![Air Force Says No Survivors An 32 Jet](http://kannada.vartamitra.com/wp-content/uploads/2019/06/Air-Force-Says-No-Survivors-An-32-Jet-678x376.jpg)
ನವದೆಹಲಿ: ಅರುಣಾಚಲ ಪ್ರದೇಶದ ಲಿಪೋದ ಉತ್ತರದಲ್ಲಿ ಪತನಗೊಂಡಿರುವ ಎಎನ್-32 ಯುದ್ಧ ವಿಮಾನದಲ್ಲಿದ್ದ 13 ಜನರಲ್ಲಿ ಯೊರೊಬ್ಬರೂ ಬದುಕುಳಿದಿಲ್ಲ ಎಂದು ಭಾರತೀಯ ವಾಯುಪಡೆ ಸ್ಪಷ್ಟಪಡಿಸಿದೆ.
ಜೂ. 3ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಾಣೆಯಾಗಿದ್ದ ವಿಮಾನವು ಅರುಣಾಚಲ ಪ್ರದೇಶದಿಂದ 16 ಕಿ.ಮೀ. ದೂರದಲ್ಲಿ ಪತನಗೊಂಡಿತ್ತು. ನಿರಂತರ 8 ದಿನಗಳ ಶೋಧ ಕಾರ್ಯದ ಬಳಿಕ ಮಂಗಳವಾರ ಮಧ್ಯಾಹ್ನದ ವೇಳೆಗೆ ಅರುಣಾಚಲ ಪ್ರದೇಶದ ಲಿಪೋದ ಉತ್ತರದಲ್ಲಿ 16 ಕಿ.ಮೀ. ದೂರದಲ್ಲಿ ಹಾಗೂ ಟಾಟೋದ ಈಶಾನ್ಯ ಭಾಗದಲ್ಲಿ ಅಂದಾಜು 12 ಸಾವಿರ ಅಡಿ ಎತ್ತರದಲ್ಲಿ ಎಎನ್-32 ಯುದ್ಧವಿಮಾನದ ಅವಶೇಷಗಳು ಪತ್ತೆಯಾಗಿದ್ದವು.
ಜೂ. 15ರಂದು ಬುಧವಾರ ವಾಯಪಡೆಯ 9, ಸೇನೆಯ ನಾಲ್ವರು ಮತ್ತು ಇಬ್ಬರು ನಾಗರಿಕ ಪರ್ವತಾರೋಹಿಗಳು ಸೇರಿ 15 ಜನರಿದ್ದ ತಂಡವು ರಕ್ಷಣಾ ಕಾರ್ಯಾಚರಣೆಗಾಗಿ ವಿಮಾನದಲ್ಲಿದ್ದ ಬದುಕುಳಿದಿರುವ ಬಗ್ಗೆ ಪತ್ತೆ ಹಚ್ಚಲು ತೆರಳಿತ್ತು. ಆದರೆ, ಘಟನಾ ಸ್ಥಳ ತಲುಪಲು ಬೆಟ್ಟಗುಡ್ಡಗಳಿಂದ ಕೂಡಿದ ಭೂಪ್ರದೇಶ ಮತ್ತು ಕೆಟ್ಟ ಹವಾಮಾನ ವೈಪರೀತ್ಯದಿಂದಾಗಿ ವಿಳಂಬವಾಗಿತ್ತು. ಆದರೆ, ಯೊರೊಬ್ಬರು ಬದುಕಿಲ್ಲ ಎಂದು ವಾಯುಸೇನೆ ಟ್ವೀಟ್ ಮಾಡಿದೆ.
ವಿಮಾನದಲ್ಲಿ ಜಿಎಂ ಚಾರ್ಲ್ಸ್, ಎಚ್ ವಿನೋದ್, ಆರ್ ತಾಪ, ಎ ತನ್ವಾರ್, ಎಸ್. ಮೋಹಂತ್ಯ, ಎಂ.ಕೆ. ಗಾರ್ಗ್, ಕೆ.ಕೆ. ಮಿಶ್ರಾ, ಅನೂಪ್ ಕುಮಾರ್, ಎಸ್.ಕೆ.ಸಿಂಗ್, ಪಂಕಜ್, ಪುತಲಿ ಮತ್ತು ರಾಜೇಶ್ ಕುಮಾರ್ ಇದ್ದರು.
Air Force Says “No Survivors” From The Wreckage Of An-32 Jet That Crashed