ಅಪ್ಪಂದಿರ ದಿನಾಚರಣೆ ಪ್ರಯುಕ್ತ-ಇದೇ 15ರಂದು ಮಕ್ಕಳ ಸಮಾನ ಪೋಷಣೆ ಹಕ್ಕಿಗಾಗಿ ಧರಣಿ

ಬೆಂಗಳೂರು, ಜೂ.12- ಅಪ್ಪಂದಿರ ದಿನಾಚರಣೆ ಪ್ರಯುಕ್ತ 15 ರಂದು ವಿವಿಧ ಬೇಡಿಕೆಗಳನ್ನ ಒತ್ತಾಯಿಸಿ ಟೌನ್ ಹಾಲಿನ ಮುಂದೆ ಮಕ್ಕಳ ಸಮಾನ ಪೆÇೀಷಣೆ ಹಕ್ಕಿಗಾಗಿ ಧರಣಿ ನಡೆಸಲು ಕ್ರಿಸ್ಪ ಸಂಸ್ಥೆ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಕುಮಾರ್ ಜಹಗೀರ್ದಾರ್ ಮಾತನಾಡಿ ತಂದೆಯರಿಂದ ದೂರವಾಗಿ ಬೆಳೆಯುವ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದರು.

ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ವಿಚ್ಛೇದನ ಹಾಗೂ ಬೇರ್ಪಡುತ್ತಿರುವ ಸಂಸಾರಗಳಲ್ಲಿ ಮಕ್ಕಳ ಹಕ್ಕಿಗಾಗಿ ಹೋರಾಡುತ್ತಿದ್ದೇವೆ. ತಮ್ಮ ತಂದೆಯ ಜತೆ ಬಾಂಧ್ಯವ ಉಳಿಸಿ ಅವರ ಜೊತೆ ಒಡನಾಡ ಉಳಿಸಲು ನಮ್ಮ ಸಂಸ್ಥೆ ಬದ್ಧವಾಗಿದೆ ಎಂದು ಹೇಳಿದರು.

5 ಪಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ, 9ರಷ್ಟು ವಿದ್ಯಾಭ್ಯಾಸ ಬಿಡುವ ಸಾಧ್ಯತೆ ,14 ರಷ್ಟು ಅತ್ಯಾಚಾರಿ ಆಗುವ ಸಾಧ್ಯತೆ, 32 ಪಟ್ಟು ಮನೆ ಬಿಟ್ಟು ಓಡಿಹೋಗುವುದು ಈ ತರಹದ ತಂದೆಯಿಂದ ದೂರವಾದ ಮಕ್ಕಳ ಮೇಲೆ ಈ ಪರಿಣಾಮ ಬೀರು ಸಾಧ್ಯತೆಯಿದೆ ಎಂದು ತಿಳಿಸಿದರು.

ಮಕ್ಕಳು ಮತ್ತು ಮಹಿಳಾ ಸಚಿವಾಲಯ ವಿಭಜಿಸಿ ಮಕ್ಕಳಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಬೇಕು, ಸಮಾನ ಪೋಷಣೆ ಕಾನೂನು ಕಡ್ಡಾಯವಾಗಿ ಜಾರಿಯಾಗಬೇಕು, ಹಿರಿಯ ನಾಗರಿಕರಿಗೆ ಹೆಚ್ಚಿನ ಕಾನೂನಿನ ಬಲ ಹಾಗೂ ಬೇರೆ ವಾಸವಿದಲ್ಲಿ ಅವರಿಗೆ ವಾರಾಂತ್ಯದಲ್ಲಿ ಮೊಮಕ್ಕಳ ಜೊತೆ ಇರುವ ಅವಕಾಶ ಮಾಡಿಕೊಡಬೇಕು ಸೇರಿದಂತೆ ಮುಂತಾದ ಬೇಡಿಕೆಗಳನ್ನು  ಈಡೇರಿಸುವಂತೆ ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ