ಬೆಂಗಳೂರು,ಜೂ.12- ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವು ಬಹಳ ಮುಂದುವರೆದಿದ್ದು, ಪೊಲೀಸ್ ಇಲಾಖೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿರುವವರು ಕಾನ್ಸ್ಟೇಬಲ್ ಹುದ್ದೆಗಳಿಗೆ ಸೇರ್ಪಡೆಗೊಳ್ಳುತ್ತಿದ್ದು, ಅವರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಅನುಕೂಲಕರ ತರಬೇತಿ ಅಗತ್ಯ ಎಂದು ನಗರ ಪೊಲೀಸ್ ಆಯುಕ್ತರಾದ ಸುನೀಲ್ಕುಮಾರ್ ಇಂದಿಲ್ಲಿ ಕಿವಿಮಾತು ಹೇಳಿದರು.
ಪೊಲೀಸ್ ಆಯುಕ್ತರ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ಐ-ಪೋಕಸ್ ಕಂಪನಿ ವತಿಯಿಂದ ಹಮ್ಮಿಕೊಂಡಿದ್ದ ಬೌದ್ಧಿಕ ಸ್ವತ್ತು ಹಕ್ಕು(ಐಪಿಆರ್) ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವಂತಹ ಅಧಿಕಾರಿಗಳಿಗೆ ಇಂತಹ ತರಬೇತಿಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗುವುದರಿಂದ ತರಬೇತಿ ಪಡೆದುಕೊಳ್ಳುವುದು ಅತ್ಯವಶ್ಯಕ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಐ-ಪೋಕಸ್ ಕಂಪನಿಯ ನಿರ್ದೇಶಕಿ ಜ್ಯೋತಿ.ಎಸ್ ಗಾಣಿಗರ್ ಮತ್ತು ಗ್ರೀಫಿನ್ ಐಪಿ ಸರ್ವೀಸಸ್ ನಿರ್ದೇಶಕ ವೀರಾಜ್ ಗೌರವ್, ವಕೀಲರಾದ ಬೃಂದಾ ಕೆ.ವರುಣಾ ಉಪಸ್ಥಿತರಿದ್ದರು.