ಟೀಂ ಇಂಡಿಯಾದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಕೊನೆಗೂ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ಸುದೀರ್ಘ 19 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಯುವಿ ನಿನ್ನೆ ಅಧಿಕೃತವಾಗಿ ತೆರೆಯ ಹಿಂದೆ ಸರಿದಿದ್ದಾರೆ. ತಮ್ಮದೇ ಆದ ಚರಿಷ್ಮಾ ಹೊಂದಿದ್ದ ಯುವರಾಜ್ ಸಿಂಗ್ ಕ್ರಿಕೆಟ್ ವೃತ್ತಿಯಲ್ಲಿ ಸಾಕಷ್ಟು ಏಳು ಬೀಳುಗಳನ್ನ ಕಂಡಿದ್ರು.
ಟೀಂ ಇಂಡಿಯಾದ ಮಧ್ಯಮ ಕ್ರಮಾಂಕಕ್ಕೆ ಹೊಸ ಚರಿಷ್ಮಾ ತಂದುಕೊಟ್ಟಿದ್ದು ಯುವರಾಜ್ ಸಿಂಗ್. ಮಧ್ಯಮ ಕ್ರಮಾಂಕದಲ್ಲಿ ಬರುತ್ತಿದ್ದ ಯುವಿ ನೋಡ ನೋಡುತ್ತಿದ್ದಂತೆ ಎದುರಾಳಿಗಳನ್ನ ಉಡೀಸ್ ಮಾಡಿ ಮ್ಯಾಚ್ ವಿನ್ನರ್ರಾಗಿ ಹೊರ ಹೊಮ್ಮಿದ್ದೆ ಹೆಚ್ಚು. ವಿಶ್ವ ಕ್ರಿಕೆಟ್ಗೆ ಬಂದ ಕೆಲವೇ ವರ್ಷಗಳಲ್ಲಿ ಗೇಮ್ ಫಿನಿಶರ್ರಾಗಿ ಗುರುತಿಸಿಕೊಂಡ ಯುವಿ ತಮ್ಮದೇ ಆದ ಅಭಿಮಾನಿಗಳನ್ನ ಹೊಂದಿದ್ರು.
ಮುಂಬೈನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಯುವಿ ನಿವೃತ್ತಿ ಘೋಷಣೆ ಮಾಡಿದ್ದು ಈ ಮೂಲಕ ಸಿಕ್ಸರ್ಗಳ ಸರದಾರ 22 ಯಾರ್ಡ್ಗಳ ನಂಟನ್ನು ಕೊನೆಗೊಳಿಸಿದ್ದಾರೆ.ಸುದೀರ್ಘ 19 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಯುವಿ ನಿನ್ನೆ ಅಧಿಕೃತವಾಗಿ ತೆರೆಯ ಹಿಂದೆ ಸರಿದಿದ್ದಾರೆ.2017ರಲ್ಲಿ ಯುವರಾಜ್ ಸಿಂಗ್ ಯೋ-ಯೋ ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ದೈಹಿಕ ಪರೀಕ್ಷೆಯಲ್ಲಿ ಪಾಸ್ ಆಗಲು ತಮಗೆ ಕೆಲ ವಾರಗಳ ಕಾಲಾವಕಾಶ ನೀಡಿ, ಖಂಡಿತವಾಗಿ ಪಾಸ್ ಆಗುವೆ ಎಂದು ಯುವಿ ಮನವಿ ಮಾಡಿಕೊಂಡಿದ್ದರು. ಆದರೆ, ಇದಾದ ಬಳಿಕ ನನಗೆ ಪರೀಕ್ಷೆ ಪಾಸ್ ಮಾಡಲು ಬಿಸಿಸಿಐ ಯಾವುದೇ ರೀತಿಯ ಆಹ್ವಾನ ನೀಡಲಿಲ್ಲ ಎಂದು ಯುವಿ ಹೇಳಿದ್ದಾರೆ. ಯೋ-ಯೋ ಪರೀಕ್ಷೆಯಲ್ಲಿ ಪಾಸ್ ಆಗದಿದ್ದರೂ ನಿಮಗೆ ವಿದಾಯದ ಪಂದ್ಯ ಆಡಿಸುವುದಾಗಿ ಬಿಸಿಸಿಐ ಈ ಹಿಂದೆ ಭರವಸೆ ನೀಡಿತಂತೆ. ಆದರೆ, ಇದಕ್ಕೆ ಪ್ರತ್ಯುತ್ತರವಾಗಿ ತಾವೂ ಯೋ-ಯೋ ಪರೀಕ್ಷೆ ಪಾಸ್ ಮಾಡದಿದ್ದರೆ ವಿದಾಯದ ಪಂದ್ಯ ಕೂಡ ಆಡುವುದಿಲ್ಲ.
ದಯವಿಟ್ಟು ಪರೀಕ್ಷೆ ಪಾಸ್ ಮಾಡಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದರಂತೆ. ದೈಹಿಕ ಸಾಮರ್ಥ್ಯ ದೃಢಪಡಿಸಲು ಕೊನೆ ಅವಕಾಶ ನೀಡಿ, ಖಂಡಿತವಾಗಿ ನನ್ನ ಸಾಮರ್ಥ್ಯ ತೋರಿಸುವೆ ಎಂದು ಕೇಳಿಕೊಂಡಿದ್ದರೂ ಬಿಸಿಸಿಐ ಆಡಳಿತ ಮಂಡಳಿ ನನಗೆ ಅವಕಾಶ ನೀಡಲಿಲ್ಲ ಎಂದಿದ್ದಾರೆ.ಇದೇ ವೇಳೆ, ಯಾವುದೇ ಹೆಸರು ತೆಗೆದುಕೊಳ್ಳದೇ ಮಾತನಾಡಿರುವ ಯುವಿ, ಸದ್ಯ ಟೀಂ ಇಂಡಿಯಾ ವಿಶ್ವಕಪ್ ಆಡುತ್ತಿದ್ದು, ಎಲ್ಲ ವಿಷಯದ ಬಗ್ಗೆ ಮುಂದಿನ ದಿನಗಳಲ್ಲಿ ನಾನು ಮಾತನಾಡುವೆ, ನನಗೂ ಒಂದು ಸಮಯ ಬರುತ್ತದೆ ಎಂದಿದ್ದಾರೆ.