ವಾಯು ಚಂಡಮಾರುತ ಪರಿಣಾಮ-ರಾಜ್ಯದ ಒಳನಾಡಿಗೆ ಮುಂಗಾರು ಮಳೆ ಪ್ರವೇಷದಲ್ಲಿ ವಿಳಂಬ

ಬೆಂಗಳೂರು,ಜೂ.12- ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯು ಎಂಬ ಚಂಡಮಾರುತದಿಂದ ರಾಜ್ಯದ ಒಳನಾಡಿಗೆ ಮುಂಗಾರು ಮಳೆ ಪ್ರವೇಶಿಸುವುದು ವಿಳಂಬವಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸರೆಡ್ಡಿ ತಿಳಿಸಿದರು.

ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡಿರುವುದನ್ನು ಇನ್ನು ಘೋಷಣೆ ಮಾಡಿಲ್ಲ. ಕೊಡಗು, ಮಲೆನಾಡು ಹಾಗೂ ಕರಾವಳಿ ಭಾಗದ ಮಳೆಯನ್ನು ಆಧರಿಸಿ ಮುಂಗಾರು ಪ್ರವೇಶದ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ.

ವಾಯು ಚಂಡಮಾರುತ ಜೂ.14ರಂದು ಗುಜರಾತ್ ಕರಾವಳಿ ತಲುಪಲಿದೆ. ಆನಂತರ ಎರಡುಮೂರು ದಿನ ಮಳೆಯಾಗುವುದಿಲ್ಲ. ರಾಜ್ಯದ ಒಳನಾಡಿಗೆ ಮುಂಗಾರು ಪ್ರವೇಶ ಮಾಡಲು ನಾಲ್ಕೈದು ದಿನ ಬೇಕಾಗುತ್ತದೆ ಎಂದರು.

ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಶೇ.2ರಷ್ಟು ಕೊರತೆಯಾಗಿದೆ. ಆದರೆ ಕಳೆದ ವರ್ಷ ಶೇ.54ರಷ್ಟು ಹೆಚ್ಚಾಗಿತ್ತು. ದಕ್ಷಿಣ ಒಳನಾಡಿನಲ್ಲಿ ಶೇ.13ರಷ್ಟು ಹಾಗೂಕರಾವಳಿಯಲ್ಲಿ ಶೇ. 73ರಷ್ಟು ಕೊರತೆ ಇದೆ. ಶೇ.74ರಷ್ಟು ತಾಲ್ಲೂಕುಗಳಲ್ಲಿ ಮಳೆ ಕೊರತೆ ಇದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ