾಸ ತುಂಬಿಸಲು, ಮೇಲ್ವರ್ಗದ ಭಾವನೆಯುಳ್ಳವರಿಗೆ ಔಷಧಿಯಾಗಲಿ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಹೇಳಿದರು.

ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷ ಮರುಳು ಸಿದ್ದಪ್ಪ ಮಾತನಾಡಿ, ಅಂಬೇಡ್ಕರ್ ಅವರು ಜೀವನದಲ್ಲಿ ಅಧ್ಯಯನ, ಬರವಣಿಗೆ, ಹೋರಾಟ ರೂಢಿಸಿಕೊಂಡು ಬಂದಂತವರು. ಜಾತಿಪದ್ಧತಿ ಹೋಗಬೇಕು ಎಂಬ ಅಚಲ ಆಶಯ ಹೊಂದಿದ್ದರು. ಬಡತನದ ನಡುವೆಯೂ ಅಧ್ಯಾಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು ಎಂದರು.

ವಿಮರ್ಶಕ, ಸಂಸ್ಕøತಿ ಚಿಂತಕ ಡಾ.ನಟರಾಜ್ ಹುಳಿಯಾರ್ ಸೇರಿದಂತೆ ಅನೇಕ ಬರಹಗಾರರು, ವಿದ್ವಾಂಸರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ