ಲೋಕಸಭಾ ಚುನಾವಣೆ ರದ್ದುಗೊಳಿಸಿ ಮತ್ತೊಮ್ಮೆ ಚುನಾವಣೆ ನಡೆಸುವಂತೆ ಸುಪ್ರೀಂ ಮೆಟ್ಟಿಲೇರಿದ ವಕೀಲ

ನವದೆಹಲಿ: ಲೋಕಸಭಾ ಚುನಾವಣೆಯನ್ನು ರದ್ದುಗೊಳಿಸಿ, ಬ್ಯಾಲೆಟ್​ ಪೇಪರ್​ ಮೂಲಕ ಮತ್ತೊಮ್ಮೆ ಚುನಾವಣೆಯನ್ನು ನಡೆಸುವಂತೆ ಒತ್ತಾಯಿಸಿ ವಕೀಲರೊಬ್ಬರು ಹೊಸದಾದ ಅರ್ಜಿಯೊಂದಿಗೆ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ.

ವಕೀಲ ಎಂ.ಎಲ್​ ಶರ್ಮಾ ಎಂಬುವವರು ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದು, ತಕ್ಷಣವೇ ವಿಚಾರಣೆಯನ್ನು ಕೈಗೆತ್ತಿಕೊಂಡು ಬ್ಯಾಲೆಟ್​ ಪೇಪರ್​ ಮೂಲಕ ಹೊಸದಾಗಿ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದ್ದಾರೆ.

ಜನ ಪ್ರತಿನಿಧಿ (Representation Of Peoples) ಕಾಯಿದೆಯಂತೆ ಚುನಾವಣೆಗಳು ಬ್ಯಾಲೆಟ್​ ಪೇಪರ್​ ಮೂಲಕವೇ ನಡೆಯಬೇಕೆಂದು ತನ್ನ ಹಕ್ಕು ಮಂಡಿಸಿರುವ ವಕೀಲ ಎಂ.ಎಲ್​.ಶರ್ಮಾ, ಇತ್ತೀಚೆಗೆ ನಡೆದ ಚುನಾವಣೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಆದರೆ, ಕೋರ್ಟ್​ ಈ ಅರ್ಜಿಯನ್ನು ಯಾವ ರೀತಿ ಪರಿಗಣಿಸಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ