ನವದೆಹಲಿ: ನರೇಂದ್ರ ಮೋದಿ ಪ್ರಧಾನಿಯಾಗಿ ಎರಡನೇ ಬಾರಿ ಆಯ್ಕೆಯಾದ ಬೆನ್ನಲ್ಲೇ ಸಚಿವ ಸಂಪುಟ ರಚನೆ ಮಾಡಲಾಗಿತ್ತು. ಆದರೆ 17ನೇ ಲೋಕಸಭೆಯ ಸ್ಪೀಕರ್ ಆಯ್ಕೆ ಆಗಿರಲಿಲ್ಲ. ಇದೀಗ ಬಿಜೆಪಿಯ ಸಂಸದ ವೀರೇಂದ್ರ ಕುಮಾರ್ ಖತಿಕ್ ಅವರನ್ನು ಸ್ಪೀಕರ್ ಆಗಿ ಆಯ್ಕೆಮಾಡಲಾಗಿದೆ.
ಶೀಘ್ರದಲ್ಲೇ ವೀರೇಂದ್ರ ಕುಮಾರ್ ಲೋಕಸಭಾ ಸ್ಪೀಕರ್ ಸ್ಥಾನವನ್ನು ಅಲಂಕರಿಸಲಿದ್ದಾರೆ. ವೀರೇಂದ್ರ ಕುಮಾರ್ ಮಧ್ಯಪ್ರದೇಶದ ಸಾಗರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ಹಿರಿಯ ಬಿಜೆಪಿ ಮುಖಂಡರೂ ಆಗಿದ್ಧಾರೆ. ಈ ಹಿಂದೆ ಮನೇಕಾ ಗಾಂಧಿಯವರನ್ನು ಸಂಪುಟದಿಂದ ಹೊರಗಿಟ್ಟಾಗ, ಈ ಬಾರಿಯ ಸ್ಪೀಕರ್ ಆಗಿ ಅವರನ್ನು ನೇಮಕ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಈ ಊಹಾಪೋಹಕ್ಕೆ ಉತ್ತರ ಸಿಕ್ಕಿದ್ದು, ಸ್ಪೀಕರ್ ಸ್ಥಾನಕ್ಕೆ ವೀರೇಂದ್ರ ಕುಮಾರ್ ಆಯ್ಕೆಯಾಗಿದ್ದಾರೆ.
ವೀರೇಂದ್ರ ಕುಮಾರ್ ಏಳು ಬಾರಿ ಸಂಸದರಾಗಿ ಆಯ್ಕೆಯಾದ ಅನುಭವ ಹೊಂದಿದ್ದಾರೆ.