ಆತ ಟೀಮ್ ಇಂಡಿಯಾದ ಗ್ರೇಟ್ ಆಲ್ರೌಂಡರ್, ದಿಟ್ಟ ಹೋರಾಟಗಾರ, ಮೃತ್ಯವನ್ನೇ ಜಯಿಸಿ ಬಂದಿದ್ದ ಮೃತ್ಯುಂಜಯ.. ಎಲ್ಲಕ್ಕೂ ಮಿಗಿಲಾಗಿ ಅಭಿಮಾನಿಗಳ ಪಾಲಿನ ನೆಚ್ಚಿನ ಗ್ರೇಟ್ ಫೈಟರ್. ವಿಶ್ವಕಪ್ ತಂದುಕೊಟ್ಟ ಆತನ ಹೆಸರು ಭಾರತೀಯ ಕ್ರಿಕೆಟ್ ಲೋಕದಲ್ಲಿ ಎಂದಿಗೂ ಅಜರಾಮರ.. ಅವ್ರೇ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್.. ಹಾಗಾದರೇ ಯುವರಾಜ್ ಸಿಂಗ್ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾದ್ರು ಹೇಗೆ.. ಆ ವಿಶ್ವಕಪ್ನ ರೋಚಕ ಜರ್ನಿ ಹೇಗಿತ್ತು.. ಆತ ಮೆಟ್ಟಿನಿಂತ ಸವಾಲುಗಳೇನು ಅನ್ನೋದನ್ನ ಹೇಳ್ತಿವಿ ನೋಡಿ..
28 ವರ್ಷಗಳ ಬಳಿಕ ಮತ್ತೆ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುವ ಎಲ್ಲಾ ಅರ್ಹತೆ ಧೋನಿ ಪಡೆ ಹೊಂದಿತ್ತು. ಸ್ವದೇಶದಲ್ಲಿ ವಿಶ್ವಕಪ್ ನಡೆಯುತ್ತಿದ್ರಿಂದ ಬ್ಲೂ ಬ್ಯಾಯ್ಸ್ ವಿಶ್ವಕಪ್ ಗೆದ್ದೆ ಗೆಲ್ಲುತ್ತೆ ಅನ್ನೋ ಅಚಲ ನಂಬಿಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿತ್ತು. ಆ ನಂಬಿಕೆ ಉಳಿಸಿಕೊಟ್ಟಿದ್ದು, ಕ್ರಿಕೆಟ್ ದೇವರಿಗೆ ಗ್ರೇಟ್ ಸೆಂಡ್ ಆಫ್ ಕೊಟ್ಟಿದರ ಹಿಂದೆ ಯುವರಾಜ್ ಸಿಂಗ್ ಪಾತ್ರ ಬಹು ಮುಖ್ಯವಾಗಿತ್ತು.. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ನಲ್ಲಿ ಮಿಂಚುವ ಮೂಲಕ ಟೀಮ್ ಇಂಡಿಯಾಕ್ಕೆ 28 ವರ್ಷಗಳ ಬಳಿಕ ವಿಶ್ವಕಪ್ ಮುಡುಗೇರಿಸುವಂತೆ ಮಾಡಿದ್ರು..
ಆಂಗ್ಲರ ವಿರುದ್ಧ ಅರ್ಧ ಶತಕ ಬಾರಿಸಿದ ಯುವಿ
ಅದು ಟೀಂ ಇಂಡಿಯಾಗೆ ಎರಡನೇ ವಿಶ್ವಕಪ್ ಪಂದ್ಯ. ಮೊದಲ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಶುಭಾರಂಭ ಮಾಡಿದ್ದ ಧೋನಿ ಪಡೆ ಆಂಗ್ಲರ ಎದುರು ಎರಡನೇ ಸವಾಲು ಎದುರಿಸಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಆಂಗ್ಲರ ವಿರುದ್ಧ ನಡೆದ ಕದನ ಜಿದ್ದಾಜಿದ್ದಿಯಿಂದ ಕೂಡಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 49.5 ಓವರ್ಗಳಲ್ಲಿ 338 ರನ್ ಕಲೆ ಹಾಕಿತು. ಆ ಪಂದ್ಯದಲ್ಲಿ ಸಿಕ್ಸರ್ ಯುವರಾಜ್ ಸಿಂಗ್ ಕೇವಲ 50 ಎಸೆತದಲ್ಲಿ ಅರ್ಧ ಶತಕ ಸಿಡಿಸಿ ತಂಡ ಬಿಗ್ ಸ್ಕೋರ್ ಕಲೆ ಹಾಕಲು ನೆರವಾಗಿದ್ರು. ಈ ಪಂದ್ಯ ರೋಚಕ ಟೈನಲ್ಲಿ ಅಂತ್ಯ ಕಂಡಿತು.
ಕ್ರಿಕೆಟ್ ಶಿಶುಗಳ ಎದುರು ಅಬ್ಬರಿಸಿದ್ದ ಸಿಕ್ಸರ್ ಕಿಂಗ್
ವಿಶ್ವಕಪ್ನ 3ನೇ ಪಂದ್ಯದಲ್ಲಿ ಐರ್ಲೆಂಡ್ ನೀಡಿದ್ದ 208 ರನ್ ಗುರಿಯನ್ನ ಟೀಮ್ ಇಂಡಿಯಾ ಬೆನ್ನತ್ತಿತ್ತು. ಸಾಧಾರಣ ಮೊತ್ತವೇ ಆಗಿದ್ರು ವಿಕೆಟ್ ಕಳೆದುಕೊಂಡು ಟೀಮ್ ಇಂಡಿಯಾ ಸಂಕಷ್ಟದಲ್ಲಿತ್ತು. ಈ ವೇಳೆ ಕ್ರೀಸ್ಗೆ ಇಳಿದ ಯುವರಾಜ್ ಸಿಂಗ್ ತಾಳ್ಮೆಯ ಆಟದ ಮೂಲಕ ಅಜೇಯ ಅರ್ಧಶತಕ ಬಾರಿಸಿ ತಂಡವನ್ನ ಗೆಲುವಿನ ದಡ ಸೇರಿಸುತ್ತಾರೆ.. ಅಲ್ಲದೆ ಬೌಲಿಂಗ್ನಲ್ಲಿ ಮಿಂಚಿದ ಯುವರಾಜ್ 5 ವಿಕೆಟ್ ಪಡೆದು ಮಿಂಚುತ್ತಾರೆ..
ನೆದರ್ಲೆಂಡ್ ವಿರುದ್ಧವೂ ಆಸರೆಯಾದ ಯುವಿ
ಮೊದಲು ಬ್ಯಾಟಿಂಗ್ ಮಾಡಿದ್ದ ನೆದರ್ಲೆಂಡ್, ಟೀಮ್ ಇಂಡಿಯಾಕ್ಕೆ 192 ರನ್ಗಳ ಟಾರ್ಗೆಟ್ ನೀಡುತ್ತೆ. ಈ ಗುರಿಯನ್ನ ಬೆನ್ನತ್ತಿದ್ದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದ್ರು. ಮಧ್ಯಮ ಕ್ರಮಾಂಕದ ವೈಪಲ್ಯದಿಂದಾಗಿ ಸಂಕಷ್ಟಕ್ಕೆ ಸಿಲುಕುವಂತಾಗುತ್ತೆ. ಈ ವೇಳೆ ಮತ್ತೆ ಜವಾಬ್ದಾರಿಯ 50 ರನ್ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗುವ ಜೊತೆಗೆ ಗೆಲುವಿನಲ್ಲೂ ಪ್ರಮುಖ ಪಾತ್ರವಹಿಸುತ್ತಾರೆ..
ವಿಂಡೀಸ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಸಿಡಿಲಮರಿ
ವಿಂಡೀಸ್ ವಿರುದ್ದದ ಪಂದ್ಯದಲ್ಲಿ ಮತ್ತೆ ಟೀಮ್ ಇಂಡಿಯಾ ಸಂಕಷ್ಟದ ಸುಳಿಯಲ್ಲಿರುತ್ತೆ. ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಯುವರಾಜ್ 113 ರನ್ ಬಾರಿಸಿ ತಂಡಕ್ಕೆ ನೆರವಾಗುತ್ತಾರೆ. ಬೌಲಿಂಗ್ನಲ್ಲೂ ಗಮನ ಸೆಳೆಯುವ ಯುವರಾಜ್ ಸಿಂಗ್ 2 ವಿಕೆಟ್ ಪಡೆದು ಗಮನ ಸೆಳೆಯುತ್ತಾರೆ..
ಯುವರಾಜ್ ಸಿಂಗ್ ಅಬ್ಬರಕ್ಕೆ ಆಸಿಸ್ ಉಡೀಸ್
ವಿಶ್ವಕಪ್ ಗೆಲುವಿನ ಕನಸಿನಲ್ಲಿದ್ದ ಟೀಮ್ ಇಂಡಿಯಾಕ್ಕೆ ಈ ಪಂದ್ಯ ಮಹತ್ವದ ಪಂದ್ಯವಾಗಿರುತ್ತೆ. ಆಸ್ಟ್ರೇಲಿಯಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗುತ್ತೆ. ಈ ಪಂದ್ಯದಲ್ಲಿ ಸೋಲಿನ ಬೀತಿಯಲ್ಲಿದ್ದ ತಂಡಕ್ಕೆ ಆಸೆರೆಯಾಗುತ್ತಾರೆ. ಈ ಪಂದ್ಯದಲ್ಲಿ 57 ರನ್ ಬಾರಿಸುವ ಯುವಿ, ಟೀಮ್ ಇಂಡಿಯಾ ಸೆಮಿಫೈನಲ್ಗೆ ಎಂಟ್ರಿಕೊಡುವಂತೆ ಮಾಡ್ತಾರೆ.. ಇನ್ನೂ ಬೌಲಿಂಗ್ನಲ್ಲೂ ಮಿಂಚಿದ್ದ ಯುವಿ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗ್ತಾರೆ.. ನಂತರ ಪಾಕ್ ವಿರುದ್ದದ ಸೆಮಿಫೈನಲ್ನಲ್ಲಿ ಬ್ಯಾಟಿಂಗ್ನಲ್ಲಿ ಫ್ಲಾಫ್ ಆದ್ರು, ಬೌಲಿಂಗ್ನಲ್ಲಿ 2 ವಿಕೆಟ್ ಪಡೆದು ಟೀಮ್ ಇಂಡಿಯಾ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸುತ್ತಾರೆ.
ಫೈನಲ್ ಪಂದ್ಯದಲ್ಲೂ ಇತ್ತು ಅಳಿಲು ಸೇವೆ
ಶ್ರೀಲಂಕಾ ವಿರುದ್ಧ ಫೈನಲ್ ಪಂದ್ಯದಲ್ಲಿ ಯುವರಾಜ್ ಇಳಿಯಬೇಕಿದ್ದ ಸ್ಲಾಟ್ನಲ್ಲಿ ಧೋನಿ ಇಳಿದು ಮ್ಯಾಚ್ ವಿನ್ನರ್ ಆಗ್ತಾರೆ. ಆದ್ರೆ, ಕೊನೆಯಲ್ಲಿ ಬ್ಯಾಟ್ ಬೀಸಿದ ಯುವರಾಜ್ ಅಜೇಯ 21 ರನ್ಗಳ ಅಮೂಲ್ಯ ಕಾಣಿಕೆ ನೀಡುತ್ತಾರೆ. ಅಲ್ಲದೆ ಸಂಗಕ್ಕಾರ, ಸಮರವೀರ ವಿಕೆಟ್ ಉರುಳಿಸುವ ಮೂಲಕ ತಂಡಕ್ಕೆ ಬೌಲಿಂಗ್ನಲ್ಲಿ ಆಸರೆಯಾಗುತ್ತಾರೆ.
2011ರ ವಿಶ್ವಕಪ್ನಲ್ಲಿ ಯವರಾಜ್
2011ರ ವಿಶ್ವಕಪ್ನಲ್ಲಿ 9 ಪಂದ್ಯಗಳನ್ನಾಡಿದ ಯುವರಾಜ್ ಸಿಂಗ್, ಬ್ಯಾಟಿಂಗ್ ವೇಳೆ 362 ರನ್ ಬಾರಿಸಿದ್ರೆ. ಬೌಲಿಂಗ್ನಲ್ಲಿ 15 ವಿಕೆಟ್ ಪಡೆದು ಮಿಂಚುತ್ತಾರೆ. ಈ ವಿಶ್ವಕಪ್ನಲ್ಲಿ 113 ರನ್ ಗರಿಷ್ಟ ಸ್ಕೋರ್ ಆಗಿದೆ..
2011ರ ವಿಶ್ವಕಪ್ನಲ್ಲಿ ಸಾಲಿಡ್ ಫಾರ್ಪಮೆನ್ಸ್ ಕೊಟ್ಟ ಯುವರಾಜ್ ಸಿಂಗ್ ಸರಣಿ ಶ್ರೇಷ್ಟ ಗೌರವಕ್ಕೆ ಪಾತ್ರರಾಗುತ್ತಾರೆ. ಈ ಮೂಲಕ ಟೀಮ್ ಇಂಡಿಯಾ 2ನೇ ಬಾರಿಗೆ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ರು.. ನಂತರ ವಿಶ್ವಕಪ್ನಲ್ಲಿ ಹೋರಾಡಿಂದಂತೆ ಮಹಾಮಾರಿ ಕ್ಯಾನ್ಸರ್ ವಿರುದ್ಧ ಗೆದ್ದು ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಿದ್ರು.. ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ..
2011ರ ವಿಶ್ವಕಪ್ನ್ನ ಯಾವ ಭಾರತೀಯನೂ ಮರೆಯಲು ಸಾಧ್ಯವಿಲ್ಲ. ವಿಶ್ವಕಪ್ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರವಹಿಸಿದ ಯುವಿಯನ್ನ ಯಾವ ಭಾರತೀಯರು ಮರೆಯಲು ಸಾಧ್ಯವಿಲ್ಲ