ಟೀಂ ಇಂಡಿಯಾದ ಡ್ಯಾಶಿಂಗ್ ಓಪನರ್ ಶಿಖರ್ ಧವನ್ ತಮ್ಮ ತಾಕತ್ತೆನೆಂಬುದನ್ನ ಪ್ರೂವ್ ಮಾಡಿದ್ದಾರೆ. ಕಾಂಗರೂಗಳ ವಿರುದ್ಧದ ಎರಡನೇ ವಿಶ್ವಯುದ್ದದ್ದಲ್ಲಿ ಧವನ್ ಜಬರ್ಧಸ್ತ್ ಬ್ಯಾಟಿಂಗ್ ಮಾಡಿ ಕೊನೆಗೂ ತಮ್ಮ ಫಾರ್ಮ್ ಪ್ರೂವ್ ಮಾಡಿದ್ರು. ನಂತರ ಕ್ಯಾಪ್ಟನ್ ಕೊಹ್ಲಿ ಜೊತೆ 93 ರನ್ಗಳ ಜೊತೆಯಾಟ ಆಡಿ ಫಿಂಚ್ ಪಡೆಗೆ ಬಿಗ್ ಟಾರ್ಗೆಟ್ ಕೊಡುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ರು.
ಪಂದ್ಯಕ್ಕೂ ಮುನ್ನ ಹಿಟ್ಮ್ಯಾನ್ ರೋಹಿತ್ ಶರ್ಮಾ ಆಸಿಸ್ನ್ನ ಉಡೀಸ್ ಮಾಡ್ತಾರೆ ಟೀಂ ಇಂಡಿಯಾ ಅಭಿಮಾನಿಗಳು ಭಾವಿಸಿದ್ರು. ಆದರೆ ಡ್ಯಾಶಿಂಗ್ ಓಪನರ್ ಧವನ್ ಈ ಲೆಕ್ಕಚಾರಗಳನ್ನ ಉಲ್ಟಾ ಮಾಡಿದ್ರು. ಬನ್ನಿ ಹಾಗದ್ರೆ ಒವೆಲ್ ಅಂಗಳದಲ್ಲಿ ಧವನ್ ಬ್ಯಾಟಿಂಗ್ ವೈಭವ ಹೇಗಿತ್ತು ಅನ್ನೋದನ್ನ ನೋಡೋಣ.
ರೋಹಿತ್ ಜೊತೆ 127 ರನ್ ಜೊತೆಯಾಟ
ಸೌತ್ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಕೇವಲ 8 ರನ್ ಗಳಿಸಿ ಫ್ಲಾಪ್ ಆಗಿದ್ದ ಗಬ್ಬರ್ ಸಿಂಗ್ ಧವನ್. ನಿನ್ನೆ ಒವೆಲ್ ಅಂಗಳದಲ್ಲಿ ಡೆಡ್ಲಿ ಬ್ಯಾಟಿಂಗ್ ಮಾಡಿ ಟೀಕೆಗಳಿಗಳಿಗೆಲ್ಲ ಬ್ಯಾಟ್ನಲ್ಲೆ ಉತ್ತರ ಕೊಟ್ರು.
ರನ್ ಹೊಳೆಯೇ ಹರಿಯುವ ಒವೆಲ್ ಅಂಗಳದಲ್ಲಿ ಶಿಖರ್ ಧವನ್ ರನ್ ಶಿಖರವನ್ನ ಕಟ್ಟಿ ಆಸಿಸ್ ಪಾಲಿಗೆ ರಿಯಲ್ ವಿಲನ್ ಆದ್ರು. ಹಿಟ್ಮ್ಯಾನ್ ರೋಹಿತ್ ಜೊತೆ ಓಪನರ್ರಾಗಿ ಕಣಕ್ಕಿಳಿದ ಡೆಲ್ಲಿ ಬ್ಯಾಟ್ಸ್ಮನ್ ಧವನ್ 53 ಎಸೆತದಲ್ಲಿ ಅರ್ಧ ಶತ ಬಾರಿಸಿದ್ರು. ಓಪನರ್ ರೋಹಿತ್ ಜೊತೆ ಮೊದಲ ವಿಕೆಟ್ಗೆ 127 ರನ್ ಕಲೆ ಹಾಕಿದ್ರು.
ಕ್ಯಾಫ್ಟನ್ ಕೊಹ್ಲಿ 93 ರನ್ಗಳ ಬೊಂಬಾಟ್ ಆಟ
ರೋಹಿತ್ ಜೊತೆ ಶತಕದ ಜೊತೆಯಾಟದ ನಂತರ ಧವನ್, ಮೂರನೇ ಸ್ಲಾಟ್ನಲ್ಲಿ ಬಂದ ಕೊಹ್ಲಿ ಜೊತೆ ಬೊಂಬಾಟ್ ಬ್ಯಾಟಿಂಗ್ ಮಾಡಿದ್ರು. ಕೊಹ್ಲಿ ಸಾಥ್ ಪಡೆದ ಧವನ್ ಒವೆಲ್ ಅಂಗಳದ ಮೂಲೆ ಮೂಲೆಗೂ ಚೆಂಡಿನ ಪರಿಚೆಯ ಮಾಡಿಕೊಟ್ಟು ಬೌಂಡರಿಗಳ ಸುರಿಮಳೆಗೈದ್ರು.
ಒವೆಲ್ ಅಂಗಳದಲ್ಲಿ ಶತಕ ಬಾರಿಸಿದ ಶತಕ ವೀರ ಧವನ್
ಓವೆಲ್ ಅಂಗಳದಲ್ಲಿ ಆಸಿಸ್ ಬೌಲಿಂಗ್ ಅಟ್ಯಾಕ್ನ್ನ ಧೂಳಿಪಟ ಮಾಡಿದ ಧವನ್ 95 ಎಸೆತದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ್ರು. ಈ ಶತಕ ದೊಂದಿಗೆ ಏಕದಿನ ಕ್ರಿಕೆಟ್ನಲ್ಲಿ 27ನೇ ಶತಕ ಬಾರಿಸಿದ ಸಾಧನೆ ಮಾಡಿದ್ರು. ಇದರ ಜೊತೆಗೆ ವೆಸ್ಟ್ಇಂಡೀಸ್ನ ಕ್ರಿಕೆಟ್ ಲೆಜೆಂಡ್ ನಂತರ ಓವೆಲ್ ಅಂಗಳದಲ್ಲಿ ನಾಲ್ಕನೆ ಏಕದಿನ ಶತಕ ಬಾರಿಸಿದ ಎರಡನೇ ವಿಧೇಶಿ ಬ್ಯಾಟ್ಸ್ಮನ್ ಎಂಬ ಹಿರಿಮೆಗೂ ಧವನ್ ಪಾತ್ರರಾದ್ರು.
ಇಂಗ್ಲೆಂಡ್ ನೆಲದಲ್ಲಿ ಸಾವಿರ ರನ್ ಪೂರೈಸಿದ ಧವನ್
ಓವೆಲ್ ಅಂಗಳದಲ್ಲಿ ಶತಕ ಬಾರಿಸಿದ ಧವನ್ ಆಂಗ್ಲರ ನಾಡಲ್ಲಿ ಸಾವಿರ ರನ್ ಪೂರೈಸಿದ ಗೌರವಕ್ಕೂ ಧವನ್ ಪಾತ್ರರಾದ್ರು. ಈ ಸಾಧೆನೆ ಮಾಡಿದ 4ನೇ ಭಾರತೀಯ ಆಟಗಾರನೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಸವ್ಯಸಾಚಿ ಸಚಿನ್ ತೆಂಡೂಲ್ಕರ್, ಗ್ರೇಟ್ ವಾಲ್ ರಾಹುಲ್ ದ್ರಾವಿಡ್ ಮತ್ತು ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಈ ಸಾಧನೆ ಮಾಡಿದ್ರು. ಇದೀಗ ಸಾಲಿಗೆ ಧವನ್ ಕೂಡ ಸೇರಿದ್ದಾರೆ.
ಆಸಿಸ್ ಎದುರು 109 ಎಸೆತಗಳನ್ನ ಎದುರಿಸಿದ ಧವನ್ ಒಟ್ಟು 117 ರನ್ ಕಲೆ ಹಾಕಿದ್ರು. ಒಟ್ಟು 16 ಬೌಂಡರಿಗಳನ್ನ ಬಾರಿಸಿದ 107.33 ಸ್ಟ್ರೈಕ್ ಪಡೆದ್ರು.
ಅರ್ಧ ಶತಕ ಬಾರಿಸಿ ತಂಡದ ಸ್ಕೋರ್ ಹೆಚ್ಚಿಸಿದ ಕೊಹ್ಲಿ
ಧವನ್ ಅಲ್ಲದೇ ತಂಡದ ಸ್ಕೋರ್ ಹೆಚ್ಚಿಸಲು ನೆರವಾದ ಬ್ಯಾಟ್ಸ್ಮನ್ ಅಂದ್ರೆ ಅದು ಕ್ಯಾಪ್ಟನ್ ಕೊಹ್ಲಿ, ಧವನ್ ಜೊತೆ ಅಬ್ಬರದ ಬ್ಯಾಟಿಂಗ್ ಮಾಡಿದ ಕೊಹ್ಲಿ ತಮ್ಮ ವೈಯಕ್ತಿಕ ರನ್ಗಿಂತ ತಂಡದ ಸ್ಕೋರ್ ಕಡೆ ಹೆಚ್ಚಿನ ಗಮನ ಕೊಟ್ರು. 55 ಎಸೆತದಲ್ಲಿ ಅರ್ಧ ಶತಕ ಬಾರಿಸಿದ ಕೊಹ್ಲಿ ನಂತರ 77 ಎಸೆತದಲ್ಲಿ 4 ಬೌಂಡರಿ 2 ಸಿಕ್ಸರ್ ನೆರವಿನಿನೊಂದಿಗೆ ಒಟ್ಟು 82 ರನ್ ಕಲೆ ಹಾಕಿದ್ರು.
ಏನೇ ಆಗಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಡ್ಯಾಶಿಂಗ್ ಓಪನರ್ ಶಿಖರ್ ಧವನ್ ಡೆಡ್ಲಿ ಬ್ಯಾಟಿಂಗ್ ಮಾಡಿ ಶತಕ ಬಾರಿಸಿ ಕ್ಯಾಪ್ಟನ್ ಕೊಹ್ಲಿಗಿದ್ದ ತಲೆ ನೋವನ್ನ ಕೊನೆಗೂ ದೂರ ಮಾಡಿದ್ದಾರೆ.